Advertisment

ಉದ್ಯಮಿ ಅರವಿಂದ್ ರೆಡ್ಡಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ನಟಿಯ ಗೆಳೆಯ ಆರೆಸ್ಟ್! ನಟಿಯ ಮನೆಯಲ್ಲೇ ತಗ್ಲಾಕೊಂಡ ವೈಶಾಖ್‌

ಎವಿಆರ್ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದ ಕೇಸ್ ದಾಖಲಾಗಿತ್ತು. ನಟಿ ಜೊತೆ ಇರುವ ಸಮಸ್ಯೆ ಬಗೆಹರಿಸಿಕೊ, ನನ್ನ ಗ್ಯಾರೇಜ್‌ಗೆ 6-7 ಕೋಟಿ ರೂಪಾಯಿ ಹಣ ತಲುಪಿಸು, ಇಲ್ಲವಾದರೇ, ಬೇರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಬೆದರಿಕೆ ಪತ್ರ ಕಳಿಸಲಾಗಿತ್ತು.

author-image
Chandramohan
KRUSHI THAPANDA

ಉದ್ಯಮಿ ಅರವಿಂದ್ ರೆಡ್ಡಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ವೈಶಾಖ್ ಬಂಧನ

Advertisment

ಅರವಿಂದ ರೆಡ್ಡಿ, ಎವಿಆರ್​ ಗ್ರೂಪ್​ ಮಾಲೀಕ. ಕಳೆದ ಕೆಲ ತಿಂಗಳಿಂದ ನಟಿ ವಿಚಾರಕ್ಕೆ ಇವರು ಭಾರೀ ಸುದ್ದಿಯಲ್ಲಿದ್ದಾರೆ. ಮೋಸ, ವಂಚನೆ, ಅನ್ಯಾಯ, ಬೆದರಿಕೆ ಅಂತೆಲ್ಲಾ ದೂರು ದಾಖಲಿಸಿ ಕಾನೂನು ಹೋರಾಟ ಮಾಡ್ತಿದ್ದಾರೆ. ಮತ್ತೊಂದ್ಕಡೆ ರೆಡ್ಡಿಯಿಂದ ಕಿರುಕುಳ ಅಂತ ನಟಿ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ ರೆಡ್ಡಿ ವಿರುದ್ಧ ಕಿರುಕುಳ ದೂರು ನೀಡಿದ್ದ ನಟಿ ಗೆಳೆಯ ಅರೆಸ್ಟ್​  ಆಗಿದ್ದಾನೆ. 

Advertisment

AVR ಗ್ರೂಪ್ ಮಾಲೀಕ ಅರವಿಂದ ರೆಡ್ಡಿಯಿಂದ ನನಗೆ ಕಿರುಕುಳ ಆಗ್ತಾ ಇದೆ ಅಂತ ನಟಿ ದೂರು ನೀಡಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ಅರವಿಂದ ರೆಡ್ಡಿಗೆ ಜೀವಬೆದರಿಕೆ ಪತ್ರವೊಂದು ಬಂದಿತ್ತು. ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ರೆಡ್ಡಿ ದೂರು ದಾಖಲಿಸಿದ್ರು. ಈಗ ಪ್ರಕರಣದ ತನಿಖೆ ನಡೆಸ್ತಿರೋ ಪೊಲೀಸರು ರೆಡ್ಡಿ ವಿರುದ್ಧ ಕಿರುಕುಳ ದೂರು ನೀಡಿದ್ದ ನಟಿ ಗೆಳೆಯನನ್ನೇ ಅರೆಸ್ಟ್​  ಮಾಡಿದ್ದಾರೆ. 

KRUSHI THAPANDA case blackmailer vasishaka


ಆರೋಪಿ ವೈಶಾಖ್‌


ಇವನೇ ನೋಡಿ..ಅರವಿಂದ ರೆಡ್ಡಿಗೆ ಬೆದರಿಕೆ ಹಾಕಿದ್ದಾನೆ ಅನ್ನೋ ಆರೋಪದ ಮೇಲೆ ಬಂಧನವಾಗಿರೋ ನಟಿಯ ಗೆಳೆಯ. ಹೆಸರು ವೈಶಾಖ್​. ನಟಿ ಜೊತೆ ಇರುವ ಸಮಸ್ಯೆ ಬಗೆ ಹರಿಸಿಕೊ, ಹಾಗೆ ನನ್ನ ಗ್ಯಾರೇಜ್ ಗೆ 6 ರಿಂದ 7 ಕೋಟಿ ಹಣ ಕಳುಹಿಸು, ಇಲ್ಲವಾದಲ್ಲಿ ನೀನು ಬೇರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೆಡ್ಡಿಗೆ ಬೆದರಿಕೆ ಪತ್ರ ಕಳಿಸಿದ್ದ.

  ಪತ್ರದ ಬೆನ್ನತ್ತಿದ್ದ ಪೊಲೀಸರು ನಟಿಯ ಮನೆಯಲ್ಲೇ ಅಡಗಿದ್ದ ವೈಶಾಖ್​ನನ್ನ ಅರೆಸ್ಟ್​ ಮಾಡಿ ವಿಚಾರಣೆ ನಡೆಸ್ತಿದ್ದಾರೆ. 

ಬಾಲಕ ಬಾಯ್ಬಿಟ್ಟ ರಹಸ್ಯ!
ಬ್ಲಾಕ್​ಮೇಲ್​​ಗೆ ಗ್ಯಾರೇಜ್ ಕೆಲಸ ಮಾಡ್ತಿದ್ದ ಬಾಲಕನ ಬಳಕೆ
ಬನಶಂಕರಿ ಬಳಿರುವ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಪತ್ರ 
ಪೊಲೀಸರ ದಿಕ್ಕು ತಪ್ಪಿಸಲು ಬೇರೆ ಕಡೆಯಿಂದ ಕೊರಿಯರ್ 
ತನಿಖೆಗಿಳಿದ ಪೊಲೀಸರಿಂದ ಮೊದಲು ಗ್ಯಾರೇಜ್ ಬಾಲಕ ವಶಕ್ಕೆ
ಬಾಸ್ ಹೇಳಿದ್ರು ಕೊರಿಯರ್ ಮಾಡಿದೆ ಎಂದಿದ್ದ ಬಾಲಕ
ಬಳಿಕ ಬಾಸ್ ಯಾರು ಎಂದು ಪತ್ತೆ ಮಾಡಿದ ಪೊಲೀಸರು
ನಟಿ ಗೆಳೆಯನಾದ ವೈಶಾಕನೇ ಪತ್ರ ಕಳಿಸಿರೋದು ಅಂತ ಅರೆಸ್ಟ್​


(ಇನ್ನೂ ಈ ಬ್ಲಾಕ್​ಮೇಲ್​​ಗೆ ಗ್ಯಾರೇಜ್ ಕೆಲಸ ಮಾಡ್ತಿದ್ದ ಬಾಲಕನನ್ನ ಬಳಕೆ ಮಾಡಿಕೊಂಡಿರೋ ವಿಚಾರ ಬಯಲಾಗಿದೆ. ಬನಶಂಕರಿ ಬಳಿರುವ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಪತ್ರ ಕಳಿಸಲಾಗಿತ್ತು. ಪೊಲೀಸರ ದಿಕ್ಕು ತಪ್ಪಿಸೋಕಂತಾನೇ ಬೇರೆ ಕಡೆಯಿಂದ ಕೊರಿಯರ್ ಮಾಡಲಾಗಿತ್ತು, ತನಿಖೆಗಿಳಿದ ಪೊಲೀಸರಿಂದ ಮೊದಲು ಗ್ಯಾರೇಜ್ ಬಾಲಕ ವಶಕ್ಕೆ ಪಡೆದಿದ್ದು, ಯಾರು ಲೆಟರ್​ ಕೊಟ್ಟಿದ್ದು ಅಂತ ವಿಚಾರಿಸಿದ್ದಾರೆ. ಆಗ ಬಾಲಕ ಬಾಸ್ ಹೇಳಿದ್ರು ಕೊರಿಯರ್ ಮಾಡಿದೆ ಎಂದಿದ್ದ. ಬಳಿಕ ಬಾಸ್ ಯಾರು ಎಂದು ಪತ್ತೆ ಮಾಡಿದ ಪೊಲೀಸರು, ನಟಿ ಗೆಳೆಯನಾದ ವೈಶಾಕನೇ ಪತ್ರ ಕಳಿಸಿರೋದು ಅನ್ನೋದನ್ನ ಕನ್ಫರ್ಮ್​ ಮಾಡ್ಕೊಂಡು ಅರೆಸ್ಟ್​ ಮಾಡಿದ್ದಾರೆ.)

Advertisment

ಇನ್ನು ಆರೋಪಿ ನಟಿಯ ಮನೆಯಲ್ಲೇ ಮೊಬೈಲ್​ ಬಚ್ಚಿಟ್ಟಿದ್ದಾನೆ ಎನ್ನಲಾಗ್ತಿದ್ದು, ಸದ್ಯ ಪೊಲೀಸರು ಆ ಮೊಬೈಲ್​ ಗಾಗಿ ಹುಡುಕಾಟ ನಡೆಸ್ತಿದ್ದಾರೆ. ಹಾಗೂ ಬಿಗ್​​ಬಾಸ್ ಮಾಜಿ ಸ್ಪರ್ಧಿ, ನಟಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ. ಅದೇನೇ ಇರ್ಲಿ ರೆಡ್ಡಿ ವಿರುದ್ಧ ಧೈರ್ಯವಾಗಿ ಕಾನೂನು ಹೋರಾಟ ಆರಂಭಿಸಿದ್ದ ನಟಿ ತನ್ನ ಗೆಳೆಯನ ಮೂಲಕ ಬ್ಲಾಕ್ ಮೇಲ್​​ಗೆ ಯತ್ನಿಸಿದ್ರಾ ಅನುಮಾನ ದಟ್ಟವಾಗಿದೆ. 

 ಸಂದೇಶ್, ನ್ಯೂಸ್​ ಫಸ್ಟ್​, ಬೆಂಗಳೂರು .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

aravind venkatesh reddy blackmail for money
Advertisment
Advertisment
Advertisment