/newsfirstlive-kannada/media/post_attachments/wp-content/uploads/2024/08/METRO_TRAIN.jpg)
ಬೆಂಗಳೂರು ಮೆಟ್ರೋ ಹೊಸೂರಿಗೆ ವಿಸ್ತರಣೆ ಸಾಧ್ಯವಿಲ್ಲ
ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ ಮಾರ್ಗದ ಮೂಲಕ ಬೆಂಗಳೂರು ಮತ್ತು ಹೊಸೂರುಗಳನ್ನು ಸಂಪರ್ಕಿಸುವ ಯೋಜನೆಗೆ ಎಳ್ಳು ನೀರು ಬಿಡಲಾಗಿದೆ. ಏಕೆಂದರೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇದನ್ನು 'ತಾಂತ್ರಿಕವಾಗಿ ಕಾರ್ಯಸಾಧ್ಯವಲ್ಲ' ಎಂದು ಘೋಷಿಸಿದೆ. ಎರಡು ಮೆಟ್ರೋ ಜಾಲಗಳು ಬಳಸುವ ವಿದ್ಯುತ್ ವ್ಯವಸ್ಥೆಗಳಲ್ಲಿನ ವ್ಯತ್ಯಾಸಗಳಿಂದಾಗಿ ಈ ಸಮಸ್ಯೆ ಉದ್ಭವಿಸಿದೆ. ಬೆಂಗಳೂರು ಮತ್ತು ತಮಿಳುನಾಡಿನ ಮೆಟ್ರೋವನ್ನು ಒಂದುಗೂಡಿಸಲು ಕಷ್ಟಕರವಾಗಿದೆ.
ತಮಿಳುನಾಡು ಸರ್ಕಾರವು ಹೊಸೂರು-ಬೊಮ್ಮಸಂದ್ರ ಮೆಟ್ರೋ ಕಾರಿಡಾರ್ ಅನ್ನು ಬೆಂಬಲಿಸಿತ್ತು. ಹೊಸೂರು- ಬೆಂಗಳೂರಿನ ಬೊಮ್ಮಸಂದ್ರ ನಡುವೆ ಮೆಟ್ರೋ ರೈಲು ಸಂಪರ್ಕ ಜಾರಿಗೊಳಿಸಬೇಕೆಂದು ತಮಿಳುನಾಡು ಒತ್ತಾಯಿಸಿತ್ತು. ಈ ಅಂತರ್ ರಾಜ್ಯ ಮೆಟ್ರೋ ಮಾರ್ಗದಿಂದಾಗಿ ಹೊಸೂರಿನಲ್ಲಿ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಮಾರ್ಗವೆಂದು ಪರಿಗಣಿಸಿತ್ತು.
ಈ ಯೋಜನೆಯು ಕಾಗದದ ಮೇಲೆ ಆಕರ್ಷಕವಾಗಿದ್ದರೂ, ವಿಭಿನ್ನ ವ್ಯವಸ್ಥೆಗಳು, ಮೆಟ್ರೋ ರೈಲುಗಳಿಗೆ ಶಕ್ತಿ ನೀಡುವ ವಿದ್ಯುತ್ ಸೆಟಪ್‌ಗಳಿಂದಾಗಿ ಇದನ್ನು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ನಡೆಸಿದ ಕಾರ್ಯಸಾಧ್ಯತಾ ಅಧ್ಯಯನವು ಹೊಸೂರು-ಬೊಮ್ಮಸಂದ್ರ ಮಾರ್ಗಕ್ಕಾಗಿ 25 kV AC ಓವರ್‌ಹೆಡ್ ಟ್ರಾಕ್ಷ್ಯನ್ ವ್ಯವಸ್ಥೆಯನ್ನು ಪ್ರಸ್ತಾಪಿಸಿತ್ತು.
/filters:format(webp)/newsfirstlive-kannada/media/media_files/2025/08/03/namma-metro-yellow-line-2025-08-03-10-30-57.jpg)
ಇದಕ್ಕೆ ವಿರುದ್ಧವಾಗಿ , ನಮ್ಮ ಮೆಟ್ರೋ 750 V DC ಮೂರನೇ ರೈಲು ವ್ಯವಸ್ಥೆಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ. ಈ ಎರಡು ವಿದ್ಯುತ್ ವ್ಯವಸ್ಥೆಗಳು ಹೊಂದಿಕೆಯಾಗುವುದಿಲ್ಲ, ಇದರಿಂದಾಗಿ ಎರಡು ಜಾಲಗಳ ನಡುವೆ ರೈಲುಗಳನ್ನು ಸರಾಗವಾಗಿ ಓಡಿಸುವುದು ತಾಂತ್ರಿಕವಾಗಿ ಅಸಾಧ್ಯ.
ಬೊಮ್ಮಸಂದ್ರದಿಂದ ಕರ್ನಾಟಕದ ಗಡಿಯ ಅತ್ತಿಬೆಲೆವರೆಗೆ 11 ಕಿ.ಮೀ. ಮೆಟ್ರೋ ವಿಸ್ತರಣೆಯ ಬಗ್ಗೆ ಬಿಎಂಆರ್‌ಸಿಎಲ್ ಅಧ್ಯಯನ ಮಾಡಿದೆ.
ಬೊಮ್ಮಸಂದ್ರದಿಂದ ಹೊಸೂರಿಗೆ ನಿರಂತರ ಮೆಟ್ರೋ ಮಾರ್ಗವನ್ನು ನಿರ್ಮಿಸುವುದು ತಾಂತ್ರಿಕವಾಗಿ ಕಾರ್ಯಸಾಧ್ಯವಲ್ಲ. ಹೊಸೂರು ಮಾರ್ಗವನ್ನು ನಮ್ಮ ವ್ಯವಸ್ಥೆಯಲ್ಲಿ ಸಂಯೋಜಿಸಲು ಸಾಧ್ಯವಿಲ್ಲ. ನಾವು ನಮ್ಮ ಅಭಿಪ್ರಾಯವನ್ನು ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿದ್ದೇವೆ, ರಾಜ್ಯ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us