ಬೆಂಗಳೂರಿನ ಸುರಂಗ ರಸ್ತೆಗೆ ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್‌ : ಮುಂದಿನ ದಾರಿ ಯಾವುದಯ್ಯಾ?

ಬೆಂಗಳೂರಿನಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ದ್ವಿಪಥ ಸುರಂಗ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ಟೆಂಡರ್ ಕರೆದಿತ್ತು. 17,698 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಸರ್ಕಾರ ಪ್ಲ್ಯಾನ್ ಮಾಡಿತ್ತು. ಆದರೇ, 2 ಕಂಪನಿಗಳು ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿವೆ.

author-image
Chandramohan
Updated On
BANGALORE TUNNEL ROAD PROJECT 02

ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಬಿಡ್

Advertisment
  • ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಬಿಡ್
  • ರಾಜ್ಯ ಸರ್ಕಾರದ ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ ಕಂಪನಿಗಳು


ಬೆಂಗಳೂರು ಟನಲ್ ಪ್ರಾಜೆಕ್ಟ್ ಗೆ ಮತ್ತೊಂದು ಸವಾಲು ಎದುರಾಗಿದೆ.  ಕಾಮಗಾರಿ ಆರಂಭಕ್ಕೆ ಮುನ್ನವೇ  ವಿಘ್ನ ಎದುರಾಗಿದೆ. ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗಿನ ಸುರಂಗ ರಸ್ತೆ ನಿರ್ಮಾಣಕ್ಕೆ ಟೆಂಡರ್ ಇನ್ನೂ ಅಂತಿಮವಾಗಿಲ್ಲ. ಆದರೇ, ರಾಜ್ಯ ಸರ್ಕಾರಕ್ಕೆ ಈಗ ಗೊಂದಲ ಶುರುವಾಗಿದೆ. ಸುರಂಗ ರಸ್ತೆ ನಿರ್ಮಾಣಕ್ಕೆ 17,698 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಡ್ ಕರೆಯಲಾಗಿತ್ತು. ಆದರೇ, ಸರ್ಕಾರ ನಿಗದಿಪಡಿಸಿದ ವೆಚ್ಚಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಖಾಸಗಿ ಕಂಪನಿಗಳು ಬಿಡ್ ಮಾಡಿವೆ. ಸರ್ಕಾರದ ಬಜೆಟ್ ಗಿಂತ ಸುರಂಗ ರಸ್ತೆ ನಿರ್ಮಾಣವೂ ದುಬಾರಿಯಾಗಲಿದೆ.  ಹೀಗಾಗಿ ಸರ್ಕಾರದ ಅಂದಾಜು ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿರುವ ಕಂಪನಿಗಳಿಗೆ ಟೆಂಡರ್ ನೀಡಬೇಕೇ ಬೇಡವೇ ಎಂಬ ಗೊಂದಲದಲ್ಲಿ ರಾಜ್ಯ ಸರ್ಕಾರ ಇದೆ. 
ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೂ 17,698 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವುದು ರಾಜ್ಯ ಸರ್ಕಾರ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ಲ್ಯಾನ್. 
ಆದರೆ, ಸರ್ಕಾರದ ಬಜೆಟ್ ಗಿಂತ 20% ರಿಂದ 30% ರಷ್ಟು  ಹೆಚ್ಚು ಮೊತ್ತಕ್ಕೆ ಕಂಪನಿಗಳು ಬಿಡ್ ಮಾಡಿವೆ.  ಬಿಡ್ ನಲ್ಲಿ ಭಾಗವಹಿಸಿದ್ದ ನಾಲ್ಕು ಕಂಪನಿಗಳ ಪೈಕಿ ಎರಡು ಕಂಪನಿಗಳು ಅನರ್ಹವಾಗಿವೆ. 
ಎರಡು ಕಂಪನಿಗಳು ಮಾತ್ರ ಅರ್ಹತೆ ಹೊಂದಿದ್ದು, ಎರಡು ಕಂಪನಿಗಳು ಬಿಡ್, ಸರ್ಕಾರದ ಅಂದಾಜು ವೆಚ್ಚಕ್ಕಿಂತ ಹೆಚ್ಚಿದೆ. ಅದಾನಿ ಗ್ರೂಪ್‌ 22,267 ಕೋಟಿ ರೂಪಾಯಿಗೆ ಬಿಡ್ ಮಾಡಿದೆ. ಹೀಗಾಗಿ ಈಗ ರಾಜ್ಯ ಸರ್ಕಾರ ಗೊಂದಲಕ್ಕೆ ಸಿಲುಕಿದೆ. 

ಟೆಂಡರ್ ವಿವರ
- ಟನಲ್ ರಸ್ತೆ ನಿರ್ಮಾಣಕ್ಕೆ ಇತ್ತೀಚೆಗಷ್ಟೆ ಟೆಂಡರ್ ಕರೆದಿದ್ದ ಬಿ-ಸ್ಮೈಲ್
- ಸುರಂಗ ರಸ್ತೆ ಯೋಜನೆಗೆ ನಾಲ್ಕು ಕಂಪನಿಗಳಿಂದ ಬಿಡ್ 
- ಅದಾನಿ ಗ್ರೂಪ್, ದೀಲೀಪ್‌  ಬಿಲ್ಡ್‌ಕಾನ್, ವಿಶ್ವ ಸಮುದ್ರ ಎಂಜಿನಿಯರಿಂಗ್, ರೈಲ್ ವಿಕಾಸ್ ನಿಗಮ್ ಲಿಮಿಟೆಡ್  ಬಿಡ್ ನಲ್ಲಿ ಭಾಗಿ
- ದೀಲೀಪ್ ಬಿಲ್ಡ್‌ಕಾನ್, ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಅನರ್ಹ
- ಅದಾನಿ ಗ್ರೂಪ್, ದೀಲೀಪ್‌ ಬಿಲ್ಡ್‌ಕಾನ್, ವಿಶ್ವ ಸಮುದ್ರ ಎಂಜಿನಿಯರಿಂಗ್ ನಡುವೆ ಫೈಟ್
- ಅದಾನಿ‌ ಗ್ರೂಪ್ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿದೆ
ಆದರೆ, ಸರ್ಕಾರದ ಬಜೆಟ್ ಗಿಂತ ಅದಾನಿ ಬಿಡ್ ಅಂದಾಜಿಗಿಂತ ಶೇ. 24 ರಿಂದ–ಶೇ.28 ರಷ್ಟು ಹೆಚ್ಚು.

 ಒಟ್ಟು ಯೋಜನೆಗೆ ಸರ್ಕಾರದ ಅಂದಾಜು ವೆಚ್ಚ ₹17,698 ಕೋಟಿ
ಅದಾನಿ ಗ್ರೂಪ್ ಉಲ್ಲೇಖಿಸಿದ ಮೊತ್ತ ₹22,267 ಕೋಟಿ
ಈ ಪೈಕಿ ಮೊದಲ ಪ್ಯಾಕೇಜ್‌ಗೆ ಸರ್ಕಾರದ ಅಂದಾಜಿಗಿಂತ 24% ಹೆಚ್ಚು
 ಎರಡನೇ ಪ್ಯಾಕೇಜ್‌ಗೆ 28% ಹೆಚ್ಚು ಬಿಡ್ ಮಾಡಿರುವ ಅದಾನಿ ಕಂಪನಿ

ಬೆಂಗಳೂರು ಟನಲ್ ರಸ್ತೆ..!

- 16.5 ಕಿ.ಮೀಟರ್ ಉದ್ದದ ಸುರಂಗ ರಸ್ತೆ!
- ಸಿಲ್ಕ್ ಬೋರ್ಡ್ ಟು ಹೆಬ್ಬಾಳ ವರೆಗಿನ ಸುರಂಗ ರಸ್ತೆ 
- ಎರಡು ಪ್ಯಾಕೇಜ್ ನಲ್ಲಿ ಕಾಮಗಾರಿಗೆ ಸರ್ಕಾರ ತೀರ್ಮಾನ..
- ಮೊದಲ ಹಂತದಲ್ಲಿ ಹೆಬ್ಬಾಳದಿಂದ ಮೇಖ್ರಿ ಸರ್ಕಲ್ 

-ಎರಡನೇ ಹಂತದಲ್ಲಿ ಮೇಖ್ರಿ ಸರ್ಕಲ್ ನಿಂದ ಸಿಲ್ಕ್ ಬೋರ್ಡ್ ವರೆಗೂ ಕಾಮಗಾರಿ ಕೈಗೊಳ್ಳಬೇಕು. 

TUNNEL ROAD IN BANGALORE






ರಾಜ್ಯ ಸರ್ಕಾರದ ಮುಂದಿರುವ ದಾರಿ ಯಾವುದು?

ಟನಲ್ ಪ್ರಾಜೆಕ್ಟ್ ಮತ್ತೊಮ್ಮೆ ಕ್ಯಾಬಿನೆಟ್ ಮುಂದೆ!
ಬಜೆಟ್ ಹೆಚ್ಚಾಗ್ತಿರುವ ಕಾರಣ ಕ್ಯಾಬಿನೆಟ್ ಅನುಮೋದನೆ ಅಗತ್ಯ!
ಟೆಂಡರ್ ಕಂಪನಿಗಳ ಬಜೆಟ್ ಕುರಿತು ಚರ್ಚಿಸಿ ತೀರ್ಮಾನ
ಬಜೆಟ್ ಹೆಚ್ಚಾದ್ರೆ ಜನರ ಮೇಲೆ ಬೀಳಲಿದೆ ಹೊರೆ! 
ಟನಲ್ ರಸ್ತೆಗೆ ಟೋಲ್ ಸಂಗ್ರಹ ಮಾಡಲಿರುವ ಸರ್ಕಾರ
ಈಗಾಗಲೇ ಸರ್ಕಾರದ ಟೋಲ್ ದರಕ್ಕೆ ವಿರೋಧ ಇದೆ
ಈ ನಡುವೆ ಸರ್ಕಾರದ ಅಂದಾಜು ವೆಚ್ಚಕ್ಕಿಂತ ಬಜೆಟ್ ಹೆಚ್ಚಾದರೇ ಮತ್ತಷ್ಟು ವಿರೋಧ ಸಾಧ್ಯತೆ
ವಿರೋಧ ಪಕ್ಷಗಳಿಂದಲೂ ವಿರೋಧ ಸಾಧ್ಯತೆ    



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore tunnel road bid exceeds government estimates
Advertisment