ಬಿಎಂಆರ್‌ಸಿಎಲ್ ನಿಂದ 1 ದಿನ, 3 ದಿನ, 5 ದಿನದ ಪಾಸ್ ಬಿಡುಗಡೆ : ನಾಡಿದ್ದಿನಿಂದ ಮೆಟ್ರೋ ಪಾಸ್ ಲಭ್ಯ

ಬಿಎಂಆರ್‌ಸಿಎಲ್ ನಿಂದ ಸ್ಮಾರ್ಟ್ ಕಾರ್ಡ್ ಪಡೆದು ಇಷ್ಟು ದಿನ ಪ್ರಯಾಣಿಸಲು ಅವಕಾಶ ಇತ್ತು. ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬೇಕು. ಆದರೇ, ಈಗ ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣಿಕರಿಗೆ ದಿನದ ಪಾಸ್ ಬಿಡುಗಡೆ ಮಾಡುತ್ತಿದೆ.

author-image
Chandramohan
BMRCL METRO GATES (1)

ಮೆಟ್ರೋದಿಂದ ದಿನದ ಪಾಸ್ ಬಿಡುಗಡೆ

Advertisment
  • ಮೆಟ್ರೋದಿಂದ ದಿನದ ಪಾಸ್ ಬಿಡುಗಡೆ
  • ಮೆಟ್ರೋದಿಂದ 1 ದಿನ, 3 ದಿನ, 5 ದಿನದ ಪಾಸ್ ಬಿಡುಗಡೆ

ನಮ್ಮ ಮೆಟ್ರೋದಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.   ಇನ್ಮುಂದೆ ಮೆಟ್ರೋದಲ್ಲಿ  ಕ್ಯೂ ಆರ್ ಕೋಡ್  ಆಧರಿತ ಪಾಸ್ ಗಳು ಸಿಗಲಿವೆ.  ದಿನದ ಪಾಸ್,‌ ಮೂರು ದಿನದ ಪಾಸ್ ಮತ್ತು ಐದು ದಿನದ ಪಾಸ್ ಲಭ್ಯವಾಗಲಿವೆ.   1, 3 ಮತ್ತು 5 ದಿನಗಳ ಅನಿಯಮಿತ ಪ್ರಯಾಣ ಪಾಸ್  ಅನ್ನು ಬಿಎಂಆರ್‌ಸಿಎಲ್  ಪರಿಚಯಿಸಿದೆ. 
ಜನವರಿ 15 ರಿಂದ‌ ಮೆಟ್ರೋದಲ್ಲಿ ಕ್ಯೂ ಆರ್ ಕೋಡ್  ಪಾಸ್ ಗಳು ಜಾರಿಯಾಗಲಿವೆ. ಡಿಜಿಟಲ್ ಟಿಕೆಟ್ ವ್ಯವಸ್ಥೆ ಉತ್ತೇಜಿಸಲು ಬಿಎಂಆರ್‌ಸಿಎಲ್ ಈ  ಕ್ರಮ ಕೈಗೊಂಡಿದೆ.  ಸದ್ಯ ಬಿಎಂಆರ್‌ಸಿಎಲ್  ಅಧಿಕೃತ ಆ್ಯಪ್ ಮೂಲಕ ಕ್ಯೂ ಆರ್ ಟಿಕೆಟ್ ಖರೀಸಬಹುದು .  ಶೀಘ್ರದಲ್ಲೇ ಇತರ ಮೊಬೈಲ್ ಆ್ಯಪ್ ಗಳಲ್ಲಿ ಕ್ಯೂ ಆರ್ ಟಿಕೆಟ್ ಗಳನ್ನು ಖರೀದಿಸಬಹುದು.  ಇಷ್ಟು ದಿನ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್ ಗಳ ಮೂಲಕ ಮಾತ್ರ ಅನಿಯಮಿತ ಪಾಸ್ ಇತ್ತು.   ಅದಕ್ಕಾಗಿ ಭದ್ರತಾ ಠೇವಣಿ 50₹ ಪಾವತಿ ಮಾಡಬೇಕಿತ್ತು. ಈಗ ಮೊಬೈಲ್‌ನಲ್ಲೇ QR ಕೋಡ್ ಬಳಸಿ ಪಾಸ್ ಪಡೆಯಬಹುದು.  ಯಾವುದೇ ಭದ್ರತಾ ಠೇವಣಿ ಇರುವುದಿಲ್ಲ. 
 
ಪಾಸ್ ದರಗಳು (ಮೊಬೈಲ್ QR ಪಾಸ್)

▪️ 1 ದಿನದ ಪಾಸ್ – ₹250
▪️ 3 ದಿನಗಳ ಪಾಸ್ – ₹550
▪️ 5 ದಿನಗಳ ಪಾಸ್ – ₹850

ಪಾಸ್ ದರಗಳು (ಸ್ಮಾರ್ಟ್ ಕಾರ್ಡ್ ದರ 50₹ ಠೇವಣಿ ಸೇರಿ)

▪️ 1 ದಿನದ ಪಾಸ್ – ₹300
▪️ 3 ದಿನಗಳ ಪಾಸ್ – ₹600
▪️ 5 ದಿನಗಳ ಪಾಸ್ – ₹900

AFC ಗೇಟ್‌ಗಳಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣ ಮಾಡಬಹುದು.
ಸಮಯ ಉಳಿತಾಯ, ಸುಲಭ ಪ್ರಯಾಣ ಮತ್ತು ಸಂಪೂರ್ಣ ಡಿಜಿಟಲ್ ಅನುಭವ ಸಿಗಲಿದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Namma metro Metro Yellow Line METRO DAILY PASS
Advertisment