/newsfirstlive-kannada/media/media_files/2025/10/18/national-college-2-2025-10-18-16-37-34.jpg)
ನ್ಯಾಷನಲ್ ಎಜುಕೇಷನ್ ಸೊಸೈಟಿಯಿಂದ ಗುರುವಂದನಾ ಕಾರ್ಯಕ್ರಮ
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಹ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಹ: ಎಂದು ಹೇಳುತ್ತೇವೆ. ಸಾವಿರಾರು ಮಕ್ಕಳ ಭವಿಷ್ಯ ರೂಪಿಸೋ ಶಿಕ್ಷಕರು, ಉಪನ್ಯಾಸಕರನ್ನ ಗೌರವಿಸೋ ಸಲುವಾಗಿ ಬಸವನಗುಡಿಯ NES ಶಿಕ್ಷಣ ಸಂಸ್ಥೆ ವತಿಯಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.ಗುರುವಂದನಾ ಕಾರ್ಯಕ್ರಮದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಹಾಗೂ ಎನ್.ಇ.ಎಸ್ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿಗಳಾದ ನ್ಯೂಸ್ ಫಸ್ಟ್ ಕನ್ನಡ ಸುದ್ದಿವಾಹಿನಿಯ MD ಅಂಡ್ CEO ಎಸ್.ರವಿಕುಮಾರ್, ಎಸ್.ಎಲ್.ವಿ ಡೆವಲಪರ್ಸ್ ಎಂ.ಡಿ ನಾಗರಾಜ್ ಭಾಗಿಯಾಗಿದ್ದರು.
ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಪರಿಷತ್ ಸದಸ್ಯ ಪುಟ್ಟಣ್ಣ NES ಶಿಕ್ಷಣ ಸಂಸ್ಥೆ ಹಾಗೂ ಎಚ್.ನರಸಿಂಹಯ್ಯರ ಜೊತೆಗಿನ ತಮ್ಮ ಒಡೆನಾಟವನ್ನ ಮೆಲುಕು ಹಾಕಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎನ್.ಇ.ಎಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ನ್ಯೂಸ್ ಫಸ್ಟ್ ಸಂಸ್ಥೆಯ MD & CEO ಎಸ್.ರವಿಕುಮಾರ್ ಮಕ್ಕಳಿಗೆ ಎಜುಕೇಷನ್ ಜೊತೆಗೆ ಎಕ್ಸ್ ಪೋಷರ್ ತುಂಬಾ ಮುಖ್ಯ. ಎನ್.ಇ.ಎಸ್ ಸಂಸ್ಥೆಯ ಶಿಕ್ಷಕರು ಹಾಗೂ ಉಪನ್ಯಾಸಕರು ವಿದ್ಯೆ ಮತ್ತು ಸಂಸ್ಕಾರದ ಮೂಲಕ ಮಕ್ಕಳನ್ನ ತಿದ್ದುವುದರ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿದ್ದಾರೆ ಎಂದು ರವಿಕುಮಾರ್ ಹೇಳಿದ್ದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು, ವಿದ್ಯೆ, ಜ್ಞಾನ, ಸಂಸ್ಕಾರದ ಮೂಲಕ ಶಿಕ್ಷಣವನ್ನ ಧಾರೆ ಎರೆಯೋ ಶಿಕ್ಷಕರನ್ನ ನೆನೆದು ಅವರಿಗೆ ಗುರುವಂದನೆ ಸಲ್ಲಿಸಿದ NES ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ.