/newsfirstlive-kannada/media/media_files/2025/09/09/darshan-6-2025-09-09-11-51-10.jpg)
ಆರೋಪಿ ದರ್ಶನ್
ಬೆಂಗಳೂರು: ಇದು ಬರೇ ಹಾಸಿಗೆ ತಲೆ ದಿಂಬು ವಿಚಾರ ಅಲ್ಲ. ದರ್ಶನ್​​ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯವನ್ನ ನೀಡಬೇಕು ಎಂದು ಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಆ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ವಕೀಲ ಸುನೀಲ್ ಆರೋಪಿಸಿದ್ದಾರೆ.
ಹಾಗಾಗಿ ಕೋರ್ಟ್ ಇವತ್ತು ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಮ್ಯಾನ್ಯುಯಲ್ ಫಾಲೋ ಮಾಡಿ, ಕನಿಷ್ಠ ಸೌಲಭ್ಯ ನೀಡಿ ಎಂದು ಆದೇಶ ನೀಡಿದೆ. ದರ್ಶನ್​ಗೆ ಹಳೇ ಚಾದರ್ ನೀಡಲಾಗಿದೆ, ತಿಂಗಳಿಗೆ ಒಮ್ಮೆ ಅದನ್ನು ಬದಲಾವಣೆ ಮಾಡಿ ಎಂದಿದೆ. ಆರೋಪಿಗೂ ಇದೆ ಕಾನೂನು ಬದ್ಧ ಹಕ್ಕು. ಇದು ಮಾನವೀಯ ಹಕ್ಕಿನ ವಿಷಯ. ಆರೋಪಿಯಾಗಿದ್ದರೂ ದರ್ಶನ್ ಕೂಡ ಕಾನೂನುಬದ್ಧ ಹಕ್ಕುಗಳೊಂದಿಗೆ ಬದುಕಬೇಕು ಎಂದು ಹೇಳಿದೆ.
ಇನ್ನೂ ಸರ್ಕಾರಿ ಪರ ವಕೀಲರು, ಟ್ರಯಲ್ ತಡ ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದು ಸತ್ಯಕ್ಕೆ ದೂರವಾದ ವಿಚಾರ. ಸುಪ್ರೀಂಕೋರ್ಟ್ ಅದಷ್ಟು ಬೇಗ ಟ್ರಯಲ್ ಶುರು ಮಾಡಿ ಎಂದು ಹೇಳಿದೆ. ಅದನ್ನು ಹೊರತುಪಡಿಸಿ, ಇಷ್ಟೇ ದಿನದಲ್ಲಿ ಟ್ರಯಲ್ ಮಾಡಿ ಎಂದು ಹೇಳಿಲ್ಲ. ಇದೇ 31 ಕ್ಕೆ ಚಾರ್ಜ್ ಫ್ರೆಂಮ್ ಆಗಲಿದೆ. ಅಷ್ಟರೊಳಗೆ ಕೋರ್ಟ್ ಅದೇಶ ಪಾಲನೆ ಆಗ್ತಿದ್ದೀಯ ನೋಡ್ಕೊಂಡು ಮುಂದಿನ ನಿರ್ಧಾರ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನವೆಂಬರ್ 28 ರಂದು ಪ್ರಧಾನಿ ಮೋದಿ ಉಡುಪಿ ಕೃಷ್ಣ ಮಠಕ್ಕೆ ಭೇಟಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us