/newsfirstlive-kannada/media/media_files/2025/12/09/two-people-suicide-and-one-heart-attack-case-2025-12-09-14-20-16.jpg)
ಸಾಲಭಾದೆಯಿಂದ ಆತ್ಮಹತ್ಯೆಗೆ ಶರಣಾದ ಕುಟುಂಬ
ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸುದ್ದುಗುಂಟೆಪಾಳ್ಯದಲ್ಲಿ ನಡೆದಿದೆ. ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಅಜ್ಜಿ ಮಾದಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಾಯಿ ಸುಧಾ, ಮಗ ಮೋನಿಶ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರ ಆತ್ಮಹತ್ಯೆ ಕಂಡು ಅಜ್ಜಿ ಮಾದಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಕೇಸ್ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ತನಿಖೆಯ ವೇಳೆ ಕಡಿಮೆ ಬಡ್ಡಿಗೆ ಸಾಲ ಪಡೆದು ಹೆಚ್ಚಿನ ಬಡ್ಡಿಗೆ ಸಾಲ ನೀಡುತ್ತಿದ್ದರು ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ. ಆದರೇ, ಹೆಚ್ಚಿನ ಬಡ್ಡಿಗೆ ಹಣವನ್ನು ಸಾಲವಾಗಿ ಪಡೆದವರು ವಾಪಸ್ ಕೊಡದೇ ಇದ್ದಿದ್ದರಿಂದ ಸುಧಾ ಆರ್ಥಿಕ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ಸಾವಿಗೂ ಮುನ್ನಾ ಸುಧಾ ಡೆತ್ ನೋಟ್ ಬರೆದಿಟ್ಟಿದ್ದಾರೆ. ಸುಧಾ ಬೆಂಗಳೂರಿನಲ್ಲಿ ಬಿರಿಯಾನಿ ಸೆಂಟರ್, ಚಿಪ್ಸ್ ಶಾಪ್ ಹಾಗೂ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಮೂರು ತಿಂಗಳ ಹಿಂದೆ ಬಿರಿಯಾನಿ ಹಾಗೂ ಚಿಪ್ಸ್ ಸೆಂಟರ್ ಬೇರೆಯವರಿಗೆ ಕೊಟ್ಟಿದ್ದರು. ತಿಂಗಳಿಗೆ ಇಂತಿಷ್ಟು ಹಣ ನೀಡುವಂತೆ ಸುಧಾ ಒಪ್ಪಂದ ಮಾಡಿಕೊಂಡಿದ್ದರು. ಆದರೇ, ಕಳೆದ ಮೂರು ತಿಂಗಳಿನಿಂದ ಅಂಗಡಿ ಪಡೆದಾತ ಹಣ ನೀಡುತ್ತಿರಲಿಲ್ಲ. ಈ ಮಧ್ಯೆ ಧರ್ಮಪುರಿಯಿಂದ ಸಾಲ ತಂದಿದ್ದ ಸುಧಾಗೆ, ಸಾಲ ಕೊಟ್ಟವರು ಸಾಲ ವಾಪಸ್ಸಾತಿಗಾಗಿ ಕೇಳುತ್ತಿದ್ದರು. ಇದರಿಂದ ಸಾಕಷ್ಟು ಒತ್ತಡ ಕೊಳಗಾಗಿದ್ದ ಸುಧಾ ನಿನ್ನೆ ಧರ್ಮಪುರಿಯ ದೇಗುಲಕ್ಕೆ ತೆರಳಿ ವಾಪಸ್ ಆಗಿದ್ದರು.
ನಿನ್ನೆ ಬೆಳಿಗ್ಗೆ 9 ಕ್ಕೆ ಮಗನಿಗೆ ವಿಷವನ್ನಿಟ್ಟು ತಾಯಿ ಸುಧಾ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಮಾದಮ್ಮನ ಮುಂದೆಯೇ ನರಳಿ ನರಳಿ ಸುಧಾ ಹಾಗೂ ಮೋನಿಶ್ ಜೀವ ಬಿಟ್ಟಿದ್ದಾರೆ. ಮಗಳು, ಮೊಮ್ಮಗನ ನರಳಾಟವನ್ನ ಕಂಡು ಹಿರಿಮಗಳು ಮಹೇಶ್ವರಿಗೆ ಕರೆ ಮಾಡಿದ್ದ ಮಾದಮ್ಮ, ಮೋನಿಶ್ ಗೆ ವಿಷನೀಡಿ ಸುಧಾ ಕೂಡ ವಿಷ ಸೇವಿಸಿದ್ದಾಳೆ. ಬೇಗ ಮನೆಗೆ ಬರುವಂತೆ ಹಿರಿಯ ಮಗಳು ಮಹೇಶ್ವರಿಗೆ ಹೇಳಿದ್ದಾರೆ. ಹಿರಿಯ ಮಗಳು ಬೊಮ್ಮಸಂದ್ರದಿಂದ ಬರುವ ವೇಳೆಗೆ ವೃದ್ದೆ ಮಾದಮ್ಮಗೆ ಹೃದಯಾಘಾತ ಆಗಿದೆ.
ಮಗಳು ಹಾಗೂ ಮೊಮ್ಮಗನ ಸಾವನ್ನು ನೋಡಿದ್ದ ಮಾದಮ್ಮ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರ ಮೃತದೇಹಗಳನ್ನ ಪೋಸ್ಟ್ ಮಾರ್ಟಂ ಗೆ ಸೆಂಟ್ ಜಾನ್ಸ್ ಗೆ ರವಾನೆ ಮಾಡಲಾಗಿತ್ತು.
ವೈದ್ಯರ ಪ್ರಾಥಮಿಕ ತಪಾಸಣೆ ವೇಳೆ ವೃದ್ದೆ ಮಾದಮ್ಮ ಹೃದಯಾಘಾತದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಸುಧಾ ಹಾಗೂ ಮೋನಿಶ್ ವಿಷ ಸೇವಿಸಿ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಸುದ್ದುಗುಂಟೆಪಾಳ್ಯ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರ ಆತ್ಮಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಪ್ರತಿಕ್ರಿಯಿಸಿದ್ದಾರೆ. ತಾಯಿ ಮುದ್ದಮ್ಮ ಹಾಗೂ ಮಗಳು ಸುಧಾ ಹಾಲು ಮಾರಾಟ ಮಾಡಿಕೊಂಡು ಇದ್ದರು. ಜೊತೆಗೆ ಮನೆ ಕೆಲಸಕ್ಕೆ ಹೋಗುತ್ತಿದ್ದರು. ಮೊಮ್ಮಗ ಮೋನಿಶ್ ಕ್ರೈಸ್ತ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತಿದ್ದ . ಮೂಲತಃ ಇವರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯವರು. ಧರ್ಮಪುರಿ ಬಲಿ ದೇವಸ್ಥಾನಕ್ಕೆ ಹೋಗಿದ್ರು . ರಾತ್ರಿ ದರ್ಶನ ಮುಗಿಸಿ ಮನೆಗೆ ಬಂದಿದ್ದರು. ದೇವಸ್ಥಾನದಿಂದ ಬಂದು ಅವರ ತಂಗಿ ಬಳಿಯೂ ಮಾತನಾಡಿದ್ದಾರೆ . ನಂತರ ಮೊಮ್ಮಗನನ್ನ ಕೊಂದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಒಂದೂವರೆ ವರ್ಷದಿಂದ ಈ ಮನೆಯಲ್ಲಿ ಬಾಡಿಗೆಗೆ ಇದ್ದರು ಅಂತ ತಿಳಿದುಬಂದಿದೆ . ಸಾಲದಿಂದ ಹೀಗೆ ಮಾಡಿಕೊಂಡಿದ್ದಾರಾ ಅಥವಾ ಬೇರೆ ಕಾರಣ ಇದೆಯೇ ಎಂದು ತನಿಖೆ ಮಾಡುತ್ತಿದ್ದೇವೆ. ತನಿಖೆ ಮುಂದುವರಿದಿದೆ ಎಂದು ಡಿಸಿಪಿ ಸಾರಾ ಫಾತೀಮಾ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/09/two-people-suicide-and-one-death-2025-12-09-14-25-08.jpg)
ಬಿರಿಯಾನಿಯಲ್ಲಿ ವಿಷ ಹಾಕಿಕೊಂಡು ಸೇವಿಸಿರುವ ಶಂಕೆ ಇದೆ. ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿನ ನಿಖರ ಕಾರಣ ತಿಳಿದು ಬರಲಿದೆ.
ಇನ್ನೂ ಮೂವರು ಮೃತಪಟ್ಟ ಮನೆಯಲ್ಲಿ 5 ಪುಟಗಳ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿಗೆ ನಿಖರ ಮಾಹಿತಿ ತಿಳಿದು ಬರದೇ ಇದ್ದರೇ, ಪೊಲೀಸರು ಎಫ್‌ಎಸ್ಎಲ್ ಪರೀಕ್ಷೆಯ ವರದಿಗೆ ಕಾಯಬೇಕಾಗುತ್ತೆ.
ಮೋನಿಶ್ ನ ನೋಟ್ ಬುಕ್ ಒಂದು ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಸ್ಪಿರೀಟ್ ಬಾಟಲ್ ಕೂಡ ಸಿಕ್ಕಿದೆ. ಮನೆಯಲ್ಲಿ ಯಾವುದಾದರೂ ಟ್ಯಾಬ್ಲೆಟ್ ಇದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೆಡ್ ರೂಮುನಲ್ಲಿ 2 ಮೃತದೇಹ ಮತ್ತು ಹಾಲ್ ನಲ್ಲಿ ಒಂದು ಮೃತದೇಹ ಪೊಲೀಸರಿಗೆ ಸಿಕ್ಕಿದೆ. ಬೇರೆ ಬೇರೆ ಕೋನಗಳಿಂದ ಪೊಲೀಸರು ಈ ಮೂರು ಸಾವುಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕಡಿಮೆ ಬಡ್ಡಿಗೆ ಸಾಲ, ಹೆಚ್ಚಿನ ಬಡ್ಡಿಗೆ ಬೇರೆಯವರಿಗೆ ಮರು ಸಾಲ ನೀಡಿಕೆ ಕುತ್ತು!?
ಇನ್ನೂ ಸುಧಾ ಬೇರೆಯವರಿಂದ 2 ಪರ್ಸೆಂಟ್ ಬಡ್ಡಿಗೆ ಸಾಲ ತಂದು, ಆ ಹಣವನ್ನು ಮತ್ತೊಬ್ಬರಿಗೆ 4-5 ಪರ್ಸೆಂಟ್ ಬಡ್ಡಿಗೆ ಸಾಲ ಕೂಡ ನೀಡುತ್ತಿದ್ದರಂತೆ. ಆದರೇ, ಇವರಿಂದ 4-5 ಪರ್ಸೆಂಟ್ ಗೆ ಸಾಲ ಪಡೆದವರು ವಾಪಸ್ ಕೊಟ್ಟಿಲ್ಲ. ಸಾಲದ ಬಡ್ಡಿಯನ್ನು ಕೂಡ ಕೊಟ್ಟಿರಲಿಲ್ಲ. ಇದರಿಂದ ಸುಧಾ ಅವರಿಗೆ ಸಾಲ ಕೊಟ್ಟವರು ವಾಪಸ್ ಕೇಳಿದಾಗ, ಹಣ ವಾಪಸ್ ಕೊಡಲಾಗದೇ, ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ಕೂಡ ಇದೆ. ಹೀಗಾಗಿ ಸುಧಾ ಅವರ ಸಾಲದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us