ವಿನಯ್, ರಜತ್​​ಗೆ ತಪ್ಪದ ಸಂಕಷ್ಟ.. ಮತ್ತೆ ಮತ್ತೆ ನೆನಪಿಸ್ತಿದೆ ಮಚ್ಚು, ಲಾಂಗು ಕೇಸ್​..!

ಸೋಶಿಯಲ್ ಮೀಡಿಯಾದಲ್ಲಿ ಲಾಂಗ್​ ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡುವವರಿಗೆ ಪೊಲೀಸರು ಶಾಕ್​ ಕೊಟ್ಟಿದ್ದಾರೆ. ಲಾಂಗ್, ಮಚ್ಚು ಹಿಡಿದು ಪೋಸ್ ನೀಡಿದ್ದ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ಗೌಡ, ರಜತ್ ಕಿಶನ್​​ಗೆ ಮತ್ತೆ ಕ್ಲಾಸ್​ ನಡೆಯಲಿದೆ

author-image
Ganesh Kerekuli
10 ವರ್ಷದ ಸ್ನೇಹ ಪೀಸ್, ಪೀಸ್ ಆಗಲು ‘ಮಚ್ಚು’ ಕಾರಣವಲ್ಲ.. ರಜತ್, ವಿನಯ್ ಮಧ್ಯೆ ನಡೆದಿದ್ದೇ ಬೇರೆ!
Advertisment

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ (Social media) ಲಾಂಗ್​ ಮಚ್ಚು ಹಿಡಿದುಕೊಂಡು ರೀಲ್ಸ್ (reels) ಮಾಡುವವರಿಗೆ ಪೊಲೀಸರು  ಶಾಕ್​ ಕೊಟ್ಟಿದ್ದಾರೆ. ಲಾಂಗ್, ಮಚ್ಚು ಹಿಡಿದು ಪೋಸ್ ನೀಡಿದ್ದ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ಗೌಡ, (Vinay Gowda) ರಜತ್ ಕಿಶನ್ (Rajath Kishan)ಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

ಜೈಲಿನಿಂದ ರಿಲೀಸ್ ಆದ್ರೂ ತಪ್ಪಿಲ್ಲ ಸಂಕಷ್ಟ..!

ಬಿಗ್​ಬಾಸ್​ನಲ್ಲಿ​​ ಹವಾ ಸೃಷ್ಟಿ ಮಾಡಿದ್ದ ಮಾಜಿ ಸ್ಫರ್ಧಿಗಳಾದ ವಿನಯ್​ ಹಾಗೂ ರಜತ್ ಕಿಶನ್​ ಈ ಹಿಂದೆ ಮಚ್ಚು, ಲಾಂಗ್ ಹಿಡ್ಕೊಂಡು ರೀಲ್ಸ್ ಮಾಡಿದರು. ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಗ್ಲಾಸ್​, ಕೈಯಲ್ಲಿ ಲಾಂಗು ಹಿಡಿದು ನಟ ದರ್ಶನ್​ ಅವರ ಅಭಿನಯದ ಮೆಜೆಸ್ಟಿಕ್ ಹಾಡಿಗೆ ಸ್ಲೋ ಮೋಷನ್ ವಾಕ್​ ಮಾಡಿದ್ದರು. ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.

ರಜತ್, ವಿನಯ್‌ ಹಿಡಿದಿದ್ದ ಆ ‘ಮಚ್ಚು’ ಎಲ್ಲಿ? ಸ್ಟುಡಿಯೋದಲ್ಲಿ ಫುಲ್ ತಲಾಶ್‌! ಕೊನೆಗೆ ಆಗಿದ್ದೇನು? ಹೊಸ ಟ್ವಿಸ್ಟ್‌!

ಈ ಜೋಡೆತ್ತಿನ ರೀಲ್ಸ್ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆದ ಬೆನ್ನಲ್ಲೇ ಬೆಂಗಳೂರಿನ ಬಸವೇಶ್ವರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇದ್ದರಿಂದ ವಿನಯ್​ ಹಾಗೂ ರಜತ್​ ಕಿಶನ್​ ಪರಪ್ಪನ ಅಗ್ರಹಾರದ ಜೈಲಿನ ಬಾಗಿಲು ಕೂಡ ತಟ್ಟಿ ಬಂದಿದ್ದರು.

ಇದೀಗ ಮತ್ತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಮಚ್ಚು, ಲಾಂಗ್ ಹಿಡ್ಕೊಂಡು ರೀಲ್ಸ್ ಮಾಡುವವರಿಗೆ ಪೊಲೀಸರ ಶಾಕ್ ಕೊಟ್ಟಿದ್ದಾರೆ. ಪಶ್ಚಿಮ ವಿಭಾಗದ ಪೊಲೀಸರಿಂದ ನಿಮ್ಮ ಮೇಲೆ ಯಾಕೆ ರೌಡಿಶೀಟರ್ ಓಪನ್ ಮಾಡಬಾರದು ಎಂದು ರಜತ್ ಹಾಗೂ ವಿನಯ್​ಗೆ ನೊಟೀಸ್​ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಆರ್ಮ್ ಆಕ್ಟ್ ಅಡಿಯಲ್ಲಿ ಕೇಸ್ ಆದವರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಈಗಾಗಲೇ ಪೊಲೀಸರು ಹಲವು ಕೇಸ್​ಗಳಲ್ಲಿ ಆರೋಪಿಗಳ ಲಿಸ್ಟ್ ಮಾಡ್ಕೊಂಡಿದ್ದು, ಹಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ. 

 ಇದನ್ನೂ ಓದಿ:ರಾಯಚೂರಿಗೆ ಬೇಡ, ತಿಮರೋಡಿಯನ್ನ ಕಾಡಿಗೆ ಕಳುಹಿಸಿ -ಭಾರೀ ಪ್ರತಿಭಟನೆ

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bigboss kannada 1 0
Advertisment