/newsfirstlive-kannada/media/media_files/2025/11/28/keb-engineers-banners-2025-11-28-17-41-35.jpg)
ರೇಸ್ ಕೋರ್ಸ್ ರಸ್ತೆಯಲ್ಲಿ ಹಾಕಿರುವ ಬ್ಯಾನರ್, ಹೋರ್ಡಿಂಗ್ಸ್ ಗಳು
ಬೆಂಗಳೂರಿನಲ್ಲಿ ಚುನಾವಣೆ ಹೆಸರಲ್ಲಿ ಬ್ಯಾನರ್​​, ಹೋರ್ಡಿಂಗ್ಸ್​ ಭರಾಟೆ ಜೋರಾಗಿದೆ. ಬೆಸ್ಕಾಂ ಇಂಜಿನಿಯರ್​​ಗಳಿಗೆ ಹೇಳೋರು ಕೇಳೋರು ಇಲ್ಲದಂತಾಗಿದೆ. ಬೆಂಗಳೂರಿನಲ್ಲಿ ಒಂದಲ್ಲ, ಎರಡಲ್ಲ ಸಾವಿರಾರು ಬ್ಯಾನರ್​​ಗಳು, ಹೋರ್ಡಿಂಗ್ಸ್​ ಗಳು ರಾರಾಜಿಸುತ್ತಿವೆ. ಬೆಂಗಳೂರಿನ ಹೃದಯ ಭಾಗದ ಆನಂದ್​​​ ರಾವ್​ ಸರ್ಕಲ್​​, ಗಾಂಧಿನಗರ, ರೇಸ್​​ಕೋರ್ಸ್​ ರಸ್ರೆ, ಇಂಧನ ಭವನದ ರಸ್ತೆಗಳ ತುಂಬೆಲ್ಲಾ ಹೋರ್ಡಿಗ್ಸ್​ ಹಾವಳಿ ಜೋರಾಗಿದೆ. ಸರ್ಕಾರಿ ಇಂಜಿನಿಯರ್​​ಗಳಿಂದಲೇ ನಿಯಮ ಉಲ್ಲಂಘನೆ ಆಗುತ್ತಿದೆ. ಕಾನೂನು ಗಾಳಿಗೆ ತೂರಿ ಸಾವಿರಾರು ಬ್ಯಾನರ್​​, ಹೋರ್ಡಿಗ್ಸ್​ ಅಳವಡಿಕೆ ಮಾಡಲಾಗಿದೆ.
ರಸ್ತೆ ರಸ್ತೆಗಳಲ್ಲಿ ಸೂಪರಿಟೆಂಡೆಂಟ್​ ಇಂಜಿನಿಯರ್​​ ಬಸವಣ್ಣ ಹೋರ್ಡಿಂಗ್ಸ್​, ಬ್ಯಾನರ್​ ಗಳು ರಾರಾಜಿಸುತ್ತಿವೆ. ಹೈಕೋರ್ಟ್​ ಆದೇಶ, ಬಿಬಿಎಂಪಿ ನಿಯಮಕ್ಕೆ ಇಂಜಿನಿಯರ್ ಗಳು ಯಾವುದೇ ಕಿಮ್ಮತ್ತು ನೀಡಿಲ್ಲ. ರಾಜಕಾರಣಿಗಳನ್ನೂ ನಾಚಿಸುವಂತೆ ಸಿಕ್ಕಸಿಕ್ಕಲ್ಲಿ ಹೋರ್ಡಿಂಗ್ಸ್​, ಬ್ಯಾನರ್​​ಗಳನ್ನು ಹಾಕಿದ್ದಾರೆ. ಇವರೇನೂ ಚುನಾವಣೆ ನಡೆಸ್ತಿದ್ದಾರಾ ಅಥವಾ ನಗರದ ಸೌಂದರ್ಯವನ್ನ ಹಾಳು ಮಾಡ್ತಿದ್ದಾರಾ..? ಎಂಬ ಪ್ರಶ್ನೆ ಉದ್ಭವವಾಗಿದೆ.
ಬೆಂಗಳೂರು ನಗರದಲ್ಲಿ ಯಾವುದೇ ಬ್ಯಾನರ್, ಹೋರ್ಡಿಂಗ್ಸ್ ಹಾಕಬಾರದೆಂದು ಹೈಕೋರ್ಟ್ ಆದೇಶ ನೀಡಿದೆ. ಆದರೇ, ಹೈಕೋರ್ಟ್ ಆದೇಶವನ್ನು ಬೆಸ್ಕಾಂ, ಕೆಇಬಿ ಇಂಜಿನಿಯರ್ ಗಳು ಉಲಂಘಿಸಿದ್ದಾರೆ.
ಇವರಿಗೆ ಮೇಲಾಧಿಕಾರಿಗಳು ಮತ್ತು ಕಾನೂನಿನ ಭಯ ಇಲ್ಲ. ಕೆಇಬಿ ಇಂಜಿನಿಯರ್ಸ್​ ಅಸೋಸಿಯೇಶನ್​​​ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬ್ಯಾನರ್, ಹೋರ್ಡಿಂಗ್ ಗಳನ್ನ ಹಾಕಲಾಗಿದೆ.
ಕೆಇಬಿ ಇಂಜಿನಿಯರ್ ಗಳ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಸೂಪರಿಟೆಂಡೆಂಟ್​ ಇಂಜಿನಿಯರ್​​ ಬಸವಣ್ಣ ಸ್ಪರ್ಧೆ ಮಾಡಿದ್ದಾರೆ. ಹೆಬ್ಬಾಳ ಕಾರ್ಯ ನಿರ್ವಾಹಕ ಅಭಿಯಂತರ ಶಿವರಾಮ್,​KPTCL ಕಾರ್ಯನಿರ್ವಾಹಕ ಅಭಿಯಂತರ ಸುಧಾಕರ್​​ ಅವರ ಪೋಟೋಗಳಿರುವ ಬ್ಯಾನರ್ , ಹೋರ್ಡಿಂಗ್ ಗಳು ಹೆಚ್ಚಾಗಿ ರಾರಾಜಿಸುತ್ತಿವೆ. ಯಾವುದೇ ಅನುಮತಿ ಪಡೆಯದೆ ರಾಜಾರೋಷವಾಗಿ ಅಳವಡಿಸಿರುವ ಬ್ಯಾನರ್​​, ಹೋರ್ಡಿಂಗ್ಸ್ ಗಳು GBA ಅಧಿಕಾರಿಗಳೇ ಇದು ನಿಮ್ಮ ಗಮನಕ್ಕೆ ಬಂದಿಲ್ವಾ..? ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/11/28/keb-engineers-banners02-2025-11-28-17-42-20.jpg)
ಜನಸಾಮಾನ್ಯರು ಏನಾದರೂ ಒಂದೆರಡು ಬ್ಯಾನರ್​​​ ಹಾಕಿದ್ರೆ ಕೂಡಲೇ FIR ಮಾಡಿ, ದಂಡ ಹಾಕಿ ಕ್ರಮ ತೆಗೆದುಕೊಳ್ತೀರಿ. ಇವರಿಗೆ ಯಾವುದೇ FIR, ದಂಡ ಅನ್ವಯಿಸಲ್ವಾ..? ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್​​, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್​​ ರಾವ್​ ಅವರೇ ಇಂಜಿನಿಯರ್ ಗಳ ಆಟೋಟೋಪಗಳನ್ನೊಮ್ಮೆ ನೋಡಿ. ಏನು ಕ್ರಮ ಕೈಗೊಳ್ಳಬೇಕೆಂದು ನೀವೇ ನಿರ್ಧರಿಸಿ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us