/newsfirstlive-kannada/media/post_attachments/wp-content/uploads/2023/07/BMTC-Bus_12.jpg)
BMTC ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವು
ಬೆಂಗಳೂರಿನ ವಿಜಯನಗರ ದಲ್ಲಿ ಬಿಎಂಟಿಸಿ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನಾಗರಭಾವಿಯಿಂದ ವಿಜಯನಗರ ಸರ್ಕಲ್ ನಲ್ಲಿ ಬಂದು ಇಳಿದ್ದಿದ್ದ ಮಹಿಳೆಯ ಮೇಲೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹರಿದಿದೆ. 70 ವರ್ಷದ ಸುಶೀಲ ಮೇಲೆ ಎಲೆಕ್ಟ್ರಿಕ್ ಬಸ್ ಹರಿದಿದೆ. ಇದರಿಂದ ಸುಶೀಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಇಳಿದು ಬಸ್ ಮುಂದೆ ರಸ್ತೆ ಕ್ರಾಸ್ ಮಾಡುವ ವೇಳೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ನಿರ್ಲಕ್ಷ್ಯ ದಿಂದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಸ್ ಚಕ್ರಕ್ಕೆ ಮಹಿಳೆ ಸಿಲುಕುತ್ತಿದ್ದಂತೆ, ಬಸ್ ಅನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us