/newsfirstlive-kannada/media/media_files/2025/11/04/darshan-and-pavitra-gowda-1-2025-11-04-18-23-54.jpg)
ಕೋರ್ಟ್ ನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ
ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್ ನಲ್ಲಿ ಇಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ನಡೆದಿದೆ. ಕಳೆದ ವಿಚಾರಣೆ ವೇಳೆ ಕೋರ್ಟ್ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ದ ದೋಷಾರೋಪಣೆ ಹೊರಿಸಿತ್ತು.
ಇಂದು ಸಾಕ್ಷಿಗಳಿಗೆ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಯಬೇಕಾಗಿತ್ತು. ಆದರೇ, ಇಂದು ವಿಚಾರಣೆ ಆರಂಭವಾದಾಗ, ಆರೋಪಿಗಳ ಪರ ವಕೀಲರು ಈ ಕೇಸ್ ನಲ್ಲಿ 5 ಸಾವಿರ ಪುಟಗಳ ದಾಖಲೆಗಳಿವೆ. ಇವುಗಳನ್ನೆಲ್ಲಾ ಅಧ್ಯಯನ ಮಾಡಿ, ವಿಚಾರಣೆಗೆ ಸಿದ್ದರಾಗಲು ತಮಗೆ ಕಾಲಾವಕಾಶ ಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು. ತಮಗೆ ವಿಚಾರಣೆಗೆ ಸಿದ್ದರಾಗಿ ವಾದ ಮಂಡಿಸಲು 15 ದಿನ ಕಾಲಾವಕಾಶ ಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು.
ಇದರಿಂದಾಗಿ 64 ನೇ CCH ಕೋರ್ಟ್ ವಿಚಾರಣೆಯನ್ನು ನವಂಬರ್ 19 ಕ್ಕೆ ಮುಂದೂಡಿದೆ.
ಈಗಾಗಲೇ ಪ್ರಾಸಿಕ್ಯೂಷನ್ ಪರ ವಕೀಲ ಪ್ರಸನ್ನ ಕುಮಾರ್ ಅವರು ಆರೋಪಿಗಳು ಹಾಗೂ ಆರೋಪಿಗಳ ಪರ ವಕೀಲರು ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ 6 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲು ಹೇಳಿದೆ ಎಂದು 64 ನೇ ಸಿಸಿಎಚ್ ಕೋರ್ಟ್ ಗೆ ಮೆಮೊ ಸಲ್ಲಿಸಿದ್ದರು.
ಇದಾದ ಬಳಿಕ ಕೋರ್ಟ್ ಕಳೆದ ವಾರ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿದೆ. ಈಗ ಕೊಲೆ ಕೇಸ್ ನ ವಿಚಾರಣೆಯನ್ನು ಆರಂಭಿಸುವುದು ಬಾಕಿ ಇದೆ. ಸಾಕ್ಷಿಗಳಿಗೆ ನೋಟೀಸ್ ಕೊಟ್ಟು ವಿಚಾರಣೆಗೆ ಕೋರ್ಟ್ ಗೆ ಹಾಜರಾಗಲು ಸೂಚಿಸಬೇಕು. ಆದರೇ, ಆರೋಪಿಗಳ ಪರ ವಕೀಲರು ಮತ್ತೆ ವಾದ ಮಂಡನೆಗೆ, ದಾಖಲೆಗಳ ಅಧ್ಯಯನಕ್ಕೆ ಸಮಯಾವಕಾಶ ಕೇಳಿದ್ದಾರೆ. ಇದರಿಂದಾಗಿ ಕೋರ್ಟ್ ನವಂಬರ್ 19 ಕ್ಕೆ ವಿಚಾರಣೆ ಮುಂದೂಡಿದೆ.
/filters:format(webp)/newsfirstlive-kannada/media/media_files/2025/10/24/bangalore-city-civil-court-2025-10-24-15-45-48.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us