ಬೆಂಗಳೂರು ಟರ್ಫ್ ಕ್ಲಬ್ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ : ಟರ್ಫ್ ಕ್ಲಬ್ ಸುತ್ತ ಕುದುರೆ, ಕತ್ತೆ, ಹೇಸರಕತ್ತೆ ಪ್ರಾಣಿಗಳ ಚಲನೆ ನಿರ್ಬಂಧ

ಬೆಂಗಳೂರಿನ ಹೃದಯ ಭಾಗದಲ್ಲಿರುವ ಟರ್ಫ್ ಕ್ಲಬ್ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಪತ್ತೆಯಾಗಿದೆ. ಈ ಗ್ಲಾಂಡರ್ಸ್ ರೋಗ ಕುದುರೆಗಳಿಂದ ಮನುಷ್ಯರಿಗೂ ಹರಡಬಲ್ಲದು. ಈಗ ಟರ್ಫ್ ಕ್ಲಬ್ ಸುತ್ತ ಕುದುರೆ , ಕತ್ತೆ, ಹೇಸರಕತ್ತೆ ಪ್ರಾಣಿಗಳ ಚಲನೆಯನ್ನು ನಿರ್ಬಂಧಿಸಿ ಬೆಂಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

author-image
Chandramohan
BANGALORE TURF CLUB HORSES (1)

ಟರ್ಫ್ ಕ್ಲಬ್ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಪತ್ತೆ

Advertisment
  • ಬೆಂಗಳೂರಿನ ಟರ್ಫ್ ಕ್ಲಬ್ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಪತ್ತೆ
  • ಟರ್ಫ್ ಕ್ಲಬ್ ಸುತ್ತಲಿನ 2 ಕಿ.ಮೀ. ಪ್ರದೇಶದಲ್ಲಿ ಕತ್ತೆ, ಕುದುರೆ ಸಂಚಾರ ನಿರ್ಬಂಧ

ಬೆಂಗಳೂರಿನ  ಟರ್ಫ್ ಕ್ಲಬ್ ಸುತ್ತಲಿನ 2 ಕಿ.ಮೀ. ಸುತ್ತಳತೆಯಲ್ಲಿ  ಕುದುರೆ, ಕತ್ತೆ, ಹೇಸರಕತ್ತೆ ಪ್ರಾಣಿಗಳ ಚಲನೆ  ನಿರ್ಬಂಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ. 
ಗ್ಲಾಂಡರ್ಸ್ ರೋಗ ಪೀಡಿತ ಪ್ರದೇಶವೆಂದು ಘೋಷಿಸಲಾದ ಪ್ರದೇಶದಲ್ಲಿ ಕುದುರೆ ಮತ್ತು ಕುದುರೆ ಜಾತಿಗೆ ಸೇರಿದ ಪ್ರಾಣಿಗಳ ಚಲನೆಯನ್ನು   ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಜಾನುವಾರು ರೋಗಿಗಳ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಆದೇಶಿಸಿದ್ದಾರೆ.

ಬೆಂಗಳೂರು ಟರ್ಫ್ ಕ್ಲಬ್ ನಲ್ಲಿರುವ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ದೃಢಪಟ್ಟಿರುವುದರಿಂದ ಪ್ರಾಣಿಗಳಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಭಂದಕೆ ಮತ್ತು ನಿಯಂತ್ರಣ ಅಧಿನಿಯಮ 2009 ರ ಕಾಲಂ-6 ರಡಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಬೆಂಗಳೂರು ಟರ್ಫ್ ಕ್ಲಬ್ ಅನ್ನು  ಗ್ಲಾಂಡರ್ಸ್ ಕೇಂದ್ರೀಕೃತ ಸ್ಥಳ (Epic Centre) ಎಂದು ಗುರುತಿಸಲಾಗಿದೆ.

ಬೆಂಗಳೂರು ಟರ್ಫ್ ಕ್ಲಬ್ ನ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ  ಕುದುರೆ ಕತ್ತೆ, ಹೇಸರಕತ್ತೆ ಪ್ರಾಣಿಗಳ ಚಲನವನ  ಹಾಗೂ ಕುದುರೆ, ಕತ್ತೆ, ಹೇಸರಕತ್ತೆಗಳನ್ನು ಮನೋರಂಜನೆ ಮೆರವಣೆಗೆ ಶುಭಕಾರ್ಯಗಳು ಸೇರಿದಂತೆ ಸಂಪೂರ್ಣ ಚಲನವಲನವನ್ನು  ನಿರ್ಭಂದಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ

BANGALORE TURF CLUB HORSES (3)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Glanders disease in HORSES AT Bangalore turf club
Advertisment