/newsfirstlive-kannada/media/media_files/2025/10/29/road-rage-accused-2025-10-29-16-08-07.jpg)
ಬೈಕ್ ಗೆ ಕಾರ್ ಡಿಕ್ಕಿ ಹೊಡೆಸಿ ದರ್ಶನ್ ಕೊಲೆಗೈದ ಆರೋಪಿ ಆರತಿ ಶರ್ಮಾ, ಮನೋಜ್
ಬೆಂಗಳೂರಿನಲ್ಲಿ ರೋಡ್ ರೇಜ್ ರೀತಿಯಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅಕ್ಸಿಡೆಂಟ್ ರೀತಿಯಲ್ಲಿ ಬಿಂಬಿಸಿ ಕೊಲೆ ಮಾಡಲಾಗಿದೆ.
ರಾತ್ರಿ ವೇಳೆ ಕಾರ್ ಮಿರರ್ ಗೆ ಬೈಕ್ ಟಚ್ ಆಗಿದ್ದಕ್ಕೆ ಹಿಂಬಾಲಿಸಿ ಕೊಂಡು ಬಂದು ಕೊಲೆ ಮಾಡಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ಘಟನೆ ನಡೆದಿದೆ. ಒಂದು ಸಣ್ಣ ರೋಡ್ ರೇಜ್ ಘಟನೆ ಕೊಲೆಯಲ್ಲಿ ಅಂತ್ಯವಾಗಿದೆ.
ಬೆಂಗಳೂರಿನ ಜೆ.ಪಿ.ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಕೇಸ್ ಎಂದು ಕೇಸ್ ದಾಖಲಾಗಿತ್ತು. ಆದರೇ, ಬಳಿಕ ಪೊಲೀಸರ ತನಿಖೆ ವೇಳೆ ಕೊಲೆ ಎಂಬುದು ದೃಢಪಟ್ಟಿದೆ. ಅಕ್ಟೋಬರ್ 25ರ ರಾತ್ರಿ 11.30ರ ಸಮಯದಲ್ಲಿ ಪುಟ್ಟೇನಹಳ್ಳಿಯ ಶ್ರೀರಾಮ ಲೇಔಟ್ ನಲ್ಲಿ ಈ ಘಟನೆ ನಡೆದಿತ್ತು. ಮೊದಲು ಬೈಕ್ ನಿಂದ ಕಾರಿನ ಮಿರರ್ ಗೆ ಟಚ್ ಆಗಿ ಕಾರಿನ ಮಿರರ್ ಒಡೆದು ಹೋಗಿತ್ತು. ಅದೇ ಕೋಪಕ್ಕೆ ಬೈಕ್ ನಲ್ಲಿದ್ದ ಯುವಕನನ್ನು 2 ಕಿಲೋಮೀಟರ್ ವರೆಗೂ ಚೇಸ್ ಮಾಡಿ ಕಾರಿನಿಂದ ಗುದ್ದಿ ಕೊಲೆ ಮಾಡಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರು ರಸ್ತೆಯಲ್ಲಿ ಹಾರಿ ಬಿದ್ದಿದ್ದರು. ಬೈಕ್ ನಲ್ಲಿದ್ದ ದರ್ಶನ್ ಮತ್ತು ವರುಣ್ ಇಬ್ಬರಿಗೂ ಗಾಯಗಳಾಗಿದ್ದವು. ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೇ, ಚಿಕಿತ್ಸೆ ಫಲಕಾರಿಯಾಗದೇ ದರ್ಶನ್ ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 25 ರಂದು ರಾತ್ರಿ ಆರೋಪಿಗಳಾದ ಮನೋಜ್ ಕುಮಾರ್ ಮತ್ತು ಆರತಿ ಶರ್ಮಾ ಕಾರಿನಲ್ಲಿ ಹೊರಗಡೆ ಹೋಗಿದ್ದರು. ಈ ವೇಳೆ ದರ್ಶನ್ ಮತ್ತು ವರುಣ್ ತಮ್ಮ ಬೈಕ್ ನಲ್ಲಿ ಬಂದು ಕಾರಿನ ಮಿರರ್ ಅನ್ನು ಟಚ್ ಮಾಡಿದ್ದರು. ಬಳಿಕ ಉದ್ದೇಶಪೂರ್ವಕವಾಗಿ ಕಾರಿನ ಮಿರರ್ ಅನ್ನು ಹೊಡೆದು ಹಾಕಿದ್ದರು. ಇದರಿಂದ ಮನೋಜ್ ಕುಮಾರ್ ಮತ್ತು ಆರತಿ ಶರ್ಮಾ ಸಿಟ್ಟಾಗಿ ಬೈಕ್ ನಲ್ಲಿದ್ದ ದರ್ಶನ್ ಮತ್ತು ವರುಣ್ ರನ್ನು ಕಾರಿನಲ್ಲಿ ಬೆನ್ನಟ್ಟಿಸಿಕೊಂಡು ಬಂದಿದ್ದಾರೆ . ಕಾರಿನಲ್ಲಿ ಬೈಕ್ ಅನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಒಮ್ಮೆ ಬೈಕ್ ನಲ್ಲಿ ಇದ್ದವರು ಮಿಸ್ ಆಗಿದ್ದರು. ಬಳಿಕ ಮತ್ತೆ ಯೂ ಟರ್ನ್ ತೆಗೆದುಕೊಂಡು ಬೈಕ್ ಅನ್ನು ಚೇಸ್ ಮಾಡಿದ್ದಾರೆ. ಕಾರಿನಲ್ಲಿ ವೇಗವಾಗಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಬೈಕ್ ನಲ್ಲಿದ್ದ ದರ್ಶನ್ ಮತ್ತು ವರುಣ್ ಗಾಯಗೊಂಡಿದ್ದರು. ದರ್ಶನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರಿಂದ ಇದು ಕೊಲೆ ಕೇಸ್ ಆಗಿದೆ.
/filters:format(webp)/newsfirstlive-kannada/media/media_files/2025/10/29/road-rage-victim-darshan-2025-10-29-16-18-54.jpg)
ಕಾರ್ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟ ದರ್ಶನ್
ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ಮನೋಜ್ ಕುಮಾರ್ ಮತ್ತು ಆರತಿ ಶರ್ಮಾ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಘಟನೆ ನಡೆದ ಕೆಲ ಸಮಯದ ನಂತರ ಅದೇ ಸ್ಥಳಕ್ಕೆ ವಾಪಸ್ ಬಂದು ಸ್ಥಳದಲ್ಲಿ ಬಿದ್ದಿದ್ದ ಕಾರಿನ ಕೆಲ ಪಾರ್ಟ್ಸ್ ಗಳನ್ನು ತೆಗೆದುಕೊಂಡು ಹೋಗಿದ್ದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸ್ಥಳದಲ್ಲಿದ್ದ ಕಾರಿನ ಕೆಲ ಪಾರ್ಟ್ಸ್ ಗಳನ್ನು ತೆಗೆದುಕೊಂಡು ಹೋಗಿದ್ದರು. ಇದೆಲ್ಲವೂ ರಸ್ತೆಯಲ್ಲಿದ್ದ ಸಿಸಿಟಿವಿ ಯಲ್ಲಿ ರೆಕಾರ್ಡ್ ಆಗಿತ್ತು. ಅದರ ಆಧಾರದ ಮೇಲೆ ಕಾರ್ ಮತ್ತು ಅದರಲ್ಲಿದ್ದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಆರೋಪಿಗಳಾದ ಮನೋಜ್ ಕುಮಾರ್ ಮತ್ತು ಆರತಿ ಶರ್ಮಾರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us