/newsfirstlive-kannada/media/media_files/2026/03/06/victoria-hospital-became-shanthaveri-gopal-gowda-hospital-2026-03-06-12-48-23.jpg)
ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಳಿ ಇರುವ ಶತಮಾನದ ಇತಿಹಾಸ ಇರುವ ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೇ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ ಆಗಲಿದೆ. ರಾಜ್ಯ ಬಜೆಟ್ ನಲ್ಲಿ ಬರೋಬ್ಬರಿ 125 ವರ್ಷಗಳ ಹಳೆಯ ಆಸ್ಪತ್ರೆಯ ಹೆಸರು ಬದಲಾವಣೆ ಮಾಡುವ ಘೋಷಣೆ ಮಾಡಲಾಗಿದೆ. ಇಂದು ಮಂಡಿಸಿದ ರಾಜ್ಯದ 2025-26ನೇ ಸಾಲಿನ ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಈ ಘೋಷಣೆ ಮಾಡಿದ್ದಾರೆ.
ಬ್ರಿಟನ್ ರಾಣಿ ವಿಕ್ಟೋರಿಯಾ ಪಟ್ಟಾಭಿಷೇಕದ ವಜ್ರ ಮಹೋತ್ಸವದ ನೆನಪಿಗಾಗಿ ಈ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು. 1897ರಲ್ಲಿ ಆಸ್ಪತ್ರೆ ಶಂಕುಸ್ಥಾಪನೆಯನ್ನು ಮೈಸೂರು ಮಹಾರಾಣಿ ಕೆಂಪನಂಜಮ್ಮಣ್ಣಿ ನೆರವೇರಿಸಿದ್ದರು. ಇಂದಿಗೂ ಈ ಆಸ್ಪತ್ರೆಗೆ ವಿಕ್ಟೋರಿಯಾ ಆಸ್ಪತ್ರೆ ಎಂಬ ಹೆಸರೇ ಇದೆ. ಈಗ ಈ ಆಸ್ಪತ್ರೆಯ ಹೆಸರು ಅನ್ನು ಬದಲಾವಣೆ ಮಾಡಲು ಸಮಾಜವಾದಿ ನಾಯಕರಾದ ಸಿದ್ದರಾಮಯ್ಯ ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯದ ಖ್ಯಾತ ಸಮಾಜವಾದಿ ನಾಯಕ, 3 ಭಾರಿ ವಿಧಾನಸಭೆಗೆ ಆಯ್ಕೆಯಾಗಿ ತಮ್ಮದೇ ಆದ ಛಾಪು ಮೂಢಿಸಿದ್ದ ಧೀಮಂತ ನಾಯಕ ಶಾಂತವೇರಿ ಗೋಪಾಲಗೌಡರ ಹೆಸರು ಇಡಲು ಸಿಎಂ ಸಿದ್ದರಾಮಯ್ಯ ತೀರ್ಮಾನ ಕೈಗೊಂಡು ರಾಜ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಹಾಗಾದ್ರೆ, ಯಾರು ಈ ಶಾಂತವೇರಿ ಗೋಪಾಲಗೌಡ?
ಕರ್ನಾಟಕದ ಪ್ರಸಿದ್ಧ ಸಮಾಜವಾದಿ ನಾಯಕರು ಮತ್ತು ರೈತ ಚಳವಳಿಯ ಹರಿಕಾರರು
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಎಂಬಲ್ಲಿ ಬಡ ಕೃಷಿಕ ಕುಟುಂಬದಲ್ಲಿ ಜನನ
ಶಾಲಾ ದಿನಗಳಲ್ಲೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಇವರು, 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಜೈಲು ಶಿಕ್ಷೆ ಅನುಭವಿಸಿದ್ದರು.
ರಾಮ್ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಸಮಾಜವಾದಿ ಚಿಂತನೆಗಳಿಂದ ಇವರು ಪ್ರಭಾವಿತರಾಗಿದ್ದರು.
1952 (ಸಾಗರ-ಹೊಸನಗರ), 1962 ಮತ್ತು 1967ರಲ್ಲಿ (ತೀರ್ಥಹಳ್ಳಿ) ಒಟ್ಟು ಮೂರು ಬಾರಿ ಮೈಸೂರು ರಾಜ್ಯದ (ಈಗಿನ ಕರ್ನಾಟಕ) ವಿಧಾನಸಭೆಗೆ ಆಯ್ಕೆಯಾದರು
ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ಹೆಸರಿಡಬೇಕು ಎಂದು ವಿಧಾನಸಭೆಯಲ್ಲಿ ತೀವ್ರವಾಗಿ ಆಗ್ರಹಿಸಿದವರಲ್ಲಿ ಇವರು ಮೊದಲಿಗರು.
'ಉಳುವವನೇ ಹೊಲದೊಡೆಯ' ಎಂಬ ಕ್ರಾಂತಿಕಾರಿ ಕಲ್ಪನೆಯನ್ನು ಕರ್ನಾಟಕದಲ್ಲಿ ಮೊದಲು ಪ್ರತಿಪಾದಿಸಿದವರು
ಇದು ಮುಂದೆ ದೇವರಾಜ ಅರಸು ಅವರ ಕಾಲದ ಭೂಸುಧಾರಣಾ ಕಾಯ್ದೆಗೆ ಬಲವಾದ ಅಡಿಪಾಯವಾಯಿತು.
1951ರಲ್ಲಿ ನಡೆದ ಐತಿಹಾಸಿಕ 'ಕಾಗೋಡು ರೈತ ಸತ್ಯಾಗ್ರಹ'ದ ನೇತೃತ್ವ ವಹಿಸಿ, ಗೇಣಿದಾರರಿಗೆ ಭೂಮಿಯ ಹಕ್ಕು ಕೊಡಿಸಲು ಹೋರಾಡಿದರು.
/filters:format(webp)/newsfirstlive-kannada/media/media_files/2026/03/06/victoria-hospital-became-shanthaveri-gopal-gowda-hospital-1-2026-03-06-12-54-43.jpg)
ಖ್ಯಾತ ಸಮಾಜವಾದಿ ಹೋರಾಟಗಾರ, ನಾಯಕ ಶಾಂತವೇರಿ ಗೋಪಾಲಗೌಡರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us