/newsfirstlive-kannada/media/media_files/2025/12/06/e-khata-2025-12-06-13-34-21.jpg)
‘ಇ-ಖಾತಾ ಫೇಸ್‌ಲೆಸ್ ವ್ಯವಸ್ಥೆ’ ಇದು ನವೆಂಬರ್​ 10 ರಂದು ಜಿಬಿಎ ಇ-ಖಾತಾ ವಿತರಣೆಗೆ ಜಿಬಿಎ ಇನ್​​​​​​​​ಟ್ರಡ್ಯೂಸ್​ ಮಾಡಿದ್ದ ಆನ್​ಲೈನ್​ ಸೇವೆ.. ಆದ್ರೀಗ ಕೇವಲ 20 ದಿನದಲ್ಲಿ ಈ ಸೇವೆ ರದ್ದು ಆಗಲಿದ್ದು, ಇನ್ಮುಂದೆ ಹಳೇ ಪದ್ಧತಿಯೇ ಮರು ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ.
ಇ-ಖಾತಾ ಫೇಸ್‌ಲೆಸ್ ರದ್ದು!
ಈ ಹಿಂದೆ ಆಸ್ತಿ ಮಾಲೀಕರು ‘ಆಸ್ತಿ ಮಾಲೀಕ ಖಾತಾ ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡೋದು, ಮಧ್ಯವರ್ತಿಗಳ ಹಾವಳಿ, ಪ್ರಭಾವ ಮತ್ತು ಭ್ರಷ್ಟಾಚಾರ ತಪ್ಪಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗ ಈ ಫೇನ್‌ಲೆಸ್ ಆನ್‌ಲೈನ್ ಇ-ಖಾತಾ ವಿತರಣೆ ಸೇವೆಯನ್ನ ಶುರು ಮಾಡಿತ್ತು.. ಆದ್ರೀಗ ಕೆಲವು ಪ್ರಕರಣದಲ್ಲಿ ಸ್ಥಳ ಪರಿಶೀಲನೆ ಅಗತ್ಯವಿದ್ದು, ಫೇಸ್ ಲೆಸ್ ಪದ್ಧತಿಯಿಂದ ಸಮಸ್ಯೆ ಉಂಟಾಗ್ತಿದ್ಯಂತೆ. ಕೆಲವು ಪ್ರಕರಣದಲ್ಲಿ ಕಾನೂನು ಸಮಸ್ಯೆ ಇರುವ ಆಸ್ತಿಗಳಿಗೆ ಇ-ಖಾತಾ ಅನುಮೋದನೆ ನೀಡಿದ ಅಧಿಕಾರಿಗಳು ತೊಂದರೆ ಒಳಗಾಗ್ತಿದ್ದಾರಂತೆ. ಅದ್ರಲ್ಲೂ ಇ ಖಾತಾ ಅರ್ಜಿ ವಿಲೇವಾರಿಗೆ ಸಾಕಷ್ಟು ಸಮಯ ವ್ಯರ್ಥ ಆಗ್ತಿದ್ದು, ಭಾರಿ ಪ್ರಮಾಣದ ಅರ್ಜಿ ವಿಲೇವಾರಿ ಬಾಕಿ ಉಳಿತಿದ್ಯಂತೆ.. ಹೀಗಂತ ಅಧಿಕಾರಿ, ಸಿಬ್ಬಂದಿಯಿಂದ್ಲೇ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ರದ್ದುಪಡಿಸುವುದಕ್ಕೆ ಮುಂದಾಗಿದೆ.
ಒಟ್ಟಾರೆ, ನ.10 ರಿಂದ ಶುರುವಾದ ಆನ್‌ಲೈನ್ ಫೇಸ್ ಲೆಸ್ ವ್ಯವಸ್ಥೆಯನ್ನು ಕೇವಲ 20 ದಿನದಲ್ಲಿ ರದ್ದುಗೊಳಿಸಲಾಗಿದ್ದು,, ಹಳೇ ಪದ್ಧತಿಯೇ ಮರು ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us