/newsfirstlive-kannada/media/media_files/2026/01/12/non-kannadiga-job-advertisement-2026-01-12-18-14-36.jpg)
ಕನ್ನಡೇತರರು ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಜಾಹೀರಾತು
ಬೆಂಗಳೂರಿನಲ್ಲಿ ಹೆಚ್‌ಆರ್ ಪೋಸ್ಟ್‌ಗೆ ನಾನ್ ಕನ್ನಡಿಗ ಬೇಕು ಎಂದು ಜಾಹೀರಾತಿಗೆ ತೀವ್ರ ಆಕ್ರೋಶದ ಬೆನ್ನಲ್ಲೇ ಖಾಸಗಿ ಕಂಪನಿ ಕನ್ನಡಿಗರ ಕ್ಷಮೆ ಕೇಳಿದೆ. ಖಾಸಗಿ ಕಂಪನಿ ಈಗ ಯೂಟರ್ನ್ ಹೊಡೆದಿದೆ!!! ಕನ್ನಡಿಗರ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಪ್ರಕಟಣೆ ಹಿಂಪಡೆಯಲು ನಿರ್ಧರಿಸಿದೆ. ಸ್ಕಿಲ್ ಸೋನಿಕ್ಸ್ ಕಂಪನಿಯು ತಮ್ಮ ಕಂಪನಿಗೆ HR ಬೇಕು. ಆದರೆ, NON KANNADA Person ಅಂತ ಪ್ರಕಟಿಸಿತ್ತು. ನೌಕರಿ.ಕಾಮ್ ನಲ್ಲಿ ಪ್ರಕಟಣೆಯನ್ನು ನೀಡಿತ್ತು. ದುಡಿಯೋಕೆ, ದುಡ್ಡು ಮಾಡೋಕೆ ಕನ್ನಡ ನೆಲ ಬೇಕು, ಆದರೆ, ಉದ್ಯೋಗಕ್ಕೆ ಕನ್ನಡಿಗರು ಬೇಡವೇ ಅಂತ ಕನ್ನಡಿಗರು ಕೆಂಡಕಾರಿದ್ದರು. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಖಾಸಗಿ ಕಂಪನಿಗೆ ಎಚ್ಚರಿಕೆಯನ್ನು ನೀಡಿದ್ದರು. ಖಾಸಗಿ ಕಂಪನಿ ವಿರುದ್ಧ ಯುವ ಕರ್ನಾಟಕ ವೇದಿಕೆ ಪ್ರತಿಭಟನೆಗೆ ಮುಂದಾಗಿತ್ತು. ಪ್ರತಿಭಟನೆಯ ತೀವ್ರತೆ ಅರಿತ ಕಂಪನಿಯು ಕ್ಷಮೆ ಕೇಳಿದೆ. ಮಹಾರಾಷ್ಟ್ರದಲ್ಲೂ ಮರಾಠಿಗರಿಂದ ಸ್ಕಿಲ್ ಸೋನಿಕ್ಸ್ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ನಾನ್ ಕನ್ನಡಿಗ, ನಾನ್ ಮರಾಠಿ ಆಗಿರಬೇಕು ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿತ್ತು.
/filters:format(webp)/newsfirstlive-kannada/media/media_files/2026/01/12/non-kannadiga-job-advertisement-1-2026-01-12-18-15-12.jpg)
ಈ ನಡುವೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿದೆ. ಆಂಧ್ರಪ್ರದೇಶ ಮಾದರಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಮೀಸಲಾತಿ ಜಾರಿ ಮಾಡಲು ಆಗ್ರಹಿಸಲಾಗುತ್ತಿದೆ. ಇದಕ್ಕೆ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡಿಗರಿಗೆ ಮೀಸಲಾತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ 75% ಮೀಸಲಾತಿ ಕಾನೂನು ತರಲು ಪ್ರಸ್ತಾವನೆ ಇದೆ. ಇದೇ ಮಾದರಿ ಕರ್ನಾಟಕದಲ್ಲೂ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡಬೇಕು ಅಂತ ಒತ್ತಾಯ ಮಾಡಲಾಗುತ್ತಿದೆ. ಆದರೆ, ಉದ್ಯಮಿ ಕಿರಣ್ ಮಜುಂದಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿ ರೂಲ್ಸ್ ಗೆ ನಾನು ಒಪ್ಪಲ್ಲ. ಯಾರಿಗೆ ಪ್ರತಿಭೆ ಇದೆಯೋ ಅಂತವರಿಗೆ ಅವಕಾಶ ಸಿಗುತ್ತೆ ಎಂದು ಉದ್ಯಮಿ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಅಂದಾಗೆಲ್ಲಾ ಕಿರಣ್ ಮಜುಂದಾರ್ ಆಕ್ಷೇಪ ಸಾಮಾನ್ಯವಾಗಿದೆ. ಈ ಹಿಂದೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದ ಉದ್ಯಮಿ ಕಿರಣ್ ಮಜುಂದಾರ್ ಶಾ ಅಭಿಪ್ರಾಯದ ಬಗ್ಗೆಯೂ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
/filters:format(webp)/newsfirstlive-kannada/media/media_files/2025/10/21/kiran-majumdar-shah-dks-2025-10-21-12-13-32.jpg)
ಖಾಸಗಿ ಕಂಪನಿಗಳಿಗೆ ಕನ್ನಡದ ನೆಲ ಬೇಕು.. ಇಲ್ಲಿನ ಸಂಪತ್ತು ಬೇಕು. ಲಾಭ ಮಾಡಿಕೊಂಡು ಸುಖದ ಜೀವನ ನಡೆಸೋಕೂ ಕರುನಾಡು ಬೇಕು.. ಆದ್ರೆ ಕೆಲಸಕ್ಕೆ ಕನ್ನಡಿಗರು ಮಾತ್ರ ಬೇಡವಂತೆ. ಕನ್ನಡ ನೆಲದಲ್ಲಿದ್ರೂ, ಕನ್ನಡಿಗರನ್ನ ಕಡೆಗಣಿಸೋದ್ರಲ್ಲಿ ಮುಂದಾಗಿದ್ದಾರೆ. ಕಳೆದ ವಾರ ಕಾಲೇಜ್ ನಲ್ಲಿ ಕನ್ನಡ ಮಾತನಾಡುವುದಕ್ಕೆ ದೊಡ್ಡ ಗಲಾಟೆಯೇ ನಡೆದಿತ್ತು. ಇದೀಗ ಬೆಂಗಳೂರಿನ (Bengaluru) ಜೆ ಪಿ ನಗರದಲ್ಲಿರುವ ‘ಸ್ಕಿಲ್ಸ್ ಸೋನಿಕ್ಸ್’ ಅನ್ನೋ ಖಾಸಗಿ ಕಂಪನಿಯಿಂದ ನೌಕ್ರಿ ಡಾಟ್ ಕಾಂ ನಲ್ಲಿ ನೌಕರಿಗಾಗಿ ಪ್ರಕಟಣೆ ಹೊರಡಿಸಿದ್ದು ವಿವಾದ ಸೃಷ್ಟಿಸಿ ಕ್ಷಮೆ ಕೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us