/newsfirstlive-kannada/media/media_files/2025/11/05/pet-dog-killer-arrested-2025-11-05-14-32-47.jpg)
ಸಾಕು ನಾಯಿ ಕೊಂದಿದ್ದ ಪುಷ್ಪಲತಾ ವಿರುದ್ಧ 2ನೇ ಕೇಸ್ ದಾಖಲು
ಬೆಂಗಳೂರಿನ ಬಾಗಲೂರಿನಲ್ಲಿ ಲಿಫ್ಟ್ ನಲ್ಲಿ ನಾಯಿ ಮೇಲೆ ಹಲ್ಲೆ ಮಾಡಿ ಕೊಂದ ಪ್ರಕರಣದ ಆರೋಪಿ ಪುಷ್ಪಲತಾ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಚಿನ್ನಾಭರಣ ಕಳ್ಳತನ ಆರೋಪವೂ ಮನೆಕೆಲಸದಾಕೆ ಪುಷ್ಪಲತಾ ವಿರುದ್ಧ ಬಂದಿದೆ. ಮನೆಯ ಚಿನ್ನಾಭರಣ ಕದ್ದು ಆರೋಪದಡಿ ಮತ್ತೊಂದು ಕೇಸ್ ದಾಖಲಾಗಿದೆ.
ನಾಯಿಮರಿಯನ್ನ ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಪುಷ್ಪಲತಾ ಬಂಧಿಸಿ , ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇದೀಗ ಬಾಗಲೂರು ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ರಾಶಿಕ ನೀಡಿದ ದೂರಿನ ಮೇರೆಗೆ ಪುಷ್ಟಲತಾ ಮೇಲೆ ಎಫ್ಎಆರ್ ದಾಖಲಾಗಿದೆ. ನವಂಬರ್ 2 ರಂದು ಮನೆಯ ವಾರ್ಡ್ ರೋಬ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಾಣೆಯಾಗಿದೆ.. ಸುಮಾರು 50 ಗ್ರಾಂ ಮೌಲ್ಯದ ಚಿನ್ನದ ಸರ, ಒಂದು ಉಂಗುರ ಹಾಗೂ ಒಂದು ವಜ್ರದ ಉಂಗುರ ಕಾಣೆಯಾಗಿದೆ..
ಮನೆಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಪುಷ್ಪಲತಾ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ಹೀಗಾಗಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕದ್ದ ಚಿನ್ನವನ್ನು ಅದೇ ಮನೆಯಲ್ಲಿ ಬಚ್ಚಿಟ್ಟಿದ್ದಾಗಿ ಮನೆಕೆಲಸದಾಕೆ ಪುಷ್ಪಲತಾ ಹೇಳಿದ್ದಾಳೆ. ಯುವತಿ ಕಾಲೇಜಿಗೆ ಹೋದಾಗ ಆರೋಪಿ ಪುಷ್ಪಾ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಈ ವೇಳೆ ಡ್ರಾಯರ್ ನಲ್ಲಿಟ್ಟಿದ್ದ ಚಿನ್ನಾಭರಣ ಕದ್ದು ತಾನು ಮಲಗಿಕೊಳ್ಳುವ ಮಂಚದ ಕೆಳಗೆ ಬಚ್ಚಿಟ್ಟಿದ್ದಳು. ಕಳ್ಳತನವೆಸಗಿ ಬಳಿಕ ಮನೆಯಲ್ಲಿದ್ದ ನಾಯಿಮರಿಯನ್ನ ಪುಷ್ಪಲತಾ ಸಾಯಿಸಿದ್ದಳು.
/filters:format(webp)/newsfirstlive-kannada/media/media_files/2025/11/05/pet-dog-killer-arrested02-2025-11-05-14-34-00.jpg)
ಆರೋಪಿ ಪುಷ್ಪಲತಾ ಹಾಗೂ ಮನೆ ಮಾಲಕಿ ರಾಶಿ
ಬಾಗಲೂರು ಪೊಲೀಸ್ ಠಾಣೆಯಲ್ಲಿ ಪುಷ್ಪಲತಾ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us