/newsfirstlive-kannada/media/media_files/2025/12/12/hh-revanna-2025-12-12-11-35-33.jpg)
ಮಾಜಿ ಸಚಿವ ಹೆಚ್.ಎಂ.ರೇವಣ್ಣ ಪುತ್ರನ ಹಿಟ್ & ರನ್ ಪ್ರಕರಣದಲ್ಲಿ ಮೃತ ಯುವಕನ ಕುಟುಂಬಕ್ಕೆ ಪರಿಹಾರ ಕೊಡುವುದಾಗಿ ಕರೆಸಿ ಅವಮಾನ ಮಾಡಲಾಗಿದೆ. ಹೆಚ್.ಎಂ.ರೇವಣ್ಣ ವಿರುದ್ಧ ಮೃತ ಯುವಕ ರಾಜೇಶ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ . ನಿಮ್ಮ ಮಗ ಸಾಯಲು ನಮ್ಮ ಕಾರೇ ಬೇಕಿತ್ತಾ? 2 ಲಕ್ಷ ಹಣ ಕೊಡುತ್ತೇವೆ ತೆಗೆದುಕೊಂಡು ಹೋಗಿ ಎಂದು ದರ್ಪ ತೋರಿದ್ದಾರೆ. ನಮ್ಮ ಕಾರಿಗೆ ಇನ್ಸೂರೆನ್ಸ್ ಇದೆ, ನ್ಯಾಯಾಲಯದಲ್ಲಿ ನೋಡಿಕೊಳ್ಳೋಣ. ಮಾಧ್ಯಮಗಳ ಮುಂದೆ ಹೋಗಿ ನಮ್ಮ ಮರ್ಯಾದೆ ಹಾಳು ಮಾಡಿದ್ದೀರಿ . ಬೇಕಿದ್ರೆ 2 ಲಕ್ಷ ಹಣ ತೆಗೆದುಕೊಳ್ಳಿ, ಇಲ್ಲವಾದ್ರೆ ಹೋಗಿ ಎಂದು ದರ್ಪ ತೋರಿರೋ ಆರೋಪ ಕೇಳಿ ಬಂದಿದೆ. ಎಚ್.ಎಂ.ರೇವಣ್ಣ ಅವರ ಈ ಮಾತುಗಳಿಂದ ನೊಂದುಕೊಂಡ ರಾಜೇಶ್ ಪೋಷಕರು, ರೇವಣ್ಣ ಕೊಡಲು ಬಂದಿದ್ದ 2 ಲಕ್ಷ ರೂಪಾಯಿ ಹಣ ಪಡೆಯದೇ ವಾಪಸ್ ಬಂದಿದ್ದಾರೆ.
/filters:format(webp)/newsfirstlive-kannada/media/media_files/2025/12/12/hh-revanna-son-4-2025-12-12-11-02-40.jpg)
ಅಪಘಾತದಿಂದ ಒಂದು ಕುಟುಂಬ ಹಾಳಾಗಿದೆ ಎಂಬ ಪಶ್ಚಾತ್ತಾಪ ಇಲ್ಲದೇ ಅವಮಾನ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಪರಿಹಾರ ಕೊಡ್ತೀನಿ ಅಂತ ಹೇಳಿ ಈಗ ಧಮ್ಕಿ ಹಾಕಿದ್ದಾರೆಂದು ಆರೋಪ ಮಾಡಿದ್ದಾರೆ. ನಮ್ಮ ಮಗನ ಸಾವಿಗೆ ನ್ಯಾಯಕೊಡಿಸಿ ಎಂದು ರಾಜೇಶ್ ಪೋಷಕರು ಕಣ್ಣೀರಿಟ್ಟಿದ್ದಾರೆ. ಕಳೆದ ಡಿಸೆಂಬರ್ 11ರ ತಡರಾತ್ರಿ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ಅಪಘಾತ ನಡೆದಿತ್ತು. ರೇವಣ್ಣ ಪುತ್ರ ಶಶಾಂಕ್ ಕಾರು ಡಿಕ್ಕಿ ಹೊಡೆದು ಬಿಳಗುಂಬ ಗ್ರಾಮದ 23 ವರ್ಷದ ರಾಜೇಶ್ ಮೃತಪಟ್ಟಿದ್ದ. ಘಟನೆ ನಡೆದಾಗ ಮೃತನ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಹೆಚ್.ಎಂ.ರೇವಣ್ಣ ಹೇಳಿದ್ದರು. ಆದರೇ, ಈಗ ದರ್ಪದ ಮಾತುಗಳನ್ನಾಡಿದ್ದಾರೆ ಎಂದು ಮೃತ ರಾಜೇಶ ಪೋಷಕರು ಆರೋಪಿಸಿದ್ದಾರೆ.
/filters:format(webp)/newsfirstlive-kannada/media/media_files/2025/12/12/hh-revanna-son-2025-12-12-10-53-03.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us