/newsfirstlive-kannada/media/media_files/2026/01/27/hitachi-payment-services-money-looting-1-2026-01-27-12-02-45.jpg)
CMS ರಾಬರಿ ಪ್ರಕರಣ ಮಾಸುವ ಬೆನ್ನಲ್ಲೇ ಮತ್ತೊಂದು ಹಣ ದರೋಡೆ ಪ್ರಕರಣ ನಡೆದಿದೆ. …ಪೇಮೆಂಟ್ ಸರ್ವೀಸ್ ಕಂಪನಿ ಸಿಬ್ಬಂದಿಯಿಂದ ಮಹಾ ವಂಚನೆ…ನಡೆದಿದೆ. ATM ಗೆ ಹಣ ತುಂಬಲು ಕೊಟ್ಟಿದ್ದ ಒಂದು ಕೋಟಿಗೂ ಅಧಿಕ ಹಣವನ್ನು ಖದೀಮರು ದೋಚಿದ್ದಾರೆ. 2025 ರ ನವೆಂಬರ್ ನಲ್ಲಿ CMS ವಾಹನ ರಾಬರಿ ಕೇಸ್…ದಾಖಲಾಗಿದ್ದು. ದೇಶಾದ್ಯಂತ ಸಿಎಂಎಸ್ ವಾಹನದ 11 ಕೋಟಿ ದರೋಡೆ ಕೇಸ್ ಸದ್ದು ಮಾಡಿತ್ತು. ಹಾಡಹಗಲೇ ನಡೆದಿದ್ದ ದರೋಡೆ ಪ್ರಕರಣವನ್ನ ಕಂಡು ಜನರು ಬೆಚ್ಚಿ ಬಿದ್ದಿದ್ದರು. CMS ಮಾಜಿ ಸಿಬ್ಬಂದಿ ಮತ್ತು ತಂಡದಿಂದ ಪಕ್ಕಾ ಪ್ಲಾನ್ ಮಾಡಿ ದರೋಡೆ ಮಾಡಲಾಗಿತ್ತು.
ಈಗ HITACHI ಎಂಬ ಮತ್ತೊಂದು ಕಂಪನಿಯ ಸಿಬ್ಬಂದಿಯು ಹಣ ದರೋಡೆ ಮಾಡಿಕೊಂಡು ಎಸ್ಕೇಪ್…ಆಗಿದ್ದಾರೆ. ಎರಡು ಪ್ರತ್ಯೇಕ ತಂಡಗಳು ಹಣ ದರೋಡೆ ಮಾಡಿವೆ. ಒಂದು ತಂಡ 50 ಲಕ್ಷ ಮತ್ತೊಂದು ತಂಡದಿಂದ 80 ಲಕ್ಷ ದರೋಡೆ ಮಾಡಿಕೊಂಡು ಎಸ್ಕೇಪ್ ಆಗಿವೆ. …
SBI, AXIS ಬ್ಯಾಂಕ್ ATMಗೆ ಹಣ ಡೆಪಾಸಿಟ್ ಮಾಡುವ ಕಂಪನಿ HITACHI payment Service Pvt ಲಿಮಿಟೆಡ್. ಕೋರಮಂಗಲದ ಆ್ಯಕ್ಸಿಸ್ ಬ್ಯಾಂಕ್ ನಿಂದ ಹಣ ತೆಗೆದುಕೊಂಡು ATM ಗಳಿಗೆ ಡೆಪಾಸಿಟ್ ಮಾಡಲು ಕಂಪನಿ ಅಧಿಕಾರಿ ಸೂಚನೆ ನೀಡಿದ್ದರು. … ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್, ಹರೀಶ್ ಕುಮಾರ್ , ಪ್ರವೀಣ್ ಕುಮಾರ್, ವರುಣ್ ಎಂಬ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಎರಡು ತಂಡ ಮಾಡಿ ಒಂದು ತಂಡಕ್ಕೆ 80 ಲಕ್ಷದ 49 ಸಾವಿರದ 800 ರೂಪಾಯಿ, ಮತ್ತೊಂದು ತಂಡಕ್ಕೆ 57 ಲಕ್ಷದ 96 ಸಾವಿರದ 400 ರೂಪಾಯಿಯನ್ನು ಹಿಟಾಚಿ ಕಂಪನಿಯ ಅಧಿಕಾರಿ ಮಿಥುನ್ ನೀಡಿದ್ದರು. ಆದ್ರೆ ಎರಡೂ ತಂಡಗಳು ATM ಗಳಿಗೆ ಹಣ ಹಾಕದೇ ಎಸ್ಕೇಪ್…ಆಗಿವೆ. ಜನವರಿ 19ನೇ ತಾರೀಖು ATMಗೆ ಹಣ ಹಾಕಲು ಅಧಿಕಾರಿ ಮಿಥುನ್…ಸೂಚಿಸಿದ್ದರು. ಸದ್ಯ ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಗೆ ಮಿಥುನ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
/filters:format(webp)/newsfirstlive-kannada/media/media_files/2026/01/27/hitachi-payment-services-money-looting-2026-01-27-12-03-31.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us