/newsfirstlive-kannada/media/media_files/2026/02/12/byarthi-basavaraj-arrest-in-murder-case-2026-02-12-19-22-33.jpg)
ಕಳೆದ ಕೆಲ ದಿನಗಳಿಂದ ತಲೆ ಮರೆಸಿಕೊಂಡಿದ್ದ ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜು ಬಂಧನವಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಭೈರತಿ ಬಸವರಾಜು ಬಂಧನವಾಗಿದೆ. ಗುಜರಾತ್ ರಾಜ್ಯದ ಅಹಮದಾಬಾದ್ ನಿಂದ ಭೈರತಿ ಬಸವರಾಜು ಏರ್ ಪೋರ್ಟ್ ಗೆ ಬಂದಿಳಿಯುತ್ತಿದ್ದಂತೆ, ಏರ್ ಪೋರ್ಟ್ ನಲ್ಲೇ ಪೊಲೀಸರು ಕೊಲೆ ಕೇಸ್ ನಲ್ಲಿ ಬಂಧಿಸಿದ್ದಾರೆ. ರೌಡಿ ಶೀಟರ್ ಬಿಕ್ಲುಶಿವ ಕೊಲೆ ಕೇಸ್ ನಲ್ಲಿ ಭೈರತಿ ಬಸವರಾಜು ಕೂಡ ಆರೋಪಿಯಾಗಿದ್ದಾರೆ. ಭೈರತಿ ಬಸವರಾಜು ಕುಮ್ಮಕ್ಕಿನಿಂದಲೇ ಬಿಕ್ಲುಶಿವ ಕೊಲೆಯಾಗಿದೆ ಎಂದು ಪೊಲೀಸರು ಹೈಕೋರ್ಟ್ ನಲ್ಲಿ ವಾದಿಸಿದ್ದರು.
ನಿರೀಕ್ಷಣಾ ಜಾಮೀನು ಸಿಗದೇ ಇದ್ದಿದ್ದರಿಂದ ಭೈರತಿ ಬಸವರಾಜು ತಲೆ ಮರೆಸಿಕೊಂಡಿದ್ದರು. ಇಂದು ಬೆಳಿಗ್ಗೆ ಸುಪ್ರೀಂಕೋರ್ಟ್ ಕೂಡ ಭೈರತಿ ಬಸವರಾಜುಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಬೇರೆ ದಾರಿ ಕಾಣದೇ ಭೈರತಿ ಬಸವರಾಜು ಬೆಂಗಳೂರಿಗೆ ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us