Advertisment

ರೇಪ್ ಕೇಸ್ ಹಿಂತೆಗೆದುಕೊಳ್ಳಲು ಜೈಲಿನಿಂದಲೇ ಆರೋಪಿಯಿಂದ ಒತ್ತಡ: ಪೋನ್ ಕಾಲ್ ಮಾಡಿ ಒತ್ತಡ ಹೇರಿದ ಆರೋಪಿ ಮ್ಯಾಥೀವ್‌

ಬೆಂಗಳೂರಿನಲ್ಲಿ ಮಹಿಳೆ ಮೇಲೆ ರೇಪ್ ಮಾಡಿ ಜೈಲು ಸೇರಿರುವ ಮ್ಯಾಥೀವ್ ಈಗ ಜೈಲಿನಿಂದಲೇ ಸಂತ್ರಸ್ಥ ಮಹಿಳೆಗೆ ಕೇಸ್ ಹಿಂತೆಗೆದುಕೊಳ್ಳಲು ಒತ್ತಡ ಹೇರಿದ್ದಾನೆ. ಕೋರ್ಟ್ ಮುಂದೆ ಸುಳ್ಳು ಹೇಳುವಂತೆ ಒತ್ತಡ ಹೇರಿದ್ದಾನೆ. ಜೈಲಿನಲ್ಲೇ ಆರೋಪಿಗೆ ಮೊಬೈಲ್ ಸಿಕ್ಕಿದ್ದೇಗೆ? ಎಂಬ ಪ್ರಶ್ನೆಯೂ ಉದ್ಭವವಾಗಿದೆ.

author-image
Chandramohan
MATHEW SURRENDER TO POLICE

ಜೈಲಿನಿಂದಲೇ ಸಂತ್ರಸ್ಥ ಮಹಿಳೆಗೆ ಪೋನ್ ಕಾಲ್‌ ನಲ್ಲಿ ಒತ್ತಡ!

Advertisment
  • ಜೈಲಿನಿಂದಲೇ ಸಂತ್ರಸ್ಥ ಮಹಿಳೆಗೆ ಪೋನ್ ಕಾಲ್‌ ನಲ್ಲಿ ಒತ್ತಡ!
  • ರೇಪ್ ಕೇಸ್ ಹಿಂತೆಗೆದುಕೊಳ್ಳಲು ಒತ್ತಡ ಹೇರಿದ ಮ್ಯಾಥೀವ್‌
  • ವಿಡಿಯೋಗಳನ್ನು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವಿಡಿಯೋ ಎಂದು ಹೇಳಲು ಒತ್ತಡ
  • ಸಂತ್ರಸ್ಥೆಯನ್ನು ಮದುವೆಯಾಗಲು ಒಪ್ಪದ ಆರೋಪಿ ಮ್ಯಾಥೀವ್‌

ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳಿಂದ  ಮೊಬೈಲ್ ಬಳಕೆ  ಮುಂದುವರಿದಿದೆ. ರೇಪ್  ಸಂತ್ರಸ್ತೆಗೆ ಜೈಲಿನಿಂದಲೇ ಕಾಲ್ ಮಾಡಿದ ಆರೋಪಿ ಮ್ಯಾಥಿವ್ ಬೆದರಿಕೆ ಹಾಕಿದ್ದಾನೆ.  ಕೋರ್ಟ್ ನಲ್ಲಿ ಸುಳ್ಳು ಹೇಳುವಂತೆ, ಕೇಸ್ ವಾಪಸ್ ತೆಗೆದುಕೊಳ್ಳಲು ಒತ್ತಡ  ಹೇರಿದ್ದಾನೆ.  ನ್ಯೂಸ್ ಫಸ್ಟ್ ಬ್ರೇಕ್ ಮಾಡಿದ ಎಕ್ಸ್ ಕ್ಲೂಸಿವ್ ಸುದ್ದಿಯ ಮೆಗಾ ಫಾಲೋ ಅಪ್ ಇದು.  ಪಿ.ಟಿ. ಟೀಚರ್ ಮ್ಯಾಥಿವ್ ನ ಕರ್ಮಕಾಂಡ ಬಯಲು ಮಾಡಿದ್ದು ನ್ಯೂಸ್ ಫಸ್ಟ್ .  ಸೆಫ್ಟೆಂಬರ್ 23ರಂದು ನ್ಯೂಸ್ ಫಸ್ಟ್ ಬ್ರೇಕ್‌ಮಾಡಿದ EXCLUSIVE ಸುದ್ದಿ ಇದು . ಸ್ಕೂಲ್ ಮಕ್ಕಳಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿದ್ದ ಮ್ಯಾಥಿವ್, ಬಳಿಕ ಅದನ್ನು ಬ್ಲಾಕ್ ಮೇಲ್ ಮಾಡಲು ಬಳಸಿಕೊಂಡಿದ್ದ. 
ನ್ಯೂಸ್ ಫಸ್ಟ್ ಈ ಸುದ್ದಿಯನ್ನು  ಬ್ರೇಕ್ ಮಾಡಿದ ನಂತರ  ಪೊಲೀಸ್ ಠಾಣೆಯಲ್ಲಿ  FIR ದಾಖಲಾಗಿತ್ತು. 
ಇದೀಗ  ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಮ್ಯಾಥೀವ್ ಜೈಲಿನಿಂದಲೇ ಸಂತ್ರಸ್ಥ ಮಹಿಳೆಗೆ ಪೋನ್ ಕಾಲ್ ಮಾಡಿದ್ದಾನೆ. ಪೋನ್ ನಲ್ಲಿ ಬೆದರಿಕೆ ಹಾಕಿದ್ದಾನೆ.  ನವೆಂಬರ್ 28ಕ್ಕೆ  ಹೈಕೋರ್ಟ್ ನಲ್ಲಿ  ಕೇಸ್ ನಲ್ಲಿ ಆರೋಪಿ ಮ್ಯಾಥೀವ್ ಜಾಮೀನು ಅರ್ಜಿಯ ವಿಚಾರಣೆ ಇದೆ. ಈಗಾಗಲೇ ಕೆಳ ಹಂತದ ಕೋರ್ಟ್ ನಲ್ಲಿ ಆರೋಪಿಯ ಜಾಮೀನು ಅರ್ಜಿ ವಜಾ ಆಗಿದೆ . ಹೈಕೋರ್ಟ್ ನಲ್ಲಿ ನವಂಬರ್ 28 ಕ್ಕೆ ಜಾಮೀನು ಅರ್ಜಿ ವಿಚಾರಣೆಗೆ ಬರುತ್ತಿದೆ. 
ಈ ಹಿನ್ನೆಲೆಯಲ್ಲಿ  ಸಂತ್ರಸ್ತೆಗೆ ಕಾಲ್ ಮಾಡಿದ ಮ್ಯಾಥಿವ್ , ಕೋರ್ಟ್ ನಲ್ಲಿ  ಉಲ್ಟಾ ಸ್ಟೇಟ್ ಮೆಂಟ್ ಕೊಡುವಂತೆ ಒತ್ತಾಯ ಮಾಡಿದ್ದಾನೆ.  ಜಡ್ಜ್ ಮುಂದೆ ಸುಳ್ಳು ಹೇಳುವಂತೆ ಮ್ಯಾಥಿವ್ ಹೇಳಿದ್ದಾನೆ. ಜೈಲಿನಿಂದಲೇ ಕಾಲ್ ಮಾಡಿ ಮಾತಾಡಿರುವ   EXCLUSIVE ಆಡಿಯೋ‌ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ.  ಪೊಲೀಸರನ್ನು  ದುಡ್ಡು ಕೊಟ್ಟು ಡೀಲ್ ಮಾಡಿದ್ದೇನೆಂದು  ಮ್ಯಾಥಿವ್ ಹೇಳಿದ್ದಾನೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Threat from Bangalore Jail
Advertisment
Advertisment
Advertisment