Advertisment

‘ಬರೀ ರಸ್ತೆ ಗುಂಡಿ, ಧೂಳು ಬೆಂಗಳೂರು ಖಾಲಿ ಮಾಡ್ತೀವಿ’ ಎಂದ ಬ್ಲ್ಯಾಕ್‌ಬಕ್ ಕಂಪನಿ, ಭಾರೀ ಆಕ್ರೋಶ

ಬೆಂಗಳೂರು ಮೂಲದ ಡಿಜಿಟಲ್ ಟ್ರಕ್ಕಿಂಗ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್ ತನ್ನ ಕಚೇರಿಯನ್ನು ನಗರದಿಂದ ಸ್ಥಳಾಂತರಿಸಲು ನಿರ್ಧರಿಸಿದೆ. ಕಂಪನಿಯ ಸಿಇಒ ಮತ್ತು ಸಹ-ಸಂಸ್ಥಾಪಕ ರಾಜೇಶ್ ಕುಮಾರ್ ಯಬಾಜಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ತಿಳಿಸಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ ಬೆಂಗಳೂರಿನ ಮೂಲ ಸಮಸ್ಯೆಗಳು!

author-image
Ganesh Kerekuli
BlackBuck
Advertisment

ಬೆಂಗಳೂರು ಮೂಲದ ಡಿಜಿಟಲ್ ಟ್ರಕ್ಕಿಂಗ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್ (Blackbuck) ತನ್ನ ಕಚೇರಿಯನ್ನು ನಗರದಿಂದ ಸ್ಥಳಾಂತರಿಸಲು ನಿರ್ಧರಿಸಿದೆ. ಕಂಪನಿಯ ಸಿಇಒ ಮತ್ತು ಸಹ-ಸಂಸ್ಥಾಪಕ ರಾಜೇಶ್ ಕುಮಾರ್ ಯಬಾಜಿ (Rajesh Yabaji) ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ತಿಳಿಸಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ ಬೆಂಗಳೂರಿನ ಮೂಲ ಸಮಸ್ಯೆಗಳು!

Advertisment

ಅನ್ನ ಕೊಟ್ಟ ಬೆಂಗಳೂರು ಬೇಡವಾಯ್ತಾ? 

ಬೆಂಗಳೂರನ್ನ ತೊರೆಯಲು ಅವರು ನಿರ್ಧರಿಸಿರೋದು ಇಲ್ಲಿನ ತೆರಿಗೆ ನೀತಿ ಅಥವಾ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿಲ್ಲ. ಅವರು ನೀಡಿರುವ ಕಾರಣಗಳು ಬೇರೆಯದ್ದೇ ಇದೆ. ನಗರದ ರಸ್ತೆ ಗುಂಡಿಗಳು, ವಿಪರೀತ ಧೂಳು ಮತ್ತು ಟ್ರಾಫಿಕ್. ಇದರಿಂದಾಗಿ ಸಹದ್ಯೋಗಿಗಳು ಕಚೇರಿಗೆ ಬರಲು ಮತ್ತು ಬರಲು ಸರಾಸರಿ 1.5 ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ಇನ್ನೂ ಐದು ವರ್ಷ ಕಳೆದರೂ ಸರಿ ಹೋಗುವಂತೆ ಕಾಣ್ತಿಲ್ಲ. ಕಳೆದ 9 ವರ್ಷಗಳಿಂದ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಮನೆ ಹಾಗೂ ಕಚೇರಿಯನ್ನು ಮಾಡಿಕೊಂಡಿರುವ ನಮಗೆ ತುಂಬಾನೇ ಕಷ್ಟ ಆಗ್ತಿದೆ ಆರೋಪಿಸಿದ್ದಾರೆ. ಇವರ ಆರೋಪ ಬೆಂಗಳೂರಿಗರ ಕೆಂಗಣ್ಣಿಗೂ ಗುರಿಯಾಗಿದೆ. ಇಷ್ಟು ವರ್ಷಗಳ ಕಾಲ ಹೊಟ್ಟೆ ತುಂಬಿಕೊಳ್ಳಲು ಬೆಂಗಳೂರು ಬೇಕಾಗಿತ್ತು. ಈಗ ಮೂಲ ಸೌಕರ್ಯ ನೆಪವೊಡ್ಡಿ ಬೆಂಗಳೂರು ಬಿಡ್ತೀನಿ ಅಂದ್ರೆ ಹೇಗೆ ಎಂಬ ಪ್ರಶ್ನೆ ಮಾಡ್ತಿದ್ದಾರೆ.    

ಕಂಪನಿ ಮೌಲ್ಯ ಎಷ್ಟು..? 

ಬ್ಲ್ಯಾಕ್‌ಬಕ್ ಕಚೇರಿ ಇರುವ ORR ಬೆಂಗಳೂರಿನ ಐಟಿ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಇದು ಆಗಾಗ  ಸಂಚಾರ ದಟ್ಟಣೆ ಎದುರಿಸುತ್ತದೆ. ಬ್ಯುಸಿನೆಸ್ ಟುಡೇ ಪ್ರಕಾರ, ಸೆಪ್ಟೆಂಬರ್ 2025ರಲ್ಲಿ ಬ್ಲ್ಯಾಕ್‌ಬಕ್‌ನ ಒಟ್ಟು ಮೌಲ್ಯ ₹10,900 ಕೋಟಿ ರೂಪಾಯಿಗಿಂತ ಹೆಚ್ಚು. 2015ರಿಂದ ಬೆಂಗಳೂರಿನಲ್ಲಿ ಈ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಅಧಿಕೃತ ಹೆಸರು ಜಿಂಕಾ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್. 

Advertisment

ಬ್ಲ್ಯಾಕ್ ಬಕ್ ಕೆಲಸ ಏನು? 

ಬ್ಲ್ಯಾಕ್‌ಬಕ್, ಟ್ರಕ್ ಆಪರೇಟರ್‌ಗಳಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ ಒದಗಿಸಿಕೊಡುತ್ತದೆ. ಟ್ರಕ್ ಚಾಲಕರಿಗೆ ಅಪ್ಲಿಕೇಶನ್ ಮೂಲಕ ಆನ್‌ಲೈನ್ ಸೇವೆಗಳನ್ನು ನೀಡುತ್ತದೆ. ಪೇಮೆಂಟ್ಸ್, ವಾಹನ ಟ್ರ್ಯಾಕಿಂಗ್, ಸರಕು ಮಾರುಕಟ್ಟೆ ಸೇರಿದಂತೆ ಅನೇಕ ಕೆಲಸಗಳನ್ನು ಸರಳೀಕರಿಸಿ ನೀಡುತ್ತಿದೆ. ಟ್ರಕ್ ಆಪರೇಟರ್​​ಗಳು ಬ್ಲ್ಯಾಕ್‌ಬಕ್ ಮೂಲಕ ಟೋಲ್ ಮತ್ತು ಇಂಧನ ವಹಿವಾಟುಗಳನ್ನು ಮಾಡುತ್ತಾರೆ. ವೆಚ್ಚಗಳನ್ನು ನಿಯಂತ್ರಿಸಬಹುದು, ಕಳ್ಳತನದ ಅಪಾಯವನ್ನು ಕಡಿಮೆ ಮಾಡಬಹುದು. ಟ್ರಕ್‌ಗಳನ್ನು ಟ್ರ್ಯಾಕ್ ಮಾಡಬಹುದು ಹಾಗೂ ಇಂಧನ ಬಳಕೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ನಗರದಲ್ಲಿರುವ ಮೂಲ ಸೌಕರ್ಯ ಸಮಸ್ಯೆಗಳು ಕಂಪನಿ ಮೇಲೆ ತೀವ್ರ ಪರಿಣಾಮ ಬೀರಿದೆ ಅನ್ನೋದು ಸಂಸ್ಥಾಪಕರ ಆರೋಪ. ಕಂಪನಿಯ ಈ ನಿರ್ಧಾರ ಬೆಂಗಳೂರಿಗೂ ನಷ್ಟ ಆಗಲಿದೆ. ಹಾಗಂತ ಬೆಂಗಳೂರು ತೊರೆದ, ತೊರೆಯುತ್ತಿರುವ ಏಕೈಕ ಕಂಪನಿ ಇದೊಂದೇ ಅಲ್ಲ. ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. 

ಬ್ಲ್ಯಾಕ್‌ಬಕ್​​ಗೆ ಉದ್ಯಮಿಗಳ ಆಫರ್​..!

ದುಡುಕಿನ ನಿರ್ಧಾರದ ಬೆನ್ನಲ್ಲೇ ಕೆಲವು ರಾಜಕೀಯ ನಾಯಕರು ಬ್ಲ್ಯಾಕ್‌ಬಕ್​ಗೆ ಆಫರ್ ಮಾಡಿವೆ. ಪ್ರಮುಖವಾಗಿ ಆಂಧ್ರ ಪ್ರದೇಶದ HRD ಮಿನಿಸ್ಟರ್ ನಾರಾ ಲೋಕೇಶ್ ಅವರು ಕರೆ ನೀಡಿದ್ದಾರೆ. ನೀವು ಆಂಧ್ರಗೆ ಬನ್ನಿ ಎಲ್ಲಾ ನಿಮಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನ ಮಾಡಿ ಕೊಡ್ತೀವಿ ಎಂದಿದ್ದಾರೆ.

Advertisment


 ಈ ಹಿಂದೆಯೂ ಇದೇ ರೀತಿ ಆಂಧ್ರದ ಸಚಿವ ನಾರಾ ಲೋಕೇಶ್, ಬೆಂಗಳೂರಿನಲ್ಲಿರುವ ಕಂಪನಿಗಳನ್ನು ಆಂಧ್ರಕ್ಕೆ ಆಹ್ವಾನಿಸಿದ್ದರು. ಬೆಂಗಳೂರಿನಲ್ಲಿ ಮೂಲಸೌಕರ್ಯದ ಕೊರತೆಯಿಂದ ಬೇಸತ್ತ ಕಂಪನಿಗಳನ್ನು ಪದೇ ಪದೇ ಆಂಧ್ರಕ್ಕೆ ನಾರಾ ಲೋಕೇಶ್ ಆಹ್ವಾನಿಸುತ್ತಿದ್ದಾರೆ. ಎಸ್‌.ಎಂ.ಕೃಷ್ಣ ಸಿಎಂ ಆಗಿದ್ದಾಗಲೂ ಬೆಂಗಳೂರಿನ ಐ.ಟಿ, ಬಿಟಿ ಕಂಪನಿಗಳನ್ನು ಆಂಧ್ರಕ್ಕೆ ಸೆಳೆಯಲು ನಾರಾ ಲೋಕೇಶ್ ತಂದೆ ಚಂದ್ರಬಾಬು ನಾಯ್ಡು ಯತ್ನಿಸುತ್ತಿದ್ದರು.  ಈಗ ಆ ಕೆಲಸವನ್ನು ಪುತ್ರ ನಾರಾ ಲೋಕೇಶ್ ಮಾಡುತ್ತಿದ್ದಾರೆ. 
ಬೆಂಗಳೂರಿನ ಔಟರ್ ರಿಂಗ್ ರೋಡ್ ಅನ್ನು ಖುದ್ದಾಗಿ ವೀಕ್ಷಿಸುವ ಕೆಲಸವನ್ನು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮಾಡಿದ್ದರು. ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೇ, ಅದು ಭರವಸೆಯಾಗಿಯೇ ಉಳಿದಿದೆ. ಪರಿಣಾಮವಾಗಿ ಈಗ ಬೆಂಗಳೂರಿನಿಂದ ಕಂಪನಿಗಳು ಕಾಲ್ಕಿತ್ತು, ಪಕ್ಕದ ಆಂಧ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BlackBuck Rajesh Yabaji
Advertisment
Advertisment
Advertisment