/newsfirstlive-kannada/media/media_files/2025/12/06/delhi-metro-platform-screen-doors02-2025-12-06-14-26-46.jpg)
ಬೆಂಗಳೂರು ಮೆಟ್ರೋ ಸ್ಟೇಷನ್ ಗಳೇ ಆತ್ಮಹತ್ಯೆಯ ಸ್ಪಾಟ್ ಗಳಾಗುತ್ತಿವೆ. ಈ ವರ್ಷದ ಜನವರಿಯಿಂದ ಡಿಸೆಂಬರ್ ವರೆಗೂ ಕನಿಷ್ಠ ಹತ್ತು ಆತ್ಮಹತ್ಯೆ ಹಾಗೂ ಆತ್ಮಹತ್ಯೆ ಯತ್ನದ ಘಟನೆಗಳು ಬೇರೆ ಬೇರೆ ಮೆಟ್ರೋ ನಿಲ್ದಾಣಗಳಲ್ಲಿ ನಡೆದಿವೆ. ಮೆಟ್ರೋ ನಿಲ್ದಾಣಗಳಲ್ಲಿ ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಪ್ಲಾಟ್ ಫಾರಂ ಸ್ಕ್ರೀನ್ ಡೋರ್ ಅಳವಡಿಕೆ ಮಾಡೋದೇ ಪರಿಹಾರ. ಮುಂಬೈ, ಚೆನ್ನೈ ಹಾಗೂ ದೆಹಲಿಯ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಪ್ಲಾಟ್ ಫಾರಂ ಸ್ಕ್ರೀನ್ ಡೋರ್ ಗಳನ್ನು ಅಳವಡಿಕೆ ಮಾಡಲಾಗಿದೆ. PSD ಅಳವಡಿಕೆ ಮಾಡದೇ ಮೆಟ್ರೋ ಹಳಿಯಲ್ಲಿ ಆ್ಯಕ್ಸಿಡೆಂಟ್ ತಡೆಯೋಕೆ ಸಾಧ್ಯವಿಲ್ಲ ! . ಮೆಟ್ರೋ ದುರಂತಗಳಿಗೆ ಪಿಎಸ್ ಡಿ ಅವಡಿಕೆಯೊಂದೇ ಪರಿಹಾರ. ನಮ್ಮ ಮೆಟ್ರೋದಲ್ಲಿ ಸೂಸೈಡ್, ಆ್ಯಕ್ಸಿಡೆಂಟ್ ಕಂಟ್ರೋಲ್ ಮಾಡ್ಬೇಕು ಅಂದ್ರೆ ಪಿಎಸ್ ಡಿ ಅಳವಡಿಕೆ ಕಡ್ಡಾಯ! ಮಾಡಬೇಕೆಂದು ಮೆಟ್ರೋ ಪ್ರಯಾಣಿಕರಿಂದ ಕೂಡ ಒತ್ತಾಯ ಹೆಚ್ಚಾಗಿದೆ. ಪ್ರತಿ ನಿಲ್ದಾಣಕ್ಕೂ ಫ್ಲ್ಯಾಟ್ ಫಾರ್ಮ್ ಸ್ಕ್ರೀನ್ ಡೋರ್ ಅಗತ್ಯ ಎಂಬ ಅಭಿಪ್ರಾಯ ಜನರಿಂದಲೂ ವ್ಯಕ್ತವಾಗುತ್ತಿದೆ.
ಬೆಂಗಳೂರಲ್ಲಿ ಫ್ಲ್ಯಾಟ್ ಫಾರ್ಮ್ ಸ್ಕ್ರೀನ್ ಡೋರ್ ಅಳವಡಿಕೆಗೆ ಒತ್ತಾಯ ಇದೆ. ಪದೇ ಪದೇ ಮೆಟ್ರೋ ಸ್ಟೇಷನ್ ಗಳಲ್ಲಿ ಆತ್ಮಹತ್ಯೆ ಯತ್ನ ಆಗ್ತಿದೆ. ಸೂಸೈಡ್ ಪ್ರಕರಣಗಳು ಹೆಚ್ಚಾಗ್ತಿವೆ. ಹಾಗಾಗಿ, ಪಿಎಸ್ ಡಿ ಅಳವಡಿಸಿ ಅನಾಹುತಗಳನ್ನ ತಡೆಯಬಹುದು.
ಮೊನ್ನೆ ಕೂಡ ಕೆಂಗೇರಿ ಮೆಟ್ರೋ ಸ್ಟೇಷನ್ ನಲ್ಲಿ ಶಾಂತನಗೌಡ ಪಾಟೀಲ್ ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ , ಈಗ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಪಿಂಕ್ ಮಾರ್ಗದಲ್ಲಿ ಮೊಟ್ಟ ಮೊದಲ ಭಾರಿಗೆ ಪಿಎಸ್‌ಡಿ ಅಳವಡಿಕೆ ಸಾಧ್ಯತೆ ಇದೆ.
ಬೆಂಗಳೂರಿನ ಕಾಳೇನ ಅಗ್ರಹಾರದಿಂದ ನಾಗವಾರದವರೆಗೂ ಪಿಂಕ್ ಲೈನ್ ನಿರ್ಮಾಣ ಮಾಡಲಾಗುತ್ತಿದೆ. ಈ ಮಾರ್ಗದಲ್ಲಿರುವ 12 ಸ್ಟೇಷನ್ ಗಳ ಅಂಡರ್ ಪಾಸ್ ನಲ್ಲಿ ಪಿಎಸ್ ಡಿ ಅಳವಡಿಕೆಗೆ ಪ್ಲ್ಯಾನಿಂಗ್ ಮಾಡಲಾಗುತ್ತಿದೆ. ಸದ್ಯ ಈ ಮಾರ್ಗದಲ್ಲಿ ಇನ್ನೂ ಕಾಮಗಾರಿ ನಡೆಯುತ್ತಿದೆ. ಒಂದು ಸ್ಟೇಷನ್ ನಲ್ಲಿ ಪಿಎಸ್ ಡಿ ಅಳವಡಿಕೆಗೆ 9 ಕೋಟಿ ಖರ್ಚು ಆಗಬಹುದು ಎಂಬ ಅಂದಾಜು ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us