/newsfirstlive-kannada/media/media_files/2025/12/24/malleshwara-acp-lokayukuta-trap-2025-12-24-16-51-00.jpg)
ಮಲೇಶ್ವರಂ ಉಪ ವಿಭಾಗದ ಎಸಿಪಿ ಲೋಕಾಯುಕ್ತ ಬಲೆಗೆ…ಬಿದ್ದಿದ್ದಾರೆ. 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಎಸಿಪಿ ಕೃಷ್ಣಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಸಿಪಿ ಕಚೇರಿಯಲ್ಲೇ ಲೋಕಾಯುಕ್ತ ಟ್ರ್ಯಾಪ್…ಆಗಿದೆ. ಸಾಗರ್ ಹೊಟೇಲ್ ಮಾಲೀಕರಿಗೆ ಪ್ರತಿ ತಿಂಗಳು 32 ಸಾವಿರ ರೂಪಾಯಿ ಹಣ ಕೊಡುವಂತೆ ಎಸಿಪಿ ಕೃಷ್ಣಮೂರ್ತಿ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಸಾಗರ್ ಹೋಟೆಲ್ ಮಾಲೀಕ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಹೊಟೇಲ್ ಮಾಲೀಕ 30 ಸಾವಿರ ರೂ. ಲಂಚದ ಹಣ ಕೊಡುವಾಗ ಎಸಿಪಿ ಕೃಷ್ಣಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. …
ರೆಡ್ ಹ್ಯಾಂಡ್ ಆಗಿ ಎಸಿಪಿ ಕೃಷ್ಣಮೂರ್ತಿಯನ್ನು ಲೋಕಾಯುಕ್ತ ಪೊಲೀಸರು…ಹಿಡಿದಿದ್ದಾರೆ. ಮಲೇಶ್ವರಂ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ… ಲಂಚಕ್ಕೆ ಬೇಡಿಕೆ ಇಟ್ಟ ಆಡಿಯೋ ಲಭ್ಯವಾಗಿತ್ತು. …ಇದರ ಆಧಾರದ ಮೇಲೆ ಹೋಟೆಲ್ ಮಾಲೀಕರು ದೂರು ನೀಡಿದ್ದರು.… ಪ್ರಕರಣ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ಎಸಿಪಿ ಕೃಷ್ಣಮೂರ್ತಿರನ್ನು ಟ್ರ್ಯಾಪ್ ಮಾಡಿ ವಶಕ್ಕೆ ಪಡೆದಿದ್ದಾರೆ. ರಾಜಾಜಿನಗರದ ಸಾಗರ್ ಹೋಟೆಲ್ ಮ್ಯಾನೇಜರ್ ಸಂಜಯ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅವಧಿ ಮೀರಿ ಹೋಟೆಲ್ ನಡೆಸಲು ಲಂಚಕ್ಕೆ ಎಸಿಪಿ ಬೇಡಿಕೆ ಇಟ್ಟಿದ್ದಾರೆ. 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಎಸಿಪಿ ಕೃಷ್ಣಮೂರ್ತಿ 30 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲಾಕ್…ಆಗಿದ್ದಾರೆ. ಆರೋಪಿ ಕೃಷ್ಣಮೂರ್ತಿಯನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ವಿಚಾರಣೆ…ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ಟ್ರ್ಯಾಪ್ ನಡೆದಿದೆ. …ಹೋಟೆಲ್ ಮ್ಯಾನೇಜರ್ ದೂರಿನನ್ವಯ ಎಫ್ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ಬಳಿಕ ಟ್ರ್ಯಾಪ್ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/12/24/malleshwara-acp-lokayukuta-trap-2-2025-12-24-16-53-42.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us