ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಎಚ್‌.ಡಿ.ರೇವಣ್ಣಗೆ ಬಿಗ್ ರಿಲೀಫ್‌! : IPC ಸೆಕ್ಷನ್‌ 354 ಎ ಕೇಸ್ ಪರಿಗಣನೆಗೆ ಕೋರ್ಟ್ ನಕಾರ

ಮಾಜಿ ಸಚಿವ ಎಚ್‌.ಡಿ.ರೇವಣ್ಣಗೆ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಇಂದು ದೊಡ್ಡ ರಿಲೀಫ್ ನೀಡಿದೆ. ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಪರಿಗಣನೆಗೆ ಕೋರ್ಟ್ ನಿರಾಕರಿಸಿದೆ. ಇದರಿಂದ ಕೇಸ್ ರದ್ದು ಆಗಿದೆ.

author-image
Chandramohan
BIG BREAKING: ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಜೈಲು ಪಾಲು

ಜೆಡಿಎಸ್ ಪಕ್ಷದ ಮಾಜಿ ಸಚಿವ ಎಚ್‌.ಡಿ.ರೇವಣ್ಣಗೆ ರಿಲೀಫ್‌

Advertisment
  • ಜೆಡಿಎಸ್ ಪಕ್ಷದ ಮಾಜಿ ಸಚಿವ ಎಚ್‌.ಡಿ.ರೇವಣ್ಣಗೆ ರಿಲೀಫ್‌
  • ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಕಾಗ್ನಿಜೆನ್ಸ್ ಪಡೆಯಲು ಕೋರ್ಟ್ ನಕಾರ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೆಚ್.ಡಿ.ರೇವಣ್ಣ ಗೆ ರಿಲೀಫ್ ಸಿಕ್ಕಿದೆ.  ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕೆ ರಿಲೀಫ್ ಸಿಕ್ಕಿದೆ.  ಹೆಚ್. ಡಿ. ರೇವಣ್ಣ ವಿರುದ್ಧದ ಐಪಿಸಿ ಸೆಕ್ಷನ್  354A ಅಡಿಯ ಪ್ರಕರಣವನ್ನು ಕೋರ್ಟ್ ಕೈ ಬಿಟ್ಟಿದೆ. ಬೆಂಗಳೂರಿನ  42 ನೇ ಎಸಿಜೆಎಂ ಜಡ್ಜ್ ಕೆ.ಎನ್.ಶಿವಕುಮಾರ್  ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.  ಹೊಳೆನರಸಿಪುರದ ಮಹಿಳೆ ಹೆಚ್ ಡಿ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದರು.  ಈ ಹಿಂದೆ ಇದೇ ಪ್ರಕರಣದಲ್ಲಿ ಎಚ್‌.ಡಿ. ರೇವಣ್ಣ  ಬಂಧಿತರಾಗಿದ್ದರು. ಎರಡು ಸೆಕ್ಷನ್ ಗಳಲ್ಲಿ ಹೈಕೋರ್ಟ್ ಒಂದು ಸೆಕ್ಷನ್ ರದ್ದುಪಡಿಸಿತ್ತು.   354 ಎ ಅಡಿಯ ಕೇಸ್ ಕಾಗ್ನಿಜೆನ್ಸ್ ಪಡೆಯಲು 42 ನೇ ಎಸಿಜೆಎಂ ಕೋರ್ಟ್ ನಿರಾಕರಿಸಿದೆ. ಹೀಗಾಗಿ ಐಪಿಸಿ ಸೆಕ್ಷನ್ 354ಎ ಅಡಿಯ ಕೇಸ್ ರದ್ದಾಗಿದೆ.  ಮಹಿಳೆ ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 354ಎ ಅಡಿಯ  ಆರೋಪದ ಕೇಸ್ ಅನ್ನು ಪರಿಗಣಿಸಲು ನಿರಾಕರಿಸಿದೆ. 


ಸೆಕ್ಷನ್ 354Aರ ಅಡಿಯಲ್ಲಿ ಅಪರಾಧಗಳು
ಯಾವುದೇ ಪುರುಷ ಈ ಕೆಳಗಿನ ಕೃತ್ಯಗಳಲ್ಲಿ ತೊಡಗಿದರೆ, ಅವನು ಲೈಂಗಿಕ ಕಿರುಕುಳದ ಅಪರಾಧವನ್ನು ಮಾಡಿದ್ದಾನೆ ಎಂದು ಪರಿಗಣಿಸಲಾಗುತ್ತದೆ:
ಅಸಮ್ಮತಿದಾಯಕ ಸ್ಪರ್ಶ ಮತ್ತು ಮುನ್ನಡೆಗಳು: ಅಸಮ್ಮತಿಯೊಂದಿಗೆ ಮತ್ತು ಸ್ಪಷ್ಟವಾಗಿ ಲೈಂಗಿಕ ಆಸಕ್ತಿಗಳನ್ನು ತೋರಿಸುವ ದೈಹಿಕ ಸ್ಪರ್ಶ.
ಲೈಂಗಿಕ ಬೇಡಿಕೆಗಳು: ಲೈಂಗಿಕ ಪರವಾಗಿ ಬೇಡಿಕೆ ಅಥವಾ ವಿನಂತಿ ಮಾಡುವುದು.
ಅಶ್ಲೀಲತೆ ತೋರಿಸುವುದು: ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲ ಚಿತ್ರಗಳನ್ನು ತೋರಿಸುವುದು.
ಲೈಂಗಿಕ ಬಣ್ಣದ ಟೀಕೆಗಳು: ಲೈಂಗಿಕವಾಗಿ suggestive ಅಥವಾ ಆಕ್ರಮಣಕಾರಿ ಟೀಕೆಗಳನ್ನು ಮಾಡುವುದು. 
ಶಿಕ್ಷೆ
ಮೇಲಿನ i, ii, ಮತ್ತು iii ಖಂಡಗಳ ಅಪರಾಧಗಳಿಗೆ: ಗರಿಷ್ಠ ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ದಂಡ, ಅಥವಾ ಎರಡೂ.
ivನೇ ಖಂಡದ ಅಪರಾಧಕ್ಕೆ (ಲೈಂಗಿಕ ಟೀಕೆಗಳು): ಗರಿಷ್ಠ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ, ಅಥವಾ ಎರಡೂ. 

Bangalore city civil court






ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Relief to HD Revanna
Advertisment