/newsfirstlive-kannada/media/media_files/2025/10/23/penaunt-jatra-at-basavanagudi-2025-10-23-18-27-58.jpg)
ಬಸವನಗುಡಿಯಲ್ಲಿ ನವಂಬರ್ 17 ರಿಂದ 5 ದಿನ ಕಡಲೆಕಾಯಿ ಪರಿಷೆ ನಿಗದಿ
ಐತಿಹಾಸಿಕ ಕಡಲೆಕಾಯಿ ಪರಿಷೆಗೆ ದಿನಾಂಕ ಘೋಷಣೆ ಆಗಿದೆ. ಕಳೆದ ಬಾರಿಯೇ ಒಂದಿಷ್ಟು ಹೊಸ ರೂಲ್ಸ್ ಗಳ ಮೂಲಕ ಆರಂಭ ಆಗಿದ್ದ ಪರಿಷೆಗೆ ಸಾಗರೋಪಾದಿಯಲ್ಲಿ ಜನ ಬಂದು ಯಶಸ್ಸು ಕಂಡಿತ್ತು. ಈ ಬಾರಿ ಇನ್ನಷ್ಟು ಜನ ಹೆಚ್ಚಾಗುವ ಸಾಧ್ಯತೆ ಇದ್ದು, ಮುಜರಾಯಿ ಇಲಾಖೆ ಸಚಿವರು ಅಲರ್ಟ್ ಆಗಿದ್ದು, ಒಂದಷ್ಟು ರೂಲ್ಸ್ ಫಿಕ್ಸ್ ಮಾಡಿದ್ದಾರೆ. ಆಗಿದ್ರೆ ಆ ಹೊಸ ರೂಲ್ಸ್ ಏನು..? ಯಾವಾಗ ಪರಿಷೆ ಆರಂಭ ಆಗಲಿದೆ ಅನ್ನೋದರ ಒಂದು ರಿಪೋರ್ಟ್ ಇಲ್ಲಿದೆ ಓದಿ.
ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ಫಿಕ್ಸ್
ಐದು ದಿನ ಪರಿಷೆ... ಯಾವಾಗ ಶುರು? ಯಾವಾಗ ಅಂತ್ಯ?
ಬೆಂಗಳೂರಿನ ಬಹು ನಿರೀಕ್ಷಿತ, ಇತಿಹಾಸ ಪ್ರಸಿದ್ಧ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 17 ಅಂದ್ರೆ ಕಾರ್ತಿಕ ಸೋಮವಾರ ಶುಭಾರಂಭ ಆಗಲಿದೆ.. ಈ ಭಾರಿಯ ಕಡಲೆಕಾಯಿ ಪರಿಷೆಗೆ ವಿಶೇಷ ಅಂದ್ರೆ 21 ಬಸವಣ್ಣಗಳನ್ನ ಕರೆಸಿ ಅವುಗಳಿಗೆ ಮೇವು ಹಾಕುವ ಮುಖೇನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಆಗಲಿದೆ. ಈ ಸಂಬಂಧ ಇಂದು ಬಸವನಗುಡಿ ದೇವಾಲಯದ ಬಳಿ ಸಭೆ ನಡೆಸಲಾಯ್ತು. ಮುಜರಾಯಿ ಸಚಿವರ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಸೇರಿ ಮುಜರಾಯಿ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ರು. ಈ ಸಭೆಯಲ್ಲಿ ಕಡಲೆಕಾಯಿ ಪರಿಷೆಯನ್ನು ಈ ಭಾರಿ ಹೇಗೆ ನಡೆಸಬೇಕು, ಯಾವಾಗ ನಡೆಸಬೇಕು ಎಂಬೆಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.
ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆಯನ್ನು ಪರಿಚಯಿಸುವ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲು ಜಿಬಿಎ ಮತ್ತು ಮುಜರಾಯಿ ಇಲಾಖೆ ಸಕಲ ಸಿದ್ಧತೆ ನಡೆಸಿಕೊಂಡಿವೆ. ಅಲ್ಲದೆ ಪ್ಲಾಸ್ಟಿಕ್ ಮುಕ್ತ ಪರಿಷೆ ಕೈಗೊಳ್ಳಲು ಈ ಭಾರಿಯೂ ಪಣತೊಟ್ಟಿರೋದು ಒಂದು ಕಡೆಯಾದ್ರೆ ಎರಡೇ ದಿನಕ್ಕೆ ಸೀಮಿತವಾಗಿದ್ದ ಪರಿಷೆ ಈ ಬಾರಿ ಐದು ದಿನಕ್ಕೆ ಏರಿಕೆ ಮಾಡಿ ಪರಿಷೆಗೆ ಬರೋ ಜನರಿಗೆ ಶುಭಸುದ್ದಿ ಕೊಟ್ಟಿದೆ. ನವಂಬರ್ 17 ರಿಂದ 22 ರವರೆಗೆ ಕಡಲೆಕಾಯಿ ಪರಿಷೆ ನಡೆಯಲಿದೆ.
/filters:format(webp)/newsfirstlive-kannada/media/media_files/2025/10/23/penaunt-jatra-at-basavanagudi02-2025-10-23-18-30-31.jpg)
ನಾಲ್ಕು ನೂರು ವರ್ಷಗಳ ಇತಿಹಾಸ ಇರೋ ಬಸವನಗುಡಿ ಕಡಲೆಕಾಯಿ ನಗರದ ಹಿರಿಮೆ ಸಾಕ್ಷಿಯಾಗಿರೋದಂತು ಸುಳ್ಳಲ್ಲ. ಜೊತೆಗೆ ನಗರದ ಪರಿಸರ, ಜಲಚರ ಜೀವರಾಶಿಗಳಿಗೆ ಮಾರಕ ಆಗ್ತಿರೋ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿರುವ ಕ್ರಮಕೂಡ ಶ್ಲಾಘನೀಯ. ಆದ್ರೆ ಪರಿಷೆ ವೇಳೆ ಇದು ಎಷ್ಟರ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೋದು ಮುಂದಷ್ಟೆೇ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us