/newsfirstlive-kannada/media/post_attachments/wp-content/uploads/2025/07/BNG-BYRATHI.jpg)
ಶಾಸಕ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬೆಂಗಳೂರಿನ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜು ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಇದರಿಂದಾಗಿ ಶಾಸಕ ಭೈರತಿ ಬಸವರಾಜು ಬಂಧಿಸುವ ಪೊಲೀಸರ ಹಾದಿ ಕೂಡ ಸುಗಮವಾಗಿದೆ. ಆದರೇ, ಭೈರತಿ ಬಸವರಾಜು ಎಲ್ಲಿದ್ದಾರೆ ಎಂಬುದೇ ಪೊಲೀಸರಿಗೂ ಗೊತ್ತಾಗುತ್ತಿಲ್ಲ. ಮಹಾರಾಷ್ಟ್ರದ ಪುಣೆ ಬಳಿಯ ರೆಸಾರ್ಟ್ ನಲ್ಲಿ ಭೈರತಿ ಬಸವರಾಜು ಅಡಗಿರಬಹುದು ಎಂಬ ಶಂಕೆ ಇದೆ. ಪೊಲೀಸ್ ತಂಡಗಳು ಮಹಾರಾಷ್ಟ್ರ, ತಮಿಳುನಾಡು, ಗೋವಾ ರಾಜ್ಯಗಳಿಗೂ ತೆರಳಿದ್ದು, ಹುಡುಕಾಟ ನಡೆಸಿವೆ. ಬೆಂಗಳೂರಿನ ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಎ1 ಆರೋಪಿಯಾಗಿರುವ ಜಗ್ಗ ಜೊತೆಗೆ ಶಾಸಕ ಭೈರತಿ ಬಸವರಾಜುಗೆ ನಂಟಿದೆ ಎಂಬುದು ಪೊಲೀಸರ ಆರೋಪ. ಹೀಗಾಗಿ ಶಾಸಕ ಭೈರತಿ ಬಸವರಾಜುರನ್ನು ಐದನೇ ಆರೋಪಿಯನ್ನಾಗಿ ಮಾಡಿದ್ದಾರೆ.
ಈಗ ಬಂಧನದ ಭೀತಿಯಿಂದಲೇ ಶಾಸಕ ಭೈರತಿ ಬಸವರಾಜು ತಲೆಮರೆಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us