Advertisment

ಹುಡುಗಿ ಕೊಟ್ಟು ಮದುವೆ ಮಾಡಲಿಲ್ಲ, ಪೋಕ್ಸೋ ಕೇಸ್ ಹಾಕಿದ ಸಿಟ್ಟು : ಹುಡುಗಿ ತಾಯಿಯ ಹತ್ಯೆ!

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ತಾನು ಇಷ್ಟಪಟ್ಟ ಹುಡುಗಿಯನ್ನು ಕೊಟ್ಟು ಮದುವೆ ಮಾಡಲಿಲ್ಲ. ತನ್ನ ಮೇಲೆ ಪೋಕ್ಸೋ ಕೇಸ್ ಹಾಕಿದ ಸಿಟ್ಟಿಗೆ ಹುಡುಗ ಹಾಗೂ ಆತನ ಪೋಷಕರು, ಅಪ್ರಾಪ್ತ ಬಾಲಕಿಯ ತಾಯಿಯನ್ನೇ ಹತ್ಯೆಗೈದ್ದಿದ್ದಾರೆ.

author-image
Chandramohan
KUNDANNA VILLAGE MURDER

ಆರೋಪಿ ರಂಜಿತ್, ಸಂಬಂಧಿ ಗಣೇಶ್

Advertisment


ತಾನು ಇಷ್ಟಪಟ್ಟ ಹುಡುಗಿಯನ್ನು ತನಗೆ ಕೊಟ್ಟು ಮದುವೆ ಮಾಡಿಕೊಡಲಿಲ್ಲ ಎಂದು ಸಿಟ್ಟಿಗೆದ್ದ ಹುಡುಗ ಹಾಗೂ ಆತನ ಪೋಷಕರು ಹುಡುಗಿಯ ತಾಯಿಯನ್ನೇ ಹತ್ಯೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿ ಈ ಹತ್ಯೆ ನಡೆದಿದೆ. 
ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಆರೋಪಿ ರಂಜಿತ್ ಹುಡುಗಿಯ ಪೋಷಕರನ್ನು ಕೇಳಿದ್ದ. ಆದರೇ, ತಮ್ಮ ಮಗಳಿಗೆ ಇನ್ನೂ 18 ವರ್ಷವಾಗಿಲ್ಲ. ಆಕೆ ಇನ್ನೂ ಅಪ್ರಾಪ್ತೆ . ಹೀಗಾಗಿ ಸದ್ಯಕ್ಕೆ ಮದುವೆ ಮಾಡಲ್ಲ ಎಂದು ಹುಡುಗಿಯ ಪೋಷಕರು ರಂಜಿತ್‌ಗೆ ಹೇಳಿದ್ದರು. 
ಆದರೂ ವಿನಾಃ ಕಾರಣ ಅಪ್ರಾಪ್ತ ಬಾಲಕಿಗೆ ರಂಜಿತ್ ತೊಂದರೆ ಕೊಡುತ್ತಿದ್ದ. ಹೀಗಾಗಿ ರಂಜಿತ್ ವಿರುದ್ಧ ಹುಡುಗಿಯ ಪೋಷಕರು ಪೋಕ್ಸೋ ಕೇಸ್ ದಾಖಲಿಸಿದ್ದರು. ಎಫ್‌ಐಆರ್ ದಾಖಲಾದ ಮೇಲೆ ರಂಜಿತ್, ಹುಡುಗಿಯ ಪೋಷಕರ ಮೇಲೆ ದ್ವೇಷ ಸಾಧಿಸುತ್ತಿದ್ದ. ನಿನ್ನೆ ರಾತ್ರಿ ವಿನಾಃ ಕಾರಣ ಜಗಳ ತೆಗೆದು ಹುಡುಗಿಯ ತಾಯಿಯ ಮೇಲೆ ರಂಜಿತ್ ಹಾಗೂ ಆತನ ಪೋಷಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹುಡುಗಿಯ ತಾಯಿ ಎದೆಗೆ ಗುದ್ದಿ ಮನಸೋ  ಇಚ್ಛೆ ಹಲ್ಲೆ ನಡೆಸಿದ್ದಾರೆ. ರಂಜಿತ್,  ಆತನ  ತಾಯಿ ರಾಧಾಮ್ಮ, ಅಣ್ಣ ನವೀನ್ ಹಲ್ಲೆ ನಡೆಸಿದ್ದಾರೆ. ಇವರ ಸಂಬಂಧಿ ಗಣೇಶ್ ಎಂಬಾತ ಮತ್ತಷ್ಟು ಹಲ್ಲೆ ನಡೆಸುವಂತೆ ಪ್ರಚೋದನೆ ನಡೆಸಿದ್ದಾನೆ. 
ಈ ಮಾರಣಾಂತಿಕ ಹಲ್ಲೆಯಿಂದ ಹುಡುಗಿಯ ತಾಯಿ ತೀವ್ರವಾಗಿ ಅಸ್ವಸ್ಥವಾಗಿದ್ದರು. ಕೂಡಲೇ ಹುಡುಗಿಯ ತಾಯಿಯನ್ನು ಅಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೇ, ಚಿಕಿತ್ಸೆ ಫಲಕಾರಿಯಾಗದೇ ಹುಡುಗಿಯ ತಾಯಿ ಸಾವನ್ನಪ್ಪಿದ್ದಾರೆ. ಹೀಗಾಗಿ ರಂಜಿತ್, ತಾಯಿ ರಾಧಾಮ್ಮ, ಸೋದರ ನವೀನ್, ಸಂಬಂಧಿ ಗಣೇಶ್ ಮೇಲೆ ಈಗ ಕೊಲೆ ಕೇಸ್ ದಾಖಲಿಸಬೇಕಾಗಿದೆ.  ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mother Murder case BANGALORE MURDER CASE
Advertisment
Advertisment
Advertisment