ಬಸವನಗುಡಿಯಲ್ಲಿ ಏರ್ ಗನ್ ಫೈರಿಂಗ್ ಕೇಸ್‌ : ಆರೋಪಿ ಪತ್ತೆ ಹಚ್ಚಿದ ಪೊಲೀಸರು

ಬೆಂಗಳೂರಿನ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದ ಉದ್ಯಮಿ ರಾಜಗೋಪಾಲ್ ಮೇಲೆ ಏರ್ ಗನ್ ನಿಂದ ಫೈರಿಂಗ್ ಮಾಡಲಾಗಿತ್ತು. ಈ ಕೇಸ್ ನ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಫ್ಜಲ್ ಬಂಧಿತ ಆರೋಪಿ. ಏರ್ ಗನ್ ಶೂಟಿಂಗ್ ಪ್ರಾಕ್ಟೀಸ್ ವೇಳೆ ಗುಂಡು ತಗುಲಿದೆ.

author-image
Chandramohan
AIR GUN FIRING ACCUSSED ARRESTED
Advertisment

ಬೆಂಗಳೂರಿನ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದ ಉದ್ಯಮಿ ರಾಜಗೋಪಾಲ್ ಮೇಲೆ ಏರ್ ಗನ್ ನಿಂದ ಫೈರಿಂಗ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಏರ್ ಗನ್ ನಿಂದ ಫೈರಿಂಗ್ ಮಾಡಿದ್ದ ಆರೋಪಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಅಫ್ಜಲ್ ಬಂಧಿತ  ಆರೋಪಿ . ಆರೋಪಿಯನ್ನು ಬಂಧಿಸಿ ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.  ಆರೋಪಿಯ  ಅಜಾಗರೂಕತೆಯಿಂದ  ಏರ್ ಗನ್ ನಿಂದಲೇ  ಮಿಸ್  ಫೈರ್ ಆಗಿದೆ. 
ಮನೆಯಲ್ಲಿ ಏರ್ ಗನ್‌ ಇಟ್ಟುಕೊಂಡು ಅಫ್ಜಲ್ ಶೂಟಿಂಗ್‌ ಪ್ರ್ಯಾಕ್ಟೀಸ್ ಮಾಡುತಿದ್ದ. ಈ ವೇಳೆ ಫೈರ್ ಮಾಡುತ್ತಿದ್ದ ವೇಳೆ ಕಿಟಕಿಯಿಂದ ಡಮ್ಮಿ ಬುಲೆಟ್ ಹೊರಗೆ ಬಂದು ರಾಜಗೋಪಾಲ್ ಅವರ ಕುತ್ತಿಗೆಗೆ ಹೊಕ್ಕಿದೆ.  ಅದೃಷ್ಟವಶಾತ್ ರಾಜಗೋಪಾಲ್ ಪ್ರಾಣಕ್ಕೆ ಅಪಾಯವಾಗಿರಲಿಲ್ಲ. ಕುತ್ತಿಗೆ ಭಾಗದಲ್ಲಿ ಗಾಯವಾಗಿತ್ತು. ಬಳಿಕ ರಾಜಗೋಪಾಲ್ ಅವರು ಬಸವನಗುಡಿ ಪೊಲೀಸರಿಗೆ ದೂರು ನೀಡಿದ್ದರು. ಈಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

Basavanagudi police station limits firing

ಏರ್ ಗನ್ ನಲ್ಲಿ ಪ್ರ್ಯಾಕ್ಟೀಸ್ ಮಾಡಲು ಯಾವುದೇ ಲೈಸೆನ್ಸ್  ಅವಶಕತೆ ಇರುವುದಿಲ್ಲ  ಎಂದ‌ು ಪೊಲೀಸರು ಹೇಳಿದ್ದಾರೆ. ಕೃಷ್ಣರಾವ್  ಪಾರ್ಕ್ ಪಕ್ಕದಲ್ಲೇ ‌ಆರೋಪಿ ಅಪ್ಜಲ್ ಮನೆ ಇದೆ. 
ಪಾರ್ಕ್ ನಲ್ಲಿ ವಾಕಿಂಗ್ ಮಾಡುವ ಸಂದರ್ಭದಲ್ಲಿ  ಕಿಟಕಿಯಿಂದ ಏರ್ ಗನ್ ಬುಲೆಟ್  ಹೊರ ಬಂದು ಉದ್ಯಮಿಗೆ ತಗುಲಿದೆ.  ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಬಸವನಗುಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

AIR GUN FIRING CASE ACCUSSED ARRESTED
Advertisment