/newsfirstlive-kannada/media/media_files/2025/10/06/actor-darshan-in-jail-2025-10-06-16-30-23.jpg)
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾರೆ. ದರ್ಶನ್ ಜೊತೆ ಐದು ಮಂದಿ ಆರೋಪಿಗಳು ಒಂದೇ ಸೆಲ್ ನಲ್ಲಿದ್ದಾರೆ. ದರ್ಶನ್ ಜೊತೆ ಇದೇ ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿಗಳಾದ ಅನುಕುಮಾರ್ , ಜಗ್ಗ, ನಾಗರಾಜ್, ಪ್ರದೂಷ್, ಲಕ್ಷ್ಮಣ್ ಇದ್ದಾರೆ.
ಕಳೆದ ಭಾರಿ ನಟ ದರ್ಶನ್, ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ, ಜೈಲು ನಿಯಮ ಉಲಂಘಿಸಿದ್ದರು. ಹೀಗಾಗಿ 2ನೇ ಭಾರಿಗೆ ಜೈಲು ಪಾಲಾದ ಬಳಿಕ ಜೈಲು ನಿಯಮಗಳನ್ನು ಜೈಲು ಎಡಿಜಿಪಿ ದಯಾನಂದ್ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ. ಐಪಿಎಸ್ ಅಧಿಕಾರಿ ಅಂಶುಕುಮಾರ್ ಜೈಲು ಸೂಪರಿಂಟೆಂಡೆಂಟ್ ಆಗಿ ನೇಮಕವಾಗಿದ್ದಾರೆ. ಅಂಶುಕುಮಾರ್ ಜೈಲಿನಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ.
ಇದರಿಂದಾಗಿ ಜೈಲಿನಲ್ಲಿ ನಟ ದರ್ಶನ್ ಆಟಗಳು ನಡೆಯುತ್ತಿಲ್ಲ. ಈ ಹಿಂದೆ ಇದ್ದ ನಟ ದರ್ಶನ್ ದರ್ಬಾರ್ ಗೆ ಬ್ರೇಕ್ ಬಿದ್ದಿದೆ. ದರ್ಶನ್ ಕೂಡ ಬೇರೆ ಕೈದಿಗಳಂತೆ ಊಟಕ್ಕೆ ತಟ್ಟೆ ಹಿಡಿದುಕೊಂಡು ಹೋಗಿ ನಿಲ್ಲಬೇಕಾಗಿದೆ. ತನ್ನ ಶೌಚಾಲಯವನ್ನು ತಾನೇ ಸ್ವಚ್ಛ ಮಾಡಿಕೊಳ್ಳಬೇಕಾಗಿದೆ. ಇದರಿಂದ ನಟ ದರ್ಶನ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇದರಿಂದ ತನ್ನ ಜೊತೆ ಇರುವ ಸಹಖೈದಿಗಳಿಗೆ ದರ್ಶನ್ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾರೆ. ದರ್ಶನ್ ಹಿಂಸೆ ತಾಳಲಾರದೇ, ಆರೋಪಿಗಳಾದ ಅನುಕುಮಾರ್, ಜಗದೀಶ್ ತಮ್ಮನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.
/filters:format(webp)/newsfirstlive-kannada/media/media_files/2025/08/14/renukaswamy-case-jagga-arrest-2025-08-14-18-47-49.jpg)
ಎರಡು ದಿನದ ಹಿಂದೆ ನಟ ದರ್ಶನ್ ಸೆಲ್ ನಲ್ಲಿ ದೊಡ್ಡ ಜಗಳವೂ ನಡೆದಿದೆ. ಜಗದೀಶ್ ಮತ್ತು ದರ್ಶನ್ ನಡುವೆ ದೊಡ್ಡ ಜಗಳ ನಡೆದಿದೆ. ಇಬ್ಬರ ಜಗಳ ಜೋರಾಗುತ್ತಿದ್ದಂತೆ, ಜೈಲು ಅಧಿಕಾರಿಗಳು ಸೆಲ್ ಗೆ ಬಂದು ಇಬ್ಬರ ಜಗಳ ಬಿಡಿಸಿದ್ದಾರೆ.
ಮಲಗಿದ್ದವರನ್ನು ಕಾಲಿನಲ್ಲಿ ಒದ್ದು ನಟ ದರ್ಶನ್ ಎಬ್ಬಿಸಿದ್ದಾರೆ. ಎದ್ದೇಳಿ ಬೇಗ ಎಂದು ಅವಾಚ್ಯವಾಗಿ ನಟ ದರ್ಶನ್ ಸಹ ಕೈದಿಗಳಿಗೆ ಬೈದ್ದಿದ್ದಾರೆ.
ವಕೀಲರ ನೇಮಕ ವಿಚಾರವಾಗಿಯೂ ಎಲ್ಲರ ಜೊತೆ ಗಲಾಟೆ ಶುರುವಾಗಿದೆ. ನಾನು ಇಲ್ಲೇ ಇದ್ದರೇ, ಸಾಯುವುದಾಗಿ ಅನುಕುಮಾರ್ ಹೇಳಿಕೊಂಡಿದ್ದಾನೆ. ಕೋರ್ಟ್ ನಿಂದ ಒಂದು ಕಡೆ ಬೇಲ್ ಸಿಗುತ್ತಿಲ್ಲ. ಮತ್ತೊಂದು ಕಡೆ ಜೈಲು ಸೆಲ್ ನಲ್ಲಿ ನಟ ದರ್ಶನ್ ಚಿತ್ರಹಿಂಸೆ ತಡೆಯಲಾಗುತ್ತಿಲ್ಲ. ನಾನು ಏನಾದರೂ ಮಾಡಿಕೊಂಡು ಸಾಯುವುದಾಗಿ ಅನುಕುಮಾರ್ ಹೇಳಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಜೈಲು ಅಧಿಕಾರಿಗಳು ಎಚ್ಚರಿಕೆಯಿಂದ ಈ ಎಲ್ಲ ಕೈದಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ದರ್ಶನ್ ಸೆಲ್ ಬಳಿ ಸಿಸಿ ಕ್ಯಾಮರಾವನ್ನು ಜೈಲು ಅಧಿಕಾರಿಗಳು ಅಳವಡಿಸಿದ್ದಾರೆ.
ನಟ ದರ್ಶನ್ ಕೊಡುತ್ತಿರುವ ಚಿತ್ರಹಿಂಸೆಗೆ ಸಹ ಕೈದಿಗಳು ವಿಲವಿಲನೇ ಒದ್ದಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us