/newsfirstlive-kannada/media/media_files/2025/08/26/bangalore-tunnel-road-project-03-2025-08-26-17-07-35.jpg)
ಬೆಂಗಳೂರು ಟನಲ್ ರೋಡ್ ನಿರ್ಮಾಣಕ್ಕೆ ಮತ್ತೆ ಹಿನ್ನಡೆ!
ಬೆಂಗಳೂರಿನ ಟನಲ್ ರಸ್ತೆಗೆ ಆರಂಭಿಕ ಹಿನ್ನಡೆ ಎದುರಾಗಿದೆ. ಬೆಂಗಳೂರಿನಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೂ ಭೂಮಿಯೊಳಗೆ ಸುರಂಗ ಮಾರ್ಗ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು. ಇದರಿಂದ ಬೆಂಗಳೂರಿನ ಟ್ರಾಫಿಕ್ ಜಾಮ್ ಒತ್ತಡದ ಸಮಸ್ಯೆ ಪರಿಹಾರ ನೀಡಬಹುದು ಎಂಬುದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ಲ್ಯಾನ್. ದೇಶದಲ್ಲಿ ಮುಂಬೈ, ದೆಹಲಿಯಲ್ಲಿ ಸುರಂಗ ಮಾರ್ಗದ ರಸ್ತೆಗಳಿವೆ. ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಬೆಟ್ಟಗುಡ್ಡ, ಕಣಿವೆ ಪ್ರದೇಶಗಳಲ್ಲಿ ಸುರಂಗ ಮಾರ್ಗದ ಹೆದ್ದಾರಿಗಳನ್ನೇ ನಿರ್ಮಾಣ ಮಾಡಲಾಗಿದೆ. ಹೀಗಾಗಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರಕ್ಕೆ ಸುರಂಗ ರಸ್ತೆ ನಿರ್ಮಾಣವೇ ಪರಿಹಾರ ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಟನಲ್ ರಸ್ತೆ ಯೋಜನೆಯಾಗಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ಟನಲ್ ರಸ್ತೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಟನಲ್ ರಸ್ತೆ ನಿರ್ಮಾಣಕ್ಕೆ ಇತ್ತೀಚೆಗಷ್ಟೆ ಬಿ- ಸ್ಮೈಲ್ ಟೆಂಡರ್ ಕರೆದಿದೆ. ಸುರಂಗ ರಸ್ತೆ ಯೋಜನೆಗೆ ನಾಲ್ಕು ಕಂಪನಿಗಳಿಂದ ಬಿಡ್ ಸಲ್ಲಿಕೆಯಾಗಿತ್ತು.
ಅದಾನಿ ಗ್ರೂಪ್, ದಿಲಿಪ್ ಬಿಲ್ಡ್‌ಕಾನ್, ವಿಶ್ವ ಸಮುದ್ರ ಎಂಜಿನಿಯರಿಂಗ್, ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಬಿಡ್ ನಲ್ಲಿ ಭಾಗಿಯಾಗಿವೆ . ಬಿಡ್ ಸಲ್ಲಿಸಿವೆಯಾದ್ರೂ ಬಿ-ಸ್ಮೈಲ್ ನ ಕಂಡಿಶನ್ಸ್ ಗೆ ತಿರಸ್ಕೃತವಾಗೋ ಸಾಧ್ಯತೆ ಇದೆ. ಬಿಡ್ ನಲ್ಲಿ ಭಾಗಿಯಾಗಿರುವ 4 ಕಂಪನಿಗಳು ತಿರಸ್ಕೃತವಾಗುವ ಸಾಧ್ಯತೆ ಇದೆ. ಬಿಡ್ ಸಲ್ಲಿಸುವ ಕಂಪನಿಗಳಿಗೆ ಪ್ರಮುಖ ಷರತ್ತುಗಳನ್ನು ಹಾಕಲಾಗಿದೆ
ಷರತ್ತುಗಳ ಅನ್ವಯ ಅರ್ಹತೆಯನ್ನು ಕಂಪನಿಗಳು ಕಳೆದುಕೊಳ್ಳುತ್ತಾವೆ. 5 ವರ್ಷಗಳ ಅವಧಿಯಲ್ಲಿ ನಿರ್ಮಿಸಿದ ರಸ್ತೆ, ಸುರಂಗ, ಸೇತುವೆ, ಮೇಲ್ಸೇತುವೆ, ಮೆಟ್ರೊ ರೈಲು ಮಾರ್ಗಗಳು ಕುಸಿದಿರಬಾರದು ಎಂಬ ಷರತ್ತು ಹಾಕಲಾಗಿದೆ. ಈ ಷರತ್ತಿನಿಂದ ಬಿಡ್ ನಲ್ಲಿ ಭಾಗಿಯಾಗಿರುವ 2 ಕಂಪನಿಗಳು ಬಿಡ್ ನಿಂದ ಔಟ್ ಆಗಲಿವೆ. ದಿಲಿಪ್ ಬಿಲ್ಡ್‌ಕಾನ್ ಕಂಪನಿ ಆಂಧ್ರಪ್ರದೇಶದಲ್ಲಿ ನಿರ್ಮಿಸಿದ್ದ ಅಂಕಪಲ್ಲಿ ಮೇಲ್ವೇತುವೆ ಕುಸಿತವಾಗಿತ್ತು. 2021ರ ಜುಲೈನಲ್ಲಿ ಕುಸಿತವಾಗಿದ್ದು, ಈ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ದೀಲೀಪ್ ಬಿಲ್ಡಕಾನ್ ಕಂಪನಿಗೆ NHAI ನಿಂದ 3 ಕೋಟಿ ದಂಡ ವಿಧಿಸಲಾಗಿದೆ.
ಅದಾನಿ ಗ್ರೂಪ್ ಕೇರಳದಲ್ಲಿ ನಿರ್ಮಿಸಿದ್ದ ಅಳಿಯೂರ್-ವೆಂಗಲಮ್ ರಸ್ತೆಯ ಒಂದು ಭಾಗ ಕುಸಿದಿತ್ತು.
ಈ ರಾಷ್ಟ್ರೀಯ ಹೆದ್ದಾರಿ ಒಂದು ಭಾಗ ಕುಸಿತ ಸಂಭವಿಸಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಎನ್‌ಎಚ್‌ಎಐ ನಿಂದ ಅದಾನಿ ಗ್ರೂಪ್ ಗೆ ದಂಡ ವಿಧಿಸಲಾಗಿತ್ತು. ಜೊತೆಗೆ ಕಂಪನಿಯನ್ನ ಒಂದು ವರ್ಷ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲು ಶಿಫಾರಸು ಮಾಡಲಾಗಿತ್ತು. ಅದಾನಿ ಗ್ರೂಪ್ ಅನ್ನು ಹೆದ್ದಾರಿ ನಿರ್ಮಾಣದ ಕಾಮಗಾರಿಗಳಿಂದ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು. ಈ ಅವಘಡಗಳ ಕಾರಣ ದಿಲಿಪ್ ಬಿಲ್ಡ್‌ಕಾನ್ ಮತ್ತು ಅದಾನಿ ಗ್ರೂಪ್‌ನ ಬಿಡ್‌ಗಳು ತಿರಸ್ಕೃತವಾಗುವ ಸಾಧ್ಯತೆ ಇದೆ.
/filters:format(webp)/newsfirstlive-kannada/media/media_files/2025/11/03/tunnel-road-in-bangalore-2025-11-03-13-45-18.jpg)
ಬಿ-ಸ್ಟೈಲ್ ನ ಮತ್ತೊಂದು ಪ್ರಮುಖ ಷರತ್ತು..!
ಬಿಡ್ ನಲ್ಲಿ ಭಾಗವಹಿಸುವ ಕಂಪನಿಗಳ 2025ರ ಮೌಲ್ಯ 2192 ಕೋಟಿಯಷ್ಟಿರಬೇಕು.
ಈ ಕಂಪನಿಗಳು ಮಾತ್ರ ಬಿಡ್ ಸಲ್ಲಿಸಬೇಕೆಂಬ ಷರತ್ತು ಇದೆ. ಆದ್ರೆ ಬಿಡ್ ಸಲ್ಲಿಸಿರೊ ಎಲ್ಲಾ ಕಂಪನಿಗಳ ಮೌಲ್ಯ ಇಷ್ಟಿಲ್ಲ . ಇದೂ ಕೂಡ ಬಿಡ್ ತಿರಸ್ಕೃತವಾಗಲು ಕಾರಣ .
ಇನ್ನು ಟನಲ್ ರಸ್ತೆ ನಿರ್ಮಾಣದಲ್ಲಿ ಅನುಭವ ಹೊಂದಿರುವ ಎಲ್ ಆ್ಯಂಡ್ ಟಿ, ಟಾಟಾ ಗ್ರೂಪ್, ಆಫ್ಯಾನ್ಸ್, ಎಚ್‌ಸಿಸಿ ಕಂಪನಿಗಳು ನಮ್ಮ ದೇಶದಲ್ಲಿವೆ. ಆದ್ರೆ ಈ ಯಾವುದೇ ಕಂಪನಿಗಳು ಟೆಂಡರ್‌ನಲ್ಲಿ ಭಾಗಿಯಾಗಿಲ್ಲ . ಇದು ಸರ್ಕಾರದ ಮಹತ್ವಾಕಾಂಕ್ಷೆಯ ಯೊಜನೆಗೆ ಆರಂಭಿಕ ಹಿನ್ನಡೆಗೆ ಕಾರಣವಾಗಿದೆ. ವಿಪಕ್ಷಗಳ ಭಾರೀ ವಿರೋಧದ ನಡುವೆ ಯೋಜನೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಇದರಿಂದ ಹಿನ್ನಡೆಯಾಗಿದೆ. ಇದೀಗ ಅರ್ಹ ಕಂಪನಿಗಳು ಬಿಡ್ ನಲ್ಲಿ ಭಾಗಿಯಾಗದೇ ಇರೋದು ಟನಲ್ ರಸ್ತೆಗೆ ಹಿನ್ನಡೆಯಾಗುತ್ತಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us