Advertisment

₹5 ರೂಪಾಯಿಗೆ ಪ್ರಯಾಣಿಕನ ಕಪಾಳಕ್ಕೆ ಹೊಡೆದ BMTC ಬಸ್​ ಕಂಡಕ್ಟರ್.. ಅಸಲಿಗೆ ಆಗಿದ್ದೇನು?

ಟಿಕೆಟ್ ಪಡೆದಿಲ್ಲ ಅಂತ ಪ್ರಯಾಣಿಕನ ಮೇಲೆ ಬಿಎಂಟಿಸಿ ಬಸ್​ ಕಂಡಕ್ಟರ್ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. KA-57 F-4029 ಸಂಖ್ಯೆಯ ಬಿಎಂಟಿಸಿ ಬಸ್​ನಲ್ಲಿ ಈ ಹಲ್ಲೆ ನಡೆದಿದೆ.

author-image
NewsFirst Digital
bmtc(6)
Advertisment

ಬೆಂಗಳೂರು: ಟಿಕೆಟ್ ಪಡೆದಿಲ್ಲ ಅಂತ ಪ್ರಯಾಣಿಕನ ಮೇಲೆ ಬಿಎಂಟಿಸಿ ಬಸ್​ ಕಂಡಕ್ಟರ್ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. KA-57 F-4029 ಸಂಖ್ಯೆಯ ಬಿಎಂಟಿಸಿ ಬಸ್​ನಲ್ಲಿ ಈ ಹಲ್ಲೆ ನಡೆದಿದೆ.

Advertisment

ಅಸಲಿಗೆ ಆಗಿದ್ದೇನು..?

ಪ್ರಯಾಣಿಕರು ಟಿಕೆಟ್​ ಕೇಳಿ ಪಡೆಬೇಕು. ಇಲ್ಲವಾದರೇ ಚೆಕ್ಕಿಂಗ್​ ವೇಳೆ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುತ್ತಿದೆ. ಹೀಗೆ ಅನ್ಯಭಾಷಿಕ ಪ್ರಯಾಣಿಕ‌ನೊಬ್ಬ ದೇವನಹಳ್ಳಿಯಿಂದ ಮೆಜೆಸ್ಟಿಕ್ ಪ್ರಯಾಣ ಮಾಡುತ್ತಿದ್ದ. ಆದ್ರೆ, ಆ ಪ್ರಯಾಣಿಕ ಟಿಕೆಟ್ ಕೇಳಿ ಪಡೆಯೋದು ಮರೆತಿದ್ದನಂತೆ. ಇದೇ ವೇಳೆ ಚೆಕ್ಕಿಂಗ್ ಅಧಿಕಾರಿಗಳು ಬಂದಿದ್ದಾರೆ. ಆಗ ಪ್ರಯಾಣಿಕ ಟಿಕೆಟ್ ಪಡೆಯದ ವಿಚಾರ ಗೊತ್ತಾಗಿದೆ. ಹೀಗಾಗಿ ಕಂಡಕ್ಟರ್ ಹಾಗೂ ಪ್ರಯಾಣಿಕ ಇಬ್ಬರಿಗೂ ದಂಡ ವಿಧಿಸಲಾಗಿದೆ.

bmtc(7)

ಇದರಿಂದ ಕೋಪಿತಗೊಂಡ ಕಂಡಕ್ಟರ್ ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಕಪಾಳಕ್ಕೆ ಹೊಡೆದಿದ್ದಾರಂತೆ. ಇನ್ನು, ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಂಡಕ್ಟರ್ ವಿರುದ್ಧ ಸಹ ಪ್ರಯಾಣಿಕರ ಆಕ್ರೋಶ ಹೊರ ಹಾಕಿದ್ದಾರೆ. ಐದು ರೂಪಾಯಿಗೆ ಓರ್ವ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದು ಸರಿಯಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BMTC, BMTC BUS ACCIDENT, ಬೆಂಗಳೂರು
Advertisment
Advertisment
Advertisment