Advertisment

ಐಶ್ಚರ್ಯಗೌಡರಿಂದ ಸ್ನೇಹಿತೆಗೆ ಚಿನ್ನ ವಂಚನೆ ಕೇಸ್‌ : ನಟ ಧರ್ಮ ವಾಯ್ಸ್ ಸ್ಯಾಂಪಲ್ ಗೆ ಅನುಮತಿ ಕೋರಿ ಪೊಲೀಸರಿಂದ ಕೋರ್ಟ್ ಗೆ ಮನವಿ

ನಟ ಧರ್ಮ, ಮಾಜಿ ಸಂಸದ ಡಿ.ಕೆ.ಸುರೇಶ್ ವಾಯ್ಸ್ ನಲ್ಲಿ ಬೇರೆಯವರ ಜೊತೆ ಮಾತನಾಡಿ ಐಶ್ಚರ್ಯ ಗೌಡ ಚಿನ್ನ ವಂಚನೆಗೆ ಬೆಂಬಲ ನೀಡಿದ್ದಾರೆ ಎಂಬ ಆರೋಪ ಇದೆ. ನಟ ಧರ್ಮ ವಾಯ್ಸ್ ಸ್ಯಾಂಪಲ್ ಪಡೆಯಲು ಅನುಮತಿ ಕೋರಿ ಕೋರ್ಟ್ ಗೆ ಸಿಐಡಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ.

author-image
Chandramohan
kannada actor dharma 03

ಐಶ್ಚರ್ಯಗೌಡ ಹಾಗೂ ನಟ ಧರ್ಮ

Advertisment
  • ಐಶ್ಯರ್ಯಗೌಡರಿಂದ ಚಿನ್ನ ವಂಚನೆಗೆ ಸಾಥ್ ನೀಡಿದ್ದ ಆರೋಪ ನಟ ಧರ್ಮ ಮ್ಯಾಲೆ!
  • ಹೀಗಾಗಿ ನಟ ಧರ್ಮ ವಾಯ್ಸ್ ಸ್ಯಾಂಪಲ್ ಪಡೆಯಲು ಕೋರ್ಟ್ ಮೊರೆ ಹೋದ ಪೊಲೀಸ್
  • ಡಿ.ಕೆ.ಸುರೇಶ್ ಧ್ವನಿಯಲ್ಲಿ ಬೇರೆಯವರಿಗೆ ಬೆದರಿಕೆ ಹಾಕಿರುವ ನಟ ಧರ್ಮ


ಮಾಜಿ ಸಂಸದ ಡಿ.ಕೆ‌ ಸುರೇಶ್ ಸೋದರಿ  ಹೆಸರಿನಲ್ಲಿ  ಚಿನ್ನ ವಂಚನೆ ಕೇಸ್ ನಲ್ಲಿ ಸ್ಯಾಂಡಲ್ ವುಡ್ ನಟ ಧರ್ಮ ವಾಯ್ಸ್ ಸ್ಯಾಂಪಲ್ ಪಡೆಯಲು ಅನುಮತಿ ಕೋರಿ ಸಿಐಡಿ  ಅಧಿಕಾರಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಶ್ಚರ್ಯ ಗೌಡ ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಸೋದರಿ ಎಂದು ಹೇಳಿ ಚಿನ್ನದ ವ್ಯಾಪಾರಿಗಳಿಂದ ಚಿನ್ನ ಪಡೆದು ಹಣ ನೀಡಿರಲಿಲ್ಲ. ಈ ಕೇಸ್ ಗೆ ಸಂಬಧಿಸಿದಂತೆ, ನಟ ಧರ್ಮ, ಕೆಲವರ ಜೊತೆ ಮಾಜಿ ಸಂಸದ ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಿಮಿಕ್ರಿ ಮಾಡಿ ಮಾತನಾಡಿದ್ದಾರೆ ಎಂಬ ಆರೋಪ ಇದೆ.  ಈ ಆರೋಪವನ್ನೂ ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಿಐಡಿ ಪೊಲೀಸರಿಗೆ ನಟ ಧರ್ಮ ವಾಯ್ಸ್ ಸ್ಯಾಂಪಲ್ ಅಗತ್ಯ ಇದೆ. ಈ ವಾಯ್ಸ್ ಸ್ಯಾಂಪಲ್ ಅನ್ನು ಪಡೆದು ಅದನ್ನು ಬೇರೆಯವರ ಜೊತೆ ಮಾತನಾಡಿದ ಧ್ವನಿಯ ಜೊತೆ ಹೊಂದಿಕೆ ಆಗುತ್ತೆ ಇಲ್ಲವೇ ಎಂದು ಪರೀಕ್ಷಿಸಬೇಕು.  ಹೀಗಾಗಿ ಆರೋಪ ಸಾಬೀತುಪಡಿಸಲು ಪೊಲೀಸರಿಗೆ ವಾಯ್ಸ್ ಸ್ಯಾಂಪಲ್ ಅಗತ್ಯ ಇದೆ. ಹೀಗಾಗಿ ನಟ ಧರ್ಮ ವಾಯ್ಸ್ ಸ್ಯಾಂಪಲ್ ಪಡೆಯಲು ಅನುಮತಿ ನೀಡುವಂತೆ ಸಿಐಡಿ ಪೊಲೀಸ್ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ನಿಂದ ಅನುಮತಿ ಕೇಳಿದ್ದಾರೆ.  ಕೋರ್ಟ್ ಪೊಲೀಸರ ಮನವಿ ಪುರಸ್ಕರಿಸಿದರೇ, ನಟ ಧರ್ಮ ಪೊಲೀಸರಿಗೆ ತಮ್ಮ ವಾಯ್ಸ್ ಸ್ಯಾಂಪಲ್ ನೀಡಬೇಕಾಗುತ್ತೆ. 
ಬೇರೆಯವರ ಜೊತೆ ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿರುವುದು ನಟ ಧರ್ಮ ಎಂಬುದು ಸಾಬೀತಾದರೇ, ನಟ ಧರ್ಮರನ್ನು ಪೊಲೀಸರು ಚಿನ್ನ ವಂಚನೆ ಕೇಸ್ ನಲ್ಲಿ ಬಂಧಿಸುವ ಸಾಧ್ಯತೆಯೂ ಇದೆ.
ನಟ ಧರ್ಮ ಮಾಜಿ ಸಂಸದ ಡಿ.ಕೆ.ಸುರೇಶ್ ಧ್ವನಿಯಲ್ಲಿ ಚಿನ್ನ ವಾಪಸ್ ಕೇಳಿದವರಿಗೆ ಡಿ.ಕೆ.ಸುರೇಶ್ ಧ್ವನಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಇದೆ. ಹೀಗೆ ಬೆದರಿಕೆ ಹಾಕುವುದು ಕೂಡ ಕ್ರಿಮಿನಲ್ ಕೆಲಸ.  ಹೀಗಾಗಿ ನಟ ಧರ್ಮ ವಾಯ್ಸ್ ಸ್ಯಾಂಪಲ್ ಪಡೆದು ಆರೋಪ ಸಾಬೀತುಪಡಿಸಲು ಪೊಲೀಸರು ಈಗ ಹೆಜ್ಜೆ ಇಟ್ಟಿದ್ದಾರೆ. 

Advertisment

kannada actor dharma 02



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Police seeks court nod to take Actor Dharma voice sample
Advertisment
Advertisment
Advertisment