ಬೆಂಗಳೂರಿನಲ್ಲಿ ಯುವತಿ ಜೊತೆ ಲವ್.. ಸೆಕ್ಸ್​.. ದೋಖಾ.. ಆರೋಪಿ ಲಾಕ್!!

ಅಮಾಯಕ ಯುವತಿಯರನ್ನೇ ಟಾರ್ಗೆಟ್ ಮಾಡ್ತಿದ್ದ ಮಿಥುನ್ ಕುಮಾರ್. ಬೆಂಗಳೂರಿನ ಪಟ್ಟೆಗಾರಪಾಳ್ಯ ಯುವತಿಗೆ ನಂಬಿಸಿ ಮೋಸ ಮಾಡಿದ್ದಾನೆ. 4 ತಿಂಗಳು ಸಂಸಾರ ಮಾಡಿ, ದುಡ್ಡು, ಒಡವೆ ದೋಚಿ ಪರಾರಿಯಾಗಿದ್ದ. ಕೇಸ್ ದಾಖಲಾದ ಮೇಲೆ ಮಿಥುನ್​ನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.

author-image
Chandramohan
love sex dhoka case

ಬೆಂಗಳೂರಿನಲ್ಲಿ ಲವ್, ಸೆಕ್ಸ್ , ದೋಖಾ ಕೇಸ್ ದಾಖಲು

Advertisment
  • ಲವ್, ಸೆಕ್ಸ್ , ದೋಖಾ ಕೇಸ್ ದಾಖಲು
  • 2ನೇ ಭಾರಿ ಇದೇ ರೀತಿ ಕೇಸ್ ನಲ್ಲಿ ಮಿಥುನ್ ಬಂಧನ
  • ಮೊದಲು ಕಾಮಾಕ್ಷಿಪಾಳ್ಯ ಠಾಣೆ, ಈಗ ಗೋವಿಂದರಾಜನಗರ ಠಾಣೆ ಪೊಲೀಸರಿಂದ ಬಂಧನ

ಲವ್.. ಸೆಕ್ಸ್​.. ದೋಖಾ!
ಬೆಂಗಳೂರಿನಲ್ಲೊಂದು ಲವ್ , ಸೆಕ್ಸ್ , ದೋಖಾ ಕೇಸ್ ದಾಖಲಾಗಿದೆ. ಇಂಥ ಬುದ್ದಿವಂತ ಸಿನಿಮಾದ ಹೀರೋ ಉಪೇಂದ್ರ ಸ್ಟೈಲ್ ನಲ್ಲಿ ಯುವತಿಯರನ್ನು ಮದುವೆಯಾಗಿ ವಂಚಿಸುವುದನ್ನೇ ಚಾಳಿಯನ್ನಾಗಿ ಮಾಡಿಕೊಂಡಿದ್ದಾನೆ. 
ಬೆಂಗಳೂರಿನ ಪಟ್ಟೇಗಾರಪಾಳ್ಯ ನಿವಾಸಿ ಮಿಥುನ್ ಕುಮಾರ್, ಯುವತಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಗಿ ಮದುವೆಯಾಗುತ್ತಾನೆ. ಆರು ತಿಂಗಳ ಸಂಸಾರ ಮಾಡಿ, ಆದಾದ ನಂತರ ಎಸ್ಕೇಪ್ ಆಗುತ್ತಾನೆ. ಯುುವತಿಯ ದುಡ್ಡು, ಒಡವೆ ಎಲ್ಲವನ್ನೂ ದೋಚಿಕೊಂಡು ಹೋಗುವುದು ಮಿಥುನ್ ಕುಮಾರ್ ಚಾಳಿ. 
6 ವರ್ಷಗಳ ಹಿಂದೆ ಯುವತಿಯೊಬ್ಬಳಿಗೆ ಈ ಮಿಥುನ್ ಕುಮಾರ್ ಪರಿಚಯವಾಗಿದ್ದ. ಒಂದು ವರ್ಷದ ಹಿಂದೆ ಆ ಯುವತಿಯನ್ನೇ ವಿವಾಹ ಆಗಿದ್ದಾನೆ. ನಾಲ್ಕು ತಿಂಗಳು ಸಂಸಾರ ಮಾಡಿ, ದುಡ್ಡು, ಒಡವೆ ದೋಚಿಕೊಂಡು ಪರಾರಿಯಾಗಿದ್ದಾನೆ. ಅಮಾಯಕ ಯುವತಿಯರನ್ನು ಟಾರ್ಗೆಟ್ ಮಾಡಿ ವಂಚಿಸುವ ಅಭ್ಯಾಸವನ್ನು ಮಿಥುನ್ ಕುಮಾರ್ ಬೆಳೆಸಿಕೊಂಡಿದ್ದಾನೆ. 
ಈ ಹಿಂದೆಯೂ ಇಂಥದ್ದೇ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಈ ಹಿಂದೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಿಥುನ್ ಕುಮಾರ್ ವಿರುದ್ಧ ಲವ್ , ಸೆಕ್ಸ್, ದೋಖಾ ಕೇಸ್ ದಾಖಲಾಗಿದೆ. ಆಗ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿ, ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ. ಮತ್ತೆ ಬೇರೊಬ್ಬ ಯುವತಿಯನ್ನು ನಂಬಿಸಿ ಮದುವೆಯಾಗಿ ಕೈ ಕೊಟ್ಟಿದ್ದಾನೆ. ನಾನವನಲ್ಲ, ನಾನವನಲ್ಲ ಅಂಥ ಬುದ್ದಿವಂತ ಸಿನಿಮಾದ ಹೀರೋ ಉಪೇಂದ್ರ ಹೇಳಿದಂತೆ  ನಾನು ವಂಚಕನಲ್ಲ, ವಂಚಕನಲ್ಲ ಅಂತ ಈ ಮಿಥುನ್ ಕುಮಾರ್ ಹೇಳುತ್ತಿದ್ದಾನೆ.

love sex dhoka case02

ಆರೋಪಿ ಮಿಥುನ್ ಕುಮಾರ್ ಬಂಧಿಸಿದ ಪೊಲೀಸರು

ಮತ್ತೆ ಯುವತಿಯನ್ನ ನಂಬಿಸಿ ಮದುವೆಯಾಗಿ ವಂಚಿಸಿ ಪರಾರಿಯಾಗಿದ್ದ.  ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ. ರಾಜ್ಯದ ಗೃಹ ಸಚಿವ, ನಗರ ಪೊಲೀಸ್ ಆಯುಕ್ತರ ಗಮನಕ್ಕೆ  ಈ ವಿಷಯವನ್ನು ಯುವತಿ ತಂದಿದ್ದಾಳೆ. 
ಆದಾದ ಬಳಿಕ  ಎಫ್ಐಆರ್ ದಾಖಲಿಸಿ ಆರೋಪಿಯನ್ನು  ಪೊಲೀಸರು ಬಂಧಿಸಿದ್ದಾರೆ.  ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಈ ಭಾರಿ ಕೇಸ್ ದಾಖಲಾಗಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಮಿಥುನ್ ಕುಮಾರ್ ನನ್ನು ಕಳಿಸಿದ್ದಾರೆ. 
ನನಗೆ ಆದ ಅನ್ಯಾಯ ಇನ್ಯಾರಿಗೂ ಆಗಬಾರದು ಅಂತ ಯುವತಿ ಅಳಲು ತೋಡಿಕೊಂಡಿದ್ದಾಳೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

love sex dhoka case
Advertisment