ದೆಹಲಿ ಬಳಿಕ ಬೆಂಗಳೂರಿನಲ್ಲಿ ಹೆಚ್ಚಾದ ವಾಯು ಮಾಲಿನ್ಯ ! : ಬೆಂಗಳೂರು ಗಾಳಿ ಕೂಡ ಅನಾರೋಗ್ಯಕರ !

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಎಂಟು ಹತ್ತು ವರ್ಷಗಳಿಂದ ವಾಯು ಮಾಲಿನ್ಯ ಮಿತಿ ಮೀರಿ ಹೋಗಿದೆ. ಈಗ ರಾಜ್ಯ ರಾಜಧಾನಿ ಬೆಂಗಳೂರಿನ ಸರದಿ. ಬೆಂಗಳೂರಿನಲ್ಲೂ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಬೆಂಗಳೂರಿಗರಿಗೂ ಉಸಿರಾಟದ ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ.

author-image
Chandramohan
Bangalore air pollution (1)
Advertisment

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಕಳೆದ ಏಳೆಂಟು ವರ್ಷದಿಂದ ವಾಯು   ಮಾಲಿನ್ಯ ಮಿತಿ ಮೀರಿ ಹೋಗಿದೆ.  ದೆಹಲಿಯಲ್ಲಿ ಜನರು ಉಸಿರಾಡುವುದಕ್ಕೂ ಕಷ್ಟಪಡುತ್ತಿದ್ದಾರೆ.  ದೆಹಲಿಯಲ್ಲಿ ಪ್ರತಿ ತಿಂಗಳು ಉಸಿರಾಟದ ಸಮಸ್ಯೆಯಿಂದ ಅನಾರೋಗ್ಯಗಳು ಜನರಲ್ಲಿ ಹೆಚ್ಚಾಗುತ್ತಿವೆ. ದೆಹಲಿಯ ವಾಯು ಮಾಲಿನ್ಯದ ಕಾರಣಕ್ಕಾಗಿ ಜನರು ದೆಹಲಿ  ಬಿಟ್ಟು ದೇಶದ ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.
ಆದರೇ ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸದ್ದಿಲ್ಲದೇ, ವಾಯು ಗುಣಮಟ್ಟ ಕುಸಿತವಾಗುತ್ತಿರುವುದು ಬೆಳಕಿಗೆ ಬಂಗಿದೆ.  ಇದರಿಂದಾಗಿ ಬೆಂಗಳೂರಿನಲ್ಲೂ ದೆಹಲಿಯಂತೆ  ಜನರಲ್ಲಿ ಉಸಿರಾಟದ ಸಮಸ್ಯೆ ಸೃಷ್ಟಿಯಾಗುವ ಆತಂಕ ಎದುರಾಗಿದೆ.
ಬೆಂಗಳೂರಿನ ಕಲುಷಿತ ಗಾಳಿಯಿಂದಾಗಿ ಜನರು  ಉಸಿರುಗಟ್ಟಿಸುವ ವಾತಾವರಣ ನಿರ್ಮಾಣಾಗುತ್ತಿದೆ. ಗಾಳಿಯ ಗುಣಮಟ್ಟ ಕುಸಿಯುತ್ತಿದೆ. ಕಲುಷಿತ ಗಾಳಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯನ್ನೂ  ಬೆಂಗಳೂರು ಮೀರಿಸುತ್ತಾ ಎಂಬ ಪ್ರಶ್ನೆ ಎದುರಾಗಿದೆ. ದೆಹಲಿಯಲ್ಲಿ  AQI  340 ಇದ್ದರೇ,   ಸಿಲಿಕಾನ್ ಸಿಟಿ ಬೆಂಗಳೂರಲ್ಲಿ  AQI  180 ದಾಖಲಾಗಿದೆ. 
ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಮಟ್ಟ ಗಂಭೀರವಾಗಿದೆ.  ಗಾಳಿಯ ಗುಣಮಟ್ಟ ಸೂಚ್ಯಂಕ (AQI) 180ಕ್ಕೆ ತಲುಪಿದೆ.  ವಾಹನ ದಟ್ಟಣೆ, ನಿರ್ಮಾಣ ಕಾರ್ಯಗಳು ಮತ್ತು ಚಳಿಗಾಲದಿಂದ ಗಾಳಿಯ ಗುಣಮಟ್ಟ ಹಾಳಾಗುತ್ತಿದೆ.  ಸಾರ್ವಜನಿಕರು ಮಾಸ್ಕ್ ಧರಿಸಿ, ಹೊರಗೆ ಹೋಗುವುದನ್ನು ತಪ್ಪಿಸಿ ಎಚ್ಚರ ವಹಿಸೋದು ಉತ್ತಮ .  ಮುಂದಿನ ಕೆಲವು ದಿನಗಳವರೆಗೆ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಅನಾರೋಗ್ಯ ಪೀಡಿತರ ಮೇಲೆ ಹಾಗೂ ಯುವಕರು, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಬಹುದು.

ನಾಳೆ ಶನಿವಾರ ಗಾಳಿಯ ಗುಣಮಟ್ಟ 157ಕ್ಕೆ ತಲುಪುವ ಸಾಧ್ಯತೆ ಇದೆ 
AQI AIR QUALITY INDEX
0-50 best 
51-100 average 
101-200 unhealthy 
201-300 poor 

Bangalore air pollution




ಯಾಕೆ ಬೆಂಗಳೂರು ಗಾಳಿ ಗುಣಮಟ್ಟ ಇಳಿಕೆಯಾಗಿದೆ?

ಕಾರಣ 1: ಅರ್ಧಂಬರ್ಧ ಕಾಮಗಾರಿ 
* ಬೆಂಗಳೂರಿನ ಅನೇಕ ಕಡೆಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ 
* ಹಲವು ಕಡೆಗಳಲ್ಲಿ ಬಿಡಿಎ, ಜೆಬಿಎ ಅಧಿಕಾರಿಗಳು ಕಾಮಗಾರಿ ಮಾಡುತ್ತಿವೆ 
* ಜೊತೆಗೆ ಕಾಮಗಾರಿ ವಿಳಂಬ ಆಗಿರೋದು, ಅದರಿಂದ ಧೂಳು ಜಾಸ್ತಿ ಆಗಿದೆ 

ಕಾರಣ 2: ವಾಹನ ದಟ್ಟಣೆ 
* ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆ ಇದೆ 
* ಪ್ರತಿ ದಿನ 3-5 ಸಾವಿರ ವಾಹನಗಳು ಸೇರ್ಪಡೆಯಾಗ್ತಿವೆ 
* ಕೆಲವ್ರು ಎಮಿಶನ್ ಟೆಸ್ಟ್ ಮಾಡಿಸದೇ ಗಾಡಿ ಓಡಿಸ್ತಿದ್ದಾರೆ 
* ಇದರಿಂದಲೂ ಅತಿ ಹೆಚ್ಚು ಟ್ರಾಫಿಕ್ ಆಗಲಿದೆ 
ಟ್ರಾಫಿಕ್ ಜಾಮ್ ನಿಂದ ವಾಹನಗಳ ಹೊಗೆಯಿಂದ ವಾಯು ಮಾಲಿನ್ಯ ಹೆಚ್ಚಳ

ಕಾರಣ 3: ಚಳಿ ವಾತಾವರಣ 
* ಚಳಿ ವಾತಾವರಣದಿಂದಲೂ ಗಾಳಿ ಗುಣಮಟ್ಟ ಇಳಿಕೆ ಆಗಿದೆ 
* Minute pollutants ನ ವಾತಾವರಣದಲ್ಲೇ ಹಿಡಿದಿಟ್ಟುಕೊಳ್ಳೋ ಕಾರಣಕ್ಕೆ ಗಾಳಿ ಕಲುಷಿತ 
* ಮಂಜು ಬೀಳೋದ್ರಿಂದಲೂ ಅದ್ರ ಜೊತೆ pollutants ಮಿಕ್ಸ್ ಆಗಿ ಗುಣಮಟ್ಟ ಇಳಿಕೆ ಆಗಿದೆ 


ವೈದ್ಯರು ಹೇಳೋದೇನು? 
* ಬೆಚ್ಚಗಿನ ಆಹಾರ ಸೇವನೆ ಮಾಡಿ.. ಹೊರಗೆ ಜಂಕ್ ಫುಡ್ ಅವಾಯ್ಡ್ ಮಾಡಿ 
* ಹೊರಗೆ ಹೋಗುವ ವೇಳೆ ಮಾಸ್ಕ್ ಧರಿಸಿ ಹೋಗೋದು ಉತ್ತಮ 
* ಉಸಿರಾಟದಲ್ಲಿ ಸಮಸ್ಯೆ ಕಂಡು ಬಂದಲ್ಲಿ ಶೀಘ್ರವೇ ವೈದ್ಯರನ್ನ ಭೇಟಿ ಮಾಡಿ

Bangalore air pollution (2)





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore air pollution level Increased
Advertisment