/newsfirstlive-kannada/media/post_attachments/wp-content/uploads/2025/03/JOB_METRO.jpg)
ನಮ್ಮ ಮೆಟ್ರೋ ದರ ಏರಿಕೆಗೆ ತೇಜಸ್ವಿ ಸೂರ್ಯ ವಿರೋಧ
ನಮ್ಮ ಮೆಟ್ರೋ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ತೀವ್ರ ಆಕ್ಷೇಪ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮೆಟ್ರೋ, ದೇಶದಲ್ಲಿ ದುಬಾರಿ ಮೆಟ್ರೋ ಆಗಿದೆ . ಸಾಮಾನ್ಯ ಜನ ಮೆಟ್ರೋ ಬಳಸದ ರೀತಿ ಆಗಿದೆ. ದೆಹಲಿ, ಚೆನೈ, ಕೊಚ್ಚಿ ಮೊಟ್ರೋದಲ್ಲಿ ಹತ್ತು ಕಿಲೋಮೀಟರ್ ಓಡಾಡುವ ದರವನ್ನು, ನಮ್ಮ ಮೆಟ್ರೋಗೆ ಹೋಲಿಕೆ ಮಾಡಿದ್ರೆ ದರ ದುಪ್ಪಟ್ಟು ಆಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮತ್ತೆ ಬಿಎಂಆರ್.ಸಿಎಲ್ 5% ದರ ಹೆಚ್ಚಳ ಮಾಡುವುದಕ್ಕೆ ಹೊರಟಿದೆ. ರಾಜ್ಯ ಸರ್ಕಾರ ಹಾಗೂ ಬಿಎಂಆರ್.ಸಿಎಲ್ ಜನರನ್ನ ಸುಲಿಗೆ ಮಾಡುತ್ತಿದೆ. ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ನಾಲ್ಕು ವರ್ಷ ತಡವಾಗಿದೆ. ಬಿಎಂಆರ್ಸಿಎಲ್ ಗೆ ಹಿಂದೆ ಮಾಡಿರುವ ದರ ಏರಿಕೆ ತಪ್ಪಾಗಿದೆ ಎಂದು ಕಿವಿ ಹಿಂಡುವ ಕೆಲಸವನ್ನು ನಾವು ಮಾಡಿದ್ದೇವು. ಆದರೂ ಬಿಎಂಆರ್‌ಸಿಎಲ್ ತಲೆಕೆಡಿಸಿಕೊಳ್ಳಲಿಲ್ಲ . ಸಿಎಂ, ಡಿಸಿಎಂಗೆ ಹೇಳುತ್ತೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಂದು ರಾಜಕೀಯ ಮಾಡದೆ ಜನರ ಪರ ನಿಲ್ಲಬೇಕು. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಹೊಸ ದರ ಫಿಕ್ಸ್ ಮಾಡುವ ಕಮಿಟಿ ಪುನರ್ ರಚನೆ ಮಾಡಲು ಪತ್ರ ಬರೆಯಲಿ. ಅದಕ್ಕೆ ಬೆಂಗಳೂರಿನ ಎಲ್ಲಾ ಸಂಸದರ ಸಹಕಾರ ಇರುತ್ತದೆ. ಕೇಂದ್ರದಿಂದ ಆಗಬೇಕಿರುವ ಕೆಲಸವನ್ನು ನಾವು ಮಾಡುತ್ತೇವೆ. ಮೆಟ್ರೋ ದರ ಕಡಿಮೆ ಆಗಬೇಕು ಅನ್ನೋ ಆಗ್ರಹ ನಮ್ಮದಾಗಿರಬೇಕು. ಹಿಂದೆ ಸರ್ಕಾರ ಮಾಡಿರುವ ಫೇರ್ ಪಿಕ್ಸೇಷನ್ ಕಮಿಟಿ ಮಾಡಿರುವ ನಿರ್ಧಾರ ತಪ್ಪಿದೆ. ಮೆಟ್ರೋ ದರ ಮತ್ತೆ ಏರಿಕೆ ಮಾಡಲು ಬಿಎಂಆರ್ಸಿಎಲ್ ಮುಂದಾದ್ರೆ ಪ್ರತಿ ಮೆಟ್ರೋ ಸ್ಟೇಷನ್ ನಲ್ಲಿ ಬಿಜೆಪಿಯಿಂದ ಪ್ರತಿಭಟನೆ ಮಾಡಲಾಗುತ್ತದೆ.
/filters:format(webp)/newsfirstlive-kannada/media/post_attachments/wp-content/uploads/2023/07/Tejaswi-Surya.jpg)
ದರ ಹೆಚ್ಚಿಗೆ ಮಾಡಿ ಜನರಿಂದ ದರೋಡೆ ಮಾಡಬೇಡಿ . ರಾಜ್ಯ ಸರ್ಕಾರ ದರ ಹೆಚ್ಚಿಗೆ ಮಾಡಿ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದನ್ನು ಬಿಡಲಿ. ಅವೈಜ್ಞಾನಿಕವಾಗಿ ಬಿಎಂಆರ್‌ಸಿಎಲ್ ಮಾಡಿರುವ ದರ ಏರಿಕೆ ಲೆಕ್ಕಾಚಾರ ತಪ್ಪಾಗಿದೆ. ಫೆಬ್ರುವರಿಯಲ್ಲಿ ಮತ್ತೆ ಬಿಎಂಆರ್‌ಸಿಎಲ್ ದರ ಏರಿಕೆ ಮಾಡಲು ಮುಂದಾದ್ರೆ, ಎಲ್ಲ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us