/newsfirstlive-kannada/media/media_files/2025/12/27/bengaluru-2025-12-27-07-52-44.jpg)
ಬೆಂಗಳೂರಿನಲ್ಲಿ ತಡರಾತ್ರಿ ಯುವತಿಗೆ ಪುಂಡರು ಕಿರುಕುಳ ನೀಡಿದ್ದಾರೆ. ಡಿಸೆಂಬರ್ 25 ರಂದು ರಾತ್ರಿ 12 ಗಂಟೆ ಸುಮಾರಿಗೆ ಬಿಟಿಎಂ ಲೇ ಔಟ್ ನಲ್ಲಿ ಘಟನೆ ನಡೆದಿದೆ.
ಯುವತಿ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಹೋಗುತ್ತಿದ್ದಳು. ಇತ್ತ ಒಂದೇ ಬೈಕ್‌ನಲ್ಲಿ ಬಂದು ಮೂವರು ಪುಂಡರು ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡಿದ್ದಾರೆ. ಪುಂಡರು ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಬೇಕು ಅಂತಾನೆ ಬೈಕ್ ಮುಂದೆ ಹೋಗಿ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾರೆ. ಸುಮಾರು ಎರಡು ಕಿಲೋ ಮೀಟರ್ ದೂರದವರೆಗೂ ಯುವತಿಯನ್ನ ಫಾಲೋ ಮಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಯುವತಿಗೆ ಕಿರುಕುಳ ಕೊಡೋ ವೀಡಿಯೋವನ್ನ ಕಾರಿನಲ್ಲಿ ಹಿಂದೆ ಬರ್ತಾ ಇದ್ದ ವ್ಯಕ್ತಿಯಿಂದ ಚಿತ್ರೀಕರಣ ಮಾಡಿದ್ದಾರೆ. ಬಳಿಕ ವೀಡಿಯೋ ಸಮೇತ ಪೊಲೀಸರಿಗೆ ಎಕ್ಸ್‌ನಲ್ಲಿ ಟ್ಯಾಕ್ ಮಾಡಿ, ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಸುದ್ದುಗುಂಟೆ ಪಾಳ್ಯ ಪೊಲೀಸರು ಉತ್ತರ ನೀಡಿದ್ದು, ಕಿಡಿಗೇಡಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈಗಾಗಲೇ ಬೈಕ್ ನಂಬರ್ ಪತ್ತೆ ಮಾಡಿದ್ದು, ಮೂವರನ್ನು ವಿಚಾರಣೆ ಮಾಡ್ತೀವಿ ಎಂದಿದ್ದಾರೆ.
ಇದನ್ನೂ ಓದಿ:Mahindra XUV 400: ಮಹೀಂದ್ರಾ ಕಾರಿನ ಮೇಲೆ ರೂ. 4.45 ಲಕ್ಷ ರಿಯಾಯಿತಿ! ಬಂಪರ್ ಆಫರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us