/newsfirstlive-kannada/media/media_files/2025/12/17/toyota-cars-sale-in-bangalore02-2025-12-17-16-25-16.jpg)
ಬೆಂಗಳೂರಿನಲ್ಲಿ ಟೋಯೋಟಾ ಕಾರ್ ಹೆಚ್ಚು ಮಾರಾಟ
ಈ ವರ್ಷ ಟೋಯೋಟಾ ಕಾರ್ ಗಳು ಅತಿ ಹೆಚ್ಚು ದಕ್ಷಿಣ ಭಾರತದಲ್ಲೇ ಮಾರಾಟವಾಗಿವೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಟೋಯೋಟಾ ಕಾರ್ ಗಳು ಮಾರಾಟವಾಗಿವೆ ಎಂಬುದು ವಿಶೇಷ. ಟೋಯೋಟಾ ಕಂಪನಿಯ ಕಾರ್ ಗಳು ದಕ್ಷಿಣ ಭಾರತದಲ್ಲಿ ಮಾರಾಟವಾಗಿರುವುದರಲ್ಲಿ ಮೂರನೇ ಒಂದರಷ್ಟು ಬೆಂಗಳೂರಿನಲ್ಲೇ ಮಾರಾಟವಾಗಿವೆ. ಬೆಂಗಳೂರಿನ ಜನರು ಟೋಯೋಟಾ ಕಂಪನಿಯ ಹೈಬ್ರೀಡ್ ಕಾರ್ ಗಳನ್ನು ಹೆಚ್ಚು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಜನರ ಖರೀದಿಯ ಸಾಮರ್ಥ್ಯ ಹೆಚ್ಚಳದಿಂದ ಹಾಗೂ ನಗರದ ಓಡಾಟಕ್ಕೆ ಟೋಯೋಟಾ ಕಾರ್ ಹೈಬ್ರೀಡ್ ಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಹೀಗಾಗಿ ಟೋಯೋಟಾ ಕಂಪನಿಯ ಪಾಲಿಗೆ ಬೆಂಗಳೂರು ನಗರವೇ ಪ್ರಮುಖ ಮಾರುಕಟ್ಟೆಯಾಗಿದೆ.
ಬೆಂಗಳೂರು ಹೊರವಲಯದ ಬಿಡದಿಯಲ್ಲಿ ಟೋಯೋಟಾ ಕಾರ್ ಕಾರ್ಖಾನೆ ಇದೆ. ಬಿಡದಿಯಲ್ಲಿ ಉತ್ಪಾದನೆಯಾದ ಕಾರ್ ಗಳು ಬೆಂಗಳೂರಿನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವುದು ವಿಶೇಷ. ಲೋಕಲ್ ಆಗಿ ಉತ್ಪಾದನೆಯಾದ ಕಾರ್ ಗಳನ್ನೇ ಬೆಂಗಳೂರಿನ ಜನರು ಪ್ರೀತಿಯಿಂದ ಹೆಚ್ಚಾಗಿ ಖರೀದಿಸುತ್ತಿದ್ದಾರೆ.
ಈ ವರ್ಷ ಟೋಯೋಟಾ ಕಂಪನಿಯು 1,06,000 ಕಾರ್ ಗಳನ್ನು ದಕ್ಷಿಣ ಭಾರತದಲ್ಲಿ ಮಾರಾಟ ಮಾಡಿದೆ. ಇದರ ಪೈಕಿ ಶೇ. 31 ರಷ್ಟು ಕಾರ್ ಗಳು ಬೆಂಗಳೂರಿನಲ್ಲಿ ಮಾರಾಟವಾಗಿವೆ. ಎಂದು ಟೋಯೋಟಾದ ದಕ್ಷಿಣ ಭಾರತದ ವೈಸ್ ಪ್ರೆಸಿಡೆಂಟ್ ವಿಸಿಲೈನ್ ಸಿಗಮಣಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/17/toyota-cars-sale-in-bangalore-2025-12-17-16-26-45.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us