/newsfirstlive-kannada/media/media_files/2026/02/17/kidney-donation-by-doctor-2026-02-17-12-53-33.jpg)
ಜೀವ ಹೋಗ್ತಾಯಿದೆ ಅಂದ್ರೆ, ಸಹಾಯ ಮಾಡೋದಕ್ಕೆ, ಕೈ ಚಾಚೋದಕ್ಕೆ ಹಿಂದೆ ಮುಂದೆ ನೋಡುವಂತಹ ಕಾಲ ಇದು. ಹೋಗ್ಲೀ ಜೇಬಿಂದ 1 ರೂಪಾಯಿ ತೆಗೆದು ದಾನ ಮಾಡೋದಕ್ಕೆ ಹಿಂಜರಿಯುವ ಕಾಲ ಇದು . ಹೇಳ್ತಾರಲ್ಲ ಎಂಜಲು ಕೈನಲ್ಲಿ ಕಾಗೆ ಓಡಿಸೋದು ಅಂತ, ಅಂತಹ ಜನಗಳೇ ಹೆಚ್ಚು. ಹೀಗಿರುವಾಗ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಡಾ ಥಂಕಮ್ ಎಸ್ ಮಾನವೀಯತೆಗೆ ಮಾದರಿಯಾಗಿದ್ದಾರೆ.
ಅಪರಿಚತ ವ್ಯಕ್ತಿಗೆ ತನ್ನ ಕಿಡ್ನಿಯನ್ನೇ ದಾನ ಮಾಡಿ ವೈದ್ಯಲೋಕದಲ್ಲೇ ಅಚ್ಚರಿ ಮೂಡಿಸಿದ್ದಾರೆ ಈ ಮಹಾತಾಯಿ. ಮದರ್​ ಥೆರೆಸಾ ಸಲಹಿದ್ರೆ. ಇವ್ರು ಒಬ್ಬ ವ್ಯಕ್ತಿಗೆ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಅದು ಕೂಡ ಕಾನೂನು ಹೋರಾಟ ಮಾಡಿ ಕಿಡ್ನಿದಾನ ಮಾಡಿದ್ದಾರೆ.
2014ರಲ್ಲಿ ಅಂಗಾಂಗ ದಾನ ಮಾಡಲು ಡಾಕ್ಟರ್ ಥಂಕಮ್ ಎಸ್ ನೋಂದಣಿ ಮಾಡಿಸಿದ್ದರು. ಆದ್ರೆ, ಮರಣಕ್ಕೂ ಮುಂಚೆಯೇ ಕಿಡ್ನಿದಾನ ಮಾಡಲು ತೀರ್ಮಾನ ಮಾಡಿದ್ರು. ಹಾಗಾಗಿ, ಅಪರಿಚತ ವ್ಯಕ್ತಿಯೊಬ್ಬರಿಗೆ ಕಿಡ್ನಿದಾನ ಮಾಡಲು ನಿರ್ಧಾರ ಮಾಡಿದ್ದಾರೆ. 2023ರಲ್ಲಿ 24 ವರ್ಷದ ಅಪರಿಚಿತ ರೋಗಿಗೆ ಕಿಡ್ನಿದಾನ ಮಾಡಲು ವೈದ್ಯೆ ಮುಂದಾಗಿದ್ರು. ಆದರೆ, ರೋಗಿಯು ಸಂಬಂಧಿಕರಲ್ಲದ ಕಾರಣ ಆಸ್ಪತ್ರೆಯ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಆದ್ರೆ, ಇಷ್ಟಕ್ಕೆ ಈ ನಿರ್ಧಾರ ಕೈಬಿಡದ ವೈದ್ಯೆ 2025, ಜೂನ್ ತಿಂಗಳಲ್ಲಿ ಹೈ ಕೋರ್ಟ್ ಮೊರೆ ಹೋಗ್ತಾರೆ. ಸ್ವಂತ ಇಚ್ಚೆಯಿಂದ ಕಿಡ್ನಿದಾನ ಮಾಡುತ್ತಿದ್ದೇನೆ ಅಂತ ಅನುಮತಿ ಕೋರಿ ಅರ್ಜಿ ಸಲ್ಲಿಸ್ತಾರೆ. ವಿಚಾರಣೆ ನಡೆಸಿದ ನ್ಯಾಯಾಲಯ 2025ರ ಡಿಸೆಂಬರ್​ನಲ್ಲಿ ಕಿಡ್ನಿ ಕಸಿ ಮಾಡಲು ಅನುಮತಿ ನೀಡಿತು. 5 ವಾರಗಳೊಳಗೆ ಕಿಡ್ನಿ ಕಸಿ ಮಾಡಿಸಿಕೊಳ್ಳಲು ಅರ್ಹರಿರುವ ಐದು ಜನರ ಪಟ್ಟಿ ನೀಡಲು ಕೋರ್ಟ್ ನಿರ್ದೇಶಿಸಿತ್ತು. ಅದರಂತೆ, ಮೊದಲ ವ್ಯಕ್ತಿಗೆ ಮ್ಯಾಚ್ ಆಗಲಿಲ್ಲ, ಆ ಬಳಿಕ 54 ವರ್ಷದ ವ್ಯಕ್ತಿಗೆ ಮ್ಯಾಚ್ ಆಯ್ತು. ಕಿಡ್ನಿ ಕಸಿ ಮಾಡಲು ಫೆಬ್ರವರಿ 2 ರಂದು ಅನುಮತಿ ಸಿಕ್ತು, ಆ ಬಳಿಕ ಫೆಬ್ರವರಿ 10 ರಂದು ಕಿಡ್ನಿ ಕಸಿ ಆಪರೇಷನ್ ಯಶಸ್ವಿ ಆಯ್ತು.
ಕಿಡ್ನಿದಾನದ ಬಳಿಕ ವೈದ್ಯೆ ಡಾ. ಥಂಕಮ್ ಆರೋಗ್ಯವಾಗಿದ್ದಾರೆ. ಕಿಡ್ನಿದಾನ ಮಾಡಬೇಕು ಅನ್ನೋದು ವೈದ್ಯೆಯ ಬಹುದಿನದ ಕನಸಾಗಿತ್ತು. ಸಮಾಜಕ್ಕೆ ತಾನು ಮಾದರಿ ಆಗ್ಬೇಕು ಅಂತ ನಿರ್ಧರಿಸಿದ್ದ ಡಾ. ಥಂಕಮ್, ಅಂದುಕೊಂಡಂತೆ ಬದುಕಿದ್ದಾಗಲೇ ಅಪರಿಚಿತರಿಗೆ ಕಿಡ್ನಿದಾನ ಮಾಡಿ ಮನುಕುಲದ ಮನಸ್ಸನ್ನ ಗೆದ್ದಿದ್ದಾರೆ. ವೈದ್ಯೋ ನಾರಾಯಣೋ ಹರಿಃ ಅನ್ನೋ ಪದಕ್ಕೆ ಅರ್ಥ ತುಂಬಿದ್ದಾರೆ.
/filters:format(webp)/newsfirstlive-kannada/media/media_files/2026/02/17/kidney-donation-by-doctor-1-2026-02-17-12-53-54.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us