/newsfirstlive-kannada/media/media_files/2026/02/03/dharamaraya-swamy-temple-gold-stolen-2026-02-03-18-36-37.jpg)
ಬೆಂಗಳೂರಿನ ಧರ್ಮರಾಯನಿಗೇನೇ ದೋಖಾ ಮಾಡಲಾಗಿದೆಯಾ? ಐತಿಹಾಸಿಕ ಕರಗ ಉತ್ಸವ ನಡೆಯೋ ಬೆಂಗಳೂರಿನ ಧರ್ಮರಾಯನ ಕ್ಷೇತ್ರದಲ್ಲಿ ಚಿನ್ನ ಮಿಸ್ಸಿಂಗ್​ ಆಗಿರೋ ಆರೋಪ ಕೇಳಿಬಂದಿದೆ.. ಅಚ್ಚರಿ ಅಂದ್ರೆ ಮುಜರಾಯಿ ಇಲಾಖೆ ಅಧಿಕಾರಿಗಳೇ ಚಿನ್ನ ಕದ್ದಿದ್ದಾರೆ ಅಂತ ದೇವಾಲಯ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಕೆ.ಸತೀಶ್ ಸಾಕ್ಷಿ ಸಮೇತ ಸಾಲು ಸಾಲು ಆರೋಪ ಹೊರಿಸಿದ್ದಾರೆ. ಈ ಬೆನ್ನಲ್ಲೇ ಇದೀಗ ಇಓ ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ.
‘ಚಿನ್ನ’.. ಇದೇ ಚಿನ್ನ ಇವತ್ತು ಧರ್ಮರಾಯ ಸ್ವಾಮಿ ಸನ್ನಿಧಿಯಲ್ಲಿ ‘ಅಧರ್ಮ’? ನಡೀತಿದ್ಯಾ? ಅನ್ನೋ ಪ್ರಶ್ನೆ ಉದ್ಭವಿಸಿದೆ.. ಮುಜರಾಯಿ ಇಲಾಖೆ ಅಧಿಕಾರಿಗಳೇ ಹುಂಡಿ ಚಿನ್ನ ಕದ್ದರಾ? ಅನ್ನೋ ಅನುಮಾನಗಳನ್ನ ಮೂಡಿಸಿದೆ.. ಫೋಟೋ, ವಿಡಿಯೋ ಸಾಕ್ಷಿ, ಡಾಕ್ಯುಮೆಂಟ್ಸ್​​ ಹೊರ ಬಿಟ್ಟಿರೋ ಕ್ಷೇತ್ರದ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಸತೀಶ್, ಮುಜರಾಯಿ ಇಲಾಖೆ ಇಓ ನಾಗರಾಜ್ ವಿರುದ್ಧವೇ ಸಾಲು ಸಾಲು ಆರೋಪ ಮಾಡಿದ್ದಾರೆ..
ಕರಗ ನಡೆಯೋ ಧರ್ಮರಾಯನ ಸನ್ನಿಧಿಯಲ್ಲಿ ‘ಅಧರ್ಮ’!
ಮುಜರಾಯಿ ಇಲಾಖೆ ಅಧಿಕಾರಿಗಳೇ ಹುಂಡಿ ಚಿನ್ನ ಕದ್ದರಾ?
ಐತಿಹಾಸಿಕ ಕರಗ ನಡೆಯೋ ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನದ ಹುಂಡಿಗೆ ಹಾಕಿದ್ದ ಚಿನ್ನಾಭರಣದ ತೂಕದಲ್ಲಿ ಭಾರೀ ಮೋಸ ಆಗಿರೋ ಆರೋಪ ಕೇಳಿಬಂದಿದೆ.. ಮುಜರಾಯಿ ಇಲಾಖೆ ಇಓ ನಾಗರಾಜ್ ಬೆಲೆಬಾಳುವ ಒಡವೆಗಳನ್ನ ದೇಗುಲದಿಂದ ಕಳ್ಳತನ ಮಾಡಿದ್ದಾರಂತೆ.. ಇಷ್ಟೇ ಅಲ್ದೆ, ಕರಗ ಉತ್ಸವದಲ್ಲಿ ಬಹು ದೊಡ್ಡ ಭ್ರಷ್ಟಾಚಾರ ಆಗಿದೆ.. ದೇವಸ್ಥಾನಕ್ಕೆ ಹೂವು ಕೊಡೋರಿಗೆ ಸರಿಯಾಗಿ ದುಡ್ಡು ಕೊಟ್ಟಿಲ್ಲ ಅಂತ ಸಾಕ್ಷಿ ಸಮೇತ ದೇವಾಲಯ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಕೆ.ಸತೀಶ್ ಸಾಲು ಸಾಲು ಆರೋಪ ಮಾಡಿದ್ದಾರೆ.
ಧರ್ಮರಾಯನ ಸನ್ನಿಧಿಯಲ್ಲಿ ‘ಅಧರ್ಮ’!
ಕಾಣಿಕೆ ಬಂದ ಒಡವೆ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ
ಮುಜರಾಯಿ ಇಲಾಖೆಯ ಆಯುಕ್ತರ ಅನುಮತಿ ಪಡೀಬೇಕು
ದೇವಸ್ಥಾನದ ಹುಂಡಿ ಎಣಿಸಿದಾಗ ಹಣ ಮತ್ತು ನೆಕ್ಲೆಸ್ ಬಂದಿತ್ತು
ಮುಜರಾಯಿ ಅವರೇ ಅದನ್ನು ಚಿನ್ನ ಎಂದು ಚೆಕ್ ಮಾಡಿದ್ದಾರೆ
ಇಓ ಜೇಬ್​ಲ್ಲಿ ಇಟ್ಕೊಂಡು ಹೋಗಿದ್ದಾರೆ ಅಂತ ಮಾಹಿತಿ ಸಿಗುತ್ತೆ
ಆಮೇಲೆ ನಾವು ಬಂದು ಕೇಳಿದಾಗ, ನಮ್ಮನ್ನ ಬರುವಂತಿಲ್ಲ ಅಂದ್ರು
ಮೂರು ದಿನದ ಬಳಿಕ ದೇವಾಲಯಕ್ಕೆ ವಾಪಸ್ ತಂದುಕೊಟ್ಟಿದ್ದಾರೆ
122 ಗ್ರಾಂ​ ಒಡವೆ ಇತ್ತು... ಆದರೆ 68 ಗ್ರಾಂ ಇತ್ತು ಅಂತ ಹೇಳಿದ್ರು
(ನಿಯಮದ ಪ್ರಕಾರ ಕಾಣಿಕೆ ಬಂದ ಒಡವೆಯನ್ನ ಮುಜರಾಯಿ ಇಲಾಖೆಯ ದೇವಾಲಯದ ಒಡವೆಗಳನ್ನು ದೇವಾಲಯದ ಹೊರಗಡೆ ತೆಗೆದುಕೊಂಡು ಹೋಗಬೇಕು ಅಂದರೆ, ಮುಜರಾಯಿ ಇಲಾಖೆಯ ಆಯುಕ್ತರ ಅನುಮತಿ ಪಡೀಬೇಕು.. ಆದ್ರಿಲ್ಲಿ ಇಓ ನಾಗರಾಜ್, ನಿಯಮ ಬಾಹಿರವಾಗಿ ಧರ್ಮರಾಯ ದೇಗುಲದ ಹುಂಡಿ ಎಣಿಸಿದಾಗ, ಸಿಕ್ಕ 122 ಗ್ರಾಂ ಚಿನ್ನದ ನೆಕ್ಲೆಸ್​​​ ಅನ್ನ ಜೇಬ್​ಲ್ಲಿ ಇಟ್ಕೊಂಡು ಹೋಗಿದ್ದಾರೆ ಅನ್ನೋ ಆರೋಪ ಇದೆ. ಆಮೇಲೆ ಅಧ್ಯಕ್ಷ ಸತೀಶ್ ಅವ್ರು ಬಂದು ಕೇಳಿದಾಗ, ನೀವು ಬರುವಂತಿಲ್ಲ ಅಂತ ಹೇಳಿದ್ರು.. ಅಲ್ದೆ ಹುಂಡಿಯಲ್ಲಿದ್ದ ಚಿನ್ನಡ ನೆಕ್ಲೆಸ್​​ ಎತ್ಕೊಂಡು ಹೋಗಿ ಮೂರು ದಿನದ ಬಳಿಕ ತಂದು ದೇಗುಲಕ್ಕೆ ಒಪ್ಪಿಸಿದ್ದಾರೆ.. ಈಗ ನೋಡಿದ್ರೆ, 122 ಗ್ರಾಂ​ ಇದ್ದ ಒಡವೆಯನ್ನ 68 ಗ್ರಾಂ ಚಿನ್ನ ಅಂತ ಹೇಳ್ತಿದ್ದಾರೆ.. 54ಗ್ರಾಂ ಚಿನ್ನ ಎಲ್ಲಿ ಹೋಯ್ತು? ಅಂತ ಪ್ರಶ್ನಿಸಿದ್ದಾರೆ.. )
ಆರೋಪಗಳೇನು?
ಕರಗ ಉತ್ಸವದಲ್ಲಿ ಭ್ರಷ್ಟಾಚಾರ ಆಗುತ್ತಿದೆ ಅಂತ ಆರೋಪ
10 ಲಕ್ಷ ಬಿಡುಗಡೆ ಮಾಡ್ಬೇಕಂದ್ರೆ 2 ಲಕ್ಷ ರೂ. ಲಂಚ ಕೇಳ್ತಾರೆ
ಸಮಯಕ್ಕೆ ಬಂದು ಬಾಡಿಗೆ, ಹುಂಡಿ ಹಣ ತಗೊಂಡು ಹೋಗ್ತಾರೆ
ದೇವಸ್ಥಾನಕ್ಕೆ ಹೂವು ಕೊಡೋರಿಗೆ ಸರಿಯಾಗಿ ದುಡ್ಡು ಕೊಡಲ್ಲ
ತಹಶೀಲ್ದಾರ್ ಅರವಿಂದ್ ಬಾಬು, ಇಓ ನವೀನ್, ಎಡಿಸಿ ಜಗದೀಶ್
ಮುಜರಾಯಿ ಎಸಿ ಪುರುಷೋತ್ತಮ್ ಮೇಲೆ ಭ್ರಷ್ಟಾಚಾರ ಆರೋಪ
(ಇನ್ನು ಕರಗ ಉತ್ಸವಕ್ಕೆ 10 ಲಕ್ಷ 10 ಲಕ್ಷ ಬಿಡುಗಡೆ ಮಾಡ್ಬೇಕಂದ್ರೆ 2 ಲಕ್ಷ ರೂ. ಲಂಚ ಕೇಳ್ತಾರೆ... ಸಮಯಕ್ಕೆ ಬಂದು ಬಾಡಿಗೆ, ಹುಂಡಿ ಹಣ ತಗೊಂಡು ಹೋಗ್ತಾರೆ.. ದೇವಸ್ಥಾನಕ್ಕೆ ಹೂವು ಕೊಡೋರಿಗೆ ಸರಿಯಾಗಿ ದುಡ್ಡು ಕೊಡಲ್ಲ ಅಂತ ತಹಶಿಲ್ದಾರ್ ಅರವಿಂದ್ ಬಾಬು, ಕಳೆದ ವರ್ಷವಿದ್ದ ಇಓ ನವೀನ್, ಎಡಿಸಿ ಜಗದೀಶ್ ಮತ್ತು ಮುಜರಾಯಿ ಎಸಿ ಪುರುಷೋತ್ತಮ್ ಅನ್ನೋ ಐದು ಮಂದಿ ಮುಜರಾಯಿ ಇಲಾಖೆ ಅಧಿಕಾರಿಗಳ ಮೇಲೆ ಆರೋಪ ಹೊರಸಿದ್ದಾರೆ... )
/filters:format(webp)/newsfirstlive-kannada/media/media_files/2026/02/03/dharamaraya-swamy-temple-gold-stolen-1-2026-02-03-18-39-18.jpg)
ಅತ್ತ ಯಾರು ತಪ್ಪು ಮಾಡಿದ್ದಾರೆ ಕ್ರಮ ಆಗುತ್ತೆ. ಆ ಚೈನ್ ಅಲ್ಲಿಂದ ಹೇಗೆ ಮಿಸ್ ಆಯ್ತು? ಹುಂಡಿಗೆ ಮತ್ತೆ ಆ ಚೈನ್ ಹೇಗೆ ಬಂತು? ಅಂತ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮುಜರಾಯಿ ಇಲಾಖೆಯ ಇಓ ಕೆ.ನಾಗರಾಜ್ ಅವ್ರನ್ನ ಮುಜರಾಯಿ ಇಲಾಖೆಯ ಆಯುಕ್ತ ಶರತ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಒಟ್ಟಾರೆ, ಇವತ್ತು ಸುದಿಗೋಷ್ಢಿ ನಡೆಸಿದ ಧರ್ಮರಾಯ ದೇವಾಲಯ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಕೆ.ಸತೀಶ್ ಹಿಂದೂ ದೇವಾಲಯಗಳನ್ನ ಮುಜರಾಯಿ ಇಲಾಖೆಯಿಂದ ಬಿಡಿಸಿಕೊಡಿ ಅಂತ ಆಗ್ರಹಿಸಿದ್ದಾರೆ.. ಏನೇ ಹೇಳಿ ತನಿಖೆ ಬಳಿಕಷ್ಟೇ ಚಿನ್ನ ಎಷ್ಟು ಗ್ರಾಂ ಇತ್ತು? ಕದ್ದಿದ್ದು ಯಾರು? ಏನಾಯ್ತು? ಅನ್ನೋ ಹಲವು ಪ್ರಶ್ನೆಗೆ ಉತ್ತರ ಸಿಗಲಿದೆ..
/filters:format(webp)/newsfirstlive-kannada/media/media_files/2026/02/03/dharamaraya-swamy-temple-gold-stolen-2-2026-02-03-18-39-33.jpg)
ಭರತ್​ ಕೃಷ್ಣಪ್ಪ, ಜೊತೆ ಸವಿತಾ ನ್ಯೂಸ್​​ಫಸ್ಟ್​ ಬೆಂಗಳೂರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us