ಬೆಂಗಳೂರಿನ ಕೆ.ಆರ್‌.ಪುರ ಶಾಸಕ ಭೈರತಿ ಬಸವರಾಜುಗೆ ಬಂಧನ ಭೀತಿ- ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಶಾಸಕ ಭೈರತಿ ಬಸವರಾಜುಗೆ ಬಂಧನದ ಭೀತಿ ಎದುರಾಗಿದೆ. ಬಿಕ್ಲುಶಿವ ಕೊಲೆ ಕೇಸ್ ನಲ್ಲಿ ಆರೋಪಿಯಾಗಿರುವ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ. ಭೈರತಿ ಬಸವರಾಜು ನಾಪತ್ತೆಯಾಗಿದ್ದಾರೆ.

author-image
Chandramohan
ರೌಡಿಶೀಟರ್ ಬಿಕ್ಲು ಶಿವ ಪ್ರಕರಣ; ವಿಚಾರಣೆ ಮುಗಿಸಿ ಬಂದು ಶಾಸಕ ಭೈರತಿ ಬಸವರಾಜ್ ಹೇಳಿದ್ದೇನು? -Video

ಬಿಕ್ಲುಶಿವ ಕೊಲೆ ಕೇಸ್ ನಲ್ಲಿ ಭೈರತಿ ಬಸವರಾಜುಗೆ ಬಂಧನ ಭೀತಿ

Advertisment
  • ಬಿಕ್ಲುಶಿವ ಕೊಲೆ ಕೇಸ್ ನಲ್ಲಿ ಭೈರತಿ ಬಸವರಾಜುಗೆ ಬಂಧನ ಭೀತಿ
  • ಹೈಕೋರ್ಟ್ ನಲ್ಲಿ ಭೈರತಿ ಬಸವರಾಜು ನಿರೀಕ್ಷಣಾ ಜಾಮೀನು ಅರ್ಜಿ ವಜಾ
  • ನಾಪತ್ತೆಯಾಗಿರುವ ಶಾಸಕ ಭೈರತಿ ಬಸವರಾಜು

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ  ಬಿಜೆಪಿ ಶಾಸಕ…ಭೈರತಿ ಬಸವರಾಜ್‌ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಹೈಕೋರ್ಟ್ ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಇದರಿಂದಾಗಿ ಬಿಕ್ಲುಶಿವ ಕೊಲೆ ಕೇಸ್ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಭೈರತಿ ಬಸವರಾಜ್‌ ಬಂಧಿಸುವ ಹಾದಿ ಸುಗಮವಾಗಿದೆ. ಸಿಐಡಿ ಪೊಲೀಸರಿಂದ ಬಂಧನ ಭೀತಿಯಲ್ಲಿರುವ ಶಾಸಕ ಭೈರತಿ ಬಸವರಾಜು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಕೋಟ್ಯಾಧೀಶ ಶಾಸಕರೇ ಈಗ ನಾಪತ್ತೆಯಾಗಿದ್ದಾರೆ. 
ಈ ಹಿಂದೆ ಕೆಳ ನ್ಯಾಯಾಲಯದಲ್ಲಿ ಭೈರತಿ ಬಸವರಾಜು ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿತ್ತು. ಈ ವೇಳೆಯೂ ಭೈರತಿ ಬಸವರಾಜ್ ನಾಪತ್ತೆಯಾಗಿದ್ದರು. ಈಗ ಹೈಕೋರ್ಟ್ ನಿಂದಲೂ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಮತ್ತೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಭೈರತಿ ಬಸವರಾಜು ನಾಪತ್ತೆಯಾಗಿದ್ದಾರೆ. 
ಬಿಕ್ಲುಶಿವ ಕೊಲೆ ಕೇಸ್ ನಲ್ಲೂ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರ, ಸಿಐಡಿ ಪರ ವಕೀಲರು ಹೈಕೋರ್ಟ್ ನಲ್ಲಿ ವಾದಿಸಿದ್ದಾರೆ. ಹೀಗಾಗಿ ಶಾಸಕ ಭೈರತಿ ಬಸವರಾಜುರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಾಗಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬಾರದೆಂದು ಸಿಐಡಿ ಪರ ವಕೀಲರು ಹೈಕೋರ್ಟ್ ನಲ್ಲಿ ವಾದಿಸಿದ್ದರು. ಹತ್ಯೆಯಾದ ಬಿಕ್ಲುಶಿವ ತಾಯಿ ಕೂಡ ಕೇವಲ 24 ಗಂಟೆಯಲ್ಲಿ ತಮ್ಮ ಹೇಳಿಕೆಯನ್ನೇ ಮಾಧ್ಯಮಗಳ ಮುಂದೆ ಬದಲಾಯಿಸಿದ್ದಾರೆ. ಪೊಲೀಸರಿಗೆ ಕೊಟ್ಟ ದೂರಿನಲ್ಲೂ ಕೆಲ ವ್ಯತ್ಯಾಸಗಳಿವೆ. ಹೀಗಾಗಿ ಭೈರತಿ ಬಸವರಾಜುರನ್ನು ಬಂಧಿಸಲು ಅವಕಾಶ ಕೊಡಬೇಕು. ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದೆಂದು ವಾದಿಸಿದ್ದರು.   ಈ ಕೊಲೆ ಕೇಸ್ ನಲ್ಲಿ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಸಿಐಡಿ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Murder case BANGALORE MURDER CASE Byrathi Basavaraj BJP MLA BYRATHI Basavaraju may be arrested by Police in biklu shiva murder case
Advertisment