/newsfirstlive-kannada/media/media_files/2026/01/22/bangalore-traffic-jam-2nd-rank-in-world-2026-01-22-15-20-29.jpg)
ಟ್ರಾಫಿಕ್ ಜಾಮ್ ನಲ್ಲಿ ಬೆಂಗಳೂರಿಗೆ ವಿಶ್ವದಲ್ಲಿ 2ನೇ ಱಂಕ್!
ಬೆಂಗಳೂರು ಟ್ರಾಫಿಕ್.. ಇದರ ಬಗ್ಗೆ ರಾಜ್ಯವಷ್ಟೇ ಅಲ್ಲ.. ವಿದೇಶಗಳಲ್ಲೂ ಚರ್ಚೆಯಾಗ್ತಿದೆ. ಎಷ್ಟೇ ಯೋಜನೆ ಕೈಗೊಂಡರೂ ಸಹ ಟ್ರಾಫಿಕ್ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಹದಗೆಡ್ತಿದೆ. ಟ್ರಾಫಿಕ್ ಕುಖ್ಯಾತಿ ಪಡೆದ ನಗರಗಳ ಪಟ್ಟಿಯ ಪೈಕಿಯಲ್ಲಿ ಬೆಂಗಳೂರು 2ನೇ ಸ್ಥಾನ ಪಡೆದಿದೆ.
ಬ್ಯುಸಿ.. ಜನ ಫುಲ್​ ಬ್ಯುಸಿ.. ಇಷ್ಟು ಬ್ಯುಸಿನಲ್ಲಿ ಟೈಂ ಕರೆಕ್ಟ್​ ಆಗಿ ಕೆಲಸಕ್ಕೆ ಹೋಗ್ಬೇಕು ಅಂದ್ರೆ ಹೇಗೆ ಆಗುತ್ತೆ ಹೇಳಿ.. ಇಷ್ಟು ಬ್ಯುಸಿ ಇರೋ ಬೆಂಗಳೂರಿಗೆ ಈ ವರ್ಷ ಮತ್ತೊಂದು ಅವಾರ್ಡ್​ ಸಿಕ್ಕಿದೆ.
ಸಿಲಿಕಾನ್ ಸಿಟಿಗೆ ಈ ವರ್ಷವೂ ತಟ್ಟಿದೆ ಟ್ರಾಫಿಕ್ ಶಾಪ!
ವಿಶ್ವದ ಸಂಚಾರ ದಟ್ಟಣೆ ಲಿಸ್ಟ್​ನಲ್ಲಿ ನಮಗೆ 2ನೇ ಸ್ಥಾನ!
ರಾಜ್ಯ ಸರ್ಕಾರವು ಜಾಗತಿಕ ವೇದಿಕೆಗಳಲ್ಲಿ ಬೆಂಗಳೂರನ್ನ ಭಾರಿ ಕೊಂಡಾಡಿ.. ಭವಿಷ್ಯ ರೂಪಿಸೋ ನಗರ ಎಂದು ಬಿಂಬಿಸ್ತಿದೆ. ಆದ್ರೆ, ಸಂಚಾರ ದಟ್ಟಣೆಗೆ ಸಂಬಂಧಿಸಿದಂತೆ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ವಿಶ್ವದಲ್ಲಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರೋ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಬೆಂಗಳೂರು 2ನೇ ಸ್ಥಾನ ಪಡೆದುಕೊಂಡಿದೆ. ಮೆಕ್ಸಿಕೋ ಸಿಟಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಮಾತ್ರವಲ್ಲದೇ, ಪುಣೆ ಹಾಗೂ ಮುಂಬೈ ಸಹ ಇಪ್ಪತ್ತರ ಒಳಗಿನ ಪಟ್ಟಿಯಲ್ಲಿ ಇದೆ.
ವಾರ್ಷಿಕ ಸಂಚಾರ ಪ್ರವೃತ್ತಿಗಳನ್ನ ವಿಶ್ಲೇಷಿಸೋ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ಪ್ರಕಾರ, 2025ರಲ್ಲಿ ಬೆಂಗಳೂರು ವಿಶ್ವದ 2ನೇ ಅತೀ ಹೆಚ್ಚು ಸಂಚಾರ ದಟ್ಟಣೆ ಇರೋ ನಗರವಾಗಿದೆ. ಮೆಕ್ಸಿಕೋ ಸಿಟಿ ಮೊದಲ ಸ್ಥಾನದಲ್ಲಿದ್ರೆ.. ಐರ್ಲೆಂಡ್‌ನ ಡಬ್ಲಿನ್ ನಗರ ಬೆಂಗಳೂರಿನ ನಂತರದ ಸ್ಥಾನದಲ್ಲಿದೆ.
ಟ್ರಾಫಿಕ್​ ರೇಸ್​!
2023ರಲ್ಲಿ ಆರನೇ ಸ್ಥಾನ
2024ರಲ್ಲಿ ಮೂರನೇ ಸ್ಥಾನ
2025ರಲ್ಲಿ ಎರಡನೇ ಸ್ಥಾನ
(2023ರಲ್ಲಿ ಆರನೇ ಸ್ಥಾನ ಪಡೆದಿದ್ದ ಬೆಂಗಳೂರು, 2024ರಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ಇದೀಗ 2025ರಲ್ಲಿ ಎರಡನೇ ಸ್ಥಾನವನ್ನ ಅಲಂಕರಿಸಿದೆ.)
ನಗರಕ್ಕೆ ಟ್ರಾಫಿಕ್ ಕಿರಿಕಿರಿ ಅವಾರ್ಡ್​!
ಬೆಂಗಳೂರಲ್ಲಿ 10 ಕಿ.ಮೀ ಪ್ರಯಾಣಿಕ್ಕೆ 36.9 ನಿಮಿಷ ಖರ್ಚು!
2024ಕ್ಕೆ ಹೋಲಿಸಿದ್ರೆ 1 ಕಿಲೋ ಮೀಟರ್​ನಷ್ಟು ಕಡಿಮೆ ಆಗಿದೆ
ಸಂಚಾರ ಕಳೆದ ವರ್ಷಕ್ಕಿಂತ 2 ನಿಮಿಷ 4 ಸೆಕೆಂಡ್ ಹೆಚ್ಚಾಗಿದೆ
ಸಂಚಾರ ದಟ್ಟಣೆಯ ಮಟ್ಟ 2024ಕ್ಕಿಂತ ಶೇ.1.7 ರಷ್ಟು ಹೆಚ್ಚಿದೆ
ನಗರದ ಜನರು ವರ್ಷಕ್ಕೆ 168 ಗಂಟೆ ಟ್ರಾಫಿಕ್​ನಲ್ಲೇ ಕಳೀತಾರೆ
ಟ್ರಾಫಿಕ್ ಪಟ್ಟಿಯಲ್ಲಿ ಪುಣೆ 5ನೇ ಸ್ಥಾನ, ಮುಂಬೈ 18ನೇ ಸ್ಥಾನ
2025ರಲ್ಲಿ ಬೆಂಗಳೂರಲ್ಲಿ ಪೀಕ್ ಅವರ್ ಇರುವಾಗ ವಾಹನಗಳ 10 ಕಿಲೋ ಮೀಟರ್​ ದೂರ ಕ್ರಮಿಸಲು 13 ನಿಮಿಷ 9 ಸೆಕೆಂಡ್​ ಪರ್​ ಕಿಲೋ ಮೀಟರ್​ ತೆಗೆದುಕೊಳ್ಳುತ್ತಂತೆ. ಇದು 2024ಕ್ಕೆ ಹೋಲಿಸಿದರೆ 1 ಕಿಲೋ ಮೀಟರ್​ನಷ್ಟು ಕಡಿಮೆಯಾಗಿದೆ ಅಂತ ಹೇಳಲಾಗ್ತಿದೆ. ನಗರದಲ್ಲಿ ಕೇವಲ 10 ಕಿಲೋ ಮೀಟರ್​ ದೂರ ಕ್ರಮಿಸಲು 36 ನಿಮಿಷ 9 ಸೆಕೆಂಡ್ ಸಮಯ ತಗಲುತ್ತಿದ್ದು, ಇದು ಕಳೆದ ವರ್ಷಕ್ಕಿಂತ 2 ನಿಮಿಷ 4 ಸೆಕೆಂಡ್ ಹೆಚ್ಚಾಗಿದೆ. ಇನ್ನು ಸಂಚಾರ ದಟ್ಟಣೆಯ ಮಟ್ಟ ಶೇಕಡ 74.4 ರಷ್ಟಿದ್ದು, ಇದು 2024ಕ್ಕಿಂತ ಶೇ.1.7 ರಷ್ಟು ಹೆಚ್ಚಾಗಿದೆ. ಇನ್ನೂ ಬೆಂಗಳೂರು ನಗರದ ಜನರು ವರ್ಷಕ್ಕೆ ಸರಾಸರಿ 168 ಗಂಟೆಗಳ ಕಾಲ ಟ್ರಾಫಿಕ್​ನಲ್ಲೇ ಕಳೀತಾರೆ ಅಂತ ವರಿಯಲ್ಲಿ ಹೇಳಿದೆ. ಟಾಮ್‌ಟಾಮ್ ಪಟ್ಟಿಯ ಮೊದಲ 20 ನಗರಗಳಲ್ಲಿ ಭಾರತದ ಇತರ ಎರಡು ನಗರಗಳೂ ಇವೆ. ಪುಣೆ 5ನೇ ಸ್ಥಾನದಲ್ಲಿದ್ದರೆ , ಮುಂಬೈ 18ನೇ ಸ್ಥಾನದಲ್ಲಿದೆ.
ಒಟ್ಟಾರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ವಾಹನಗಳಲ್ಲಿ ಓಡಾಡುವುದೇ ದೊಡ್ಡ ಕಷ್ಟವಾಗಿದೆ. ವಿದೇಶಗಳಲ್ಲಿ ಟ್ರಾಫಿಕ್ ಜಾಮ್ ಜಾಸ್ತಿ ಇರುವ ನಗರಗಳಲ್ಲಿ ವಾಹನಗಳಲ್ಲಿ ಟಾಯ್ಲೆಟ್ ವ್ಯವಸ್ಥೆಯೂ ಇರುತ್ತಂತೆ. ಬೆಂಗಳೂರಿನ ವಾಹನಗಳಲ್ಲೂ ಆ ವ್ಯವಸ್ಥೆ ಮಾಡಿಕೊಂಡು ಓಡಾಡಬೇಕಾದ ಪರಿಸ್ಥಿತಿಯೂ ಬರಬಹುದು.
ನರೇಶ್ ಪಿ.ಎಂ. ನ್ಯೂಸ್ ಫಸ್ಟ್, ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us