ಜಿಬಿಎ ಐದು ಪಾಲಿಕೆಗಳಿಗೆ ಚುನಾವಣಾ ಉಸ್ತುವಾರಿ ನೇಮಿಸಿದ ಬಿಜೆಪಿ : ಚುನಾವಣಾ ಉಸ್ತುವಾರಿಯಾಗಿ ರಾಮ ಮಾಧವ್ ನೇಮಕ

ಬೆಂಗಳೂರಿನ ಐದು ಪಾಲಿಕೆ ಚುನಾವಣೆಗೆ ಬಿಜೆಪಿಯಿಂದ ಉಸ್ತುವಾರಿಯಾಗಿ ರಾಮಮಾಧವ್ ಅವರನ್ನು ನೇಮಕ ಮಾಡಲಾಗಿದೆ. ಇನ್ನೂ ಚುನಾವಣಾ ಸಹ ಉಸ್ತುವಾರಿಗಳಾಗಿ ಸತೀಶ್ ಪೂನಿಯಾ ಹಾಗೂ ಶಾಸಕ ಸಂಜಯ ಉಪಾಧ್ಯಾಯ ಅವರನ್ನು ನೇಮಿಸಲಾಗಿದೆ.

author-image
Chandramohan
GBA BJP INCHARGE RAM MADHAV

GBA ಚುನಾವಣೆಗೆ ಬಿಜೆಪಿಯಿಂದ ರಾಮ ಮಾಧವ್ ಉಸ್ತುವಾರಿಯಾಗಿ ನೇಮಕ

Advertisment
  • GBA ಚುನಾವಣೆಗೆ ಬಿಜೆಪಿಯಿಂದ ರಾಮ ಮಾಧವ್ ಉಸ್ತುವಾರಿಯಾಗಿ ನೇಮಕ
  • ಸಹ ಉಸ್ತುವಾರಿಗಳಾಗಿ ಸತೀಶ್ ಪೂನಿಯಾ, ಸಂಜಯ ಉಪಾಧ್ಯಾಯ ನೇಮಕ
  • ಕೇರಳ ಅಸೆಂಬ್ಲಿ ಚುನಾವಣೆಗೆ ಶೋಭಾ ಕರಂದ್ಲಾಜೆ ಸಹ ಉಸ್ತುವಾರಿಯಾಗಿ ನೇಮಕ

ಹೊಸದಾಗಿ ಆಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿಯ ಐದು ಮಹಾನಗರ ಪಾಲಿಕೆಗಳಿಗೆ ಈ ವರ್ಷದ ಜೂನ್ 30 ರೊಳಗೆ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ.  ಐದು ಪಾಲಿಕೆ ಚುನಾವಣೆಗಳಲ್ಲಿ ಗೆಲ್ಲಲು  ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ. ಚುನಾವಣಾ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.   ಜಿಬಿಎ ಚುನಾವಣೆಗೆ ಸಿದ್ದತೆ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‌  ಬಿಜೆಪಿಯಿಂದ ಚುನಾವಣಾ ಉಸ್ತುವಾರಿ ಮತ್ತು ಚುನಾವಣಾ ಸಹ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. 
ಜಿಬಿಎ ಚುನಾವಣೆಗೆ ಬಿಜೆಪಿಯ ಉಸ್ತುವಾರಿಯಾಗಿ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಅವರನ್ನು ನೇಮಿಸಲಾಗಿದೆ.  ಜಿಬಿಎ ಚುನಾವಣೆಗೆ ಸಹ ಉಸ್ತುವಾರಿಯಾಗಿ ರಾಜಸ್ಥಾನ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಸತೀಶ್ ಪೂನಿಯಾ ಹಾಗೂ ಮಹಾರಾಷ್ಟ್ರದ ಬಿಜೆಪಿ ಶಾಸಕ ಸಂಜಯ ಉಪಾಧ್ಯಾಯ ಅವರನ್ನು ನೇಮಿಸಲಾಗಿದೆ.

GBA BJP INCHARGE satish poonia





ರಾಮ ಮಾಧವ್ ಅವರು ಈ ಹಿಂದೆ ಬಿಜೆಪಿಯ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್ ವಕ್ತಾರರಾಗಿದ್ದರು. ಆರ್‌.ಎಸ್.ಎಸ್. ನಲ್ಲಿ ಪ್ರಭಾವಿಯಾಗಿದ್ದರು. ಬಳಿಕ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದು, ಜಮ್ಮು ಕಾಶ್ಮೀರದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ರಾಮ ಮಾಧವ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದಾಗಲೇ, ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಪಕ್ಷವು ಪಿಡಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು.   ರಾಮ ಮಾಧವ್ ಬಿಜೆಪಿ ಸಂಘ ಪರಿವಾರದ ನಾಯಕ. ಸೈದ್ದಾಂತಿಕ ಬದ್ದತೆ, ಪ್ರಖರ ವಿಚಾರಧಾರೆಯ ನಾಯಕ. ಅಂಥ ಪ್ರಬಲ ನಾಯಕರನ್ನು ಈಗ ಜಿಬಿಎ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನೇಮಿಸಿರುವುದು ವಿಶೇಷ. 

 ನಿತಿನ್ ನಬಿನ್ ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಐದು ಪಾಲಿಕೆಗಳ ಚುನಾವಣೆಗೆ ಬಿಜೆಪಿಯ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡುವ ಮೂಲಕ ಪಕ್ಷದ ಸಂಘಟನೆಯಲ್ಲಿ ಮೊದಲ ಹೆಜ್ಜೆ ಇರಿಸಿದ್ದಾರೆ. 
ಜೊತೆಗೆ ಕೇರಳ ಅಸೆಂಬ್ಲಿ ಚುನಾವಣೆಗೆ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನಿತಿನ್ ನಬಿನ್ ನಿನ್ನೆಯೇ ನೇಮಿಸಿ ಆದೇಶ ಹೊರಡಿಸಿದ್ದಾರೆ. ಕೇರಳ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ ವಿನೋದ್ ತಾವಡೆ  ಅವರನ್ನು ನೇಮಿಸಲಾಗಿದೆ. ಚುನಾವಣಾ ಸಹ ಉಸ್ತುವಾರಿಯಾಗಿ ಕೇಂದ್ರದ ಕಾರ್ಮಿಕ ಖಾತೆ ರಾಜ್ಯ ಸಚಿವೆ ಹಾಗೂ ಎಂಎಸ್‌ಎಂಇ ಖಾತೆ ಸಚಿವೆ ಶೋಭಾ ಕರಂದ್ಲಾಜೆ  ಅವರನ್ನು ನೇಮಿಸಲಾಗಿದೆ.

kerala bjp election incharge shobha



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

NITIN NABIN BJP BJP leader Ballot paper GBA Election GBA Election
Advertisment