/newsfirstlive-kannada/media/post_attachments/wp-content/uploads/2025/04/Bangalore-RCB-Fan-Fine.jpg)
ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ದಂಡ ಪಾವತಿಗೆ ಶೇ.50 ರಷ್ಟು ರಿಯಾಯಿತಿ
ಬೆಂಗಳೂರು ವಾಹನ ಸವಾರರಿಗೊಂದು ಗುಡ್ ನ್ಯೂಸ್. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಮಯ ಉಲಂಘಿಸಿ ದಂಡ ಕಟ್ಟಬೇಕಿದ್ದರೇ, ಈಗ ದಂಡ ಕಟ್ಟೋದು ಉತ್ತಮ. ಏಕೆಂದರೇ, ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡ ಬಟ್ಟೆ ಅಂಗಡಿಗಳಂತೆ ಫೈನ್ ಕಟ್ಟಲು ಆಫರ್ ಕೊಟ್ಟಿದ್ದಾರೆ. ಬಟ್ಟೆ ಅಂಗಡಿಗಳಲ್ಲಿ ಬಟ್ಟೆಗಳನ್ನು ಶೇ.50 ರ ಡಿಸ್ಕೌ ಂಟ್ ನಲ್ಲಿ ಮಾರಾಟ ಮಾಡುವುದನ್ನು ನೋಡಿದ್ದೇವೆ. ಅದೇ ರೀತಿ ಈಗ ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡ ಫೈನ್ ಕಟ್ಟಲು ಶೇ.50 ರಷ್ಟು ರಿಯಾಯಿತಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಬೈಕ್, ಕಾರಿನಲ್ಲಿ ಸಂಚಾರ ನಿಯಮ ಉಲಂಘಿಸಿದ್ದರೇ, ಈಗ ದಂಡ ಕಟ್ಟಿಬಿಡಿ. ಶೇ.50 ರಷ್ಟು ರಿಯಾಯಿತಿ ಸಿಗಲಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರವರೆಗೆ ದಂಡ ಪಾವತಿಗೆ ಶೇ.50 ರಷ್ಟು ರಿಯಾಯಿತಿ ನೀಡಲು ಟ್ರಾಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಹಳೆಯ ಟ್ರಾಫಿಕ್ ಫೈನ್ ಗಳನ್ನು ಆಗಸ್ಟ್ 23 ರಿಂದ ಕಟ್ಟಿದ್ದರೇ, ಶೇ.50 ರಷ್ಟು ದಂಡದ ಹಣದಲ್ಲಿ ರಿಯಾಯಿತಿ ಸಿಗಲಿದೆ. ಬೆಂಗಳೂರು ಸಂಚಾರಿ ವ್ಯಾಪ್ತಿಯಲ್ಲಿ ಮಾತ್ರ ಉಲಂಘಿಸಿದ್ದರೇ, ಈ ಶೇ.50 ರ ರಿಯಾಯಿತಿಯಲ್ಲಿ ದಂಡ ಪಾವತಿಸುವ ಅವಕಾಶ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.