ಅಂಬ್ಯುಲೆನ್ಸ್, ಸ್ಮಶಾನ, ಪೋಸ್ಟ್ ಮಾರ್ಟಂ ಎಲ್ಲದ್ದಕ್ಕೂ ಲಂಚ ನೀಡಿಕೆ ಅನಿವಾರ್ಯ !!: ಶಿವಕುಮಾರ್ ಪೋಸ್ಟ್ ನಿಂದ ವ್ಯವಸ್ಥೆಯ ಕ್ರೂರತೆ ಬಯಲು

ಬೆಂಗಳೂರಿನಲ್ಲಿ ಬಿಪಿಸಿಎಲ್ ನಿವೃತ್ತ ಸಿಎಫ್‌ಓ ಶಿವಕುಮಾರ್ ಅವರ 34 ವರ್ಷದ ಮಗಳು ಇತ್ತೀಚೆಗೆ ತೀರಿಕೊಂಡಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂಗೆ ಲಂಚ, ಶವ ಸಾಗಿಸುವ ಅಂಬ್ಯುಲೆನ್ಸ್ ಗೆ ಲಂಚ, ಸ್ಮಶಾನದಲ್ಲೂ ಲಂಚ, ಡೆತ್ ಸರ್ಟಿಫಿಕೇಟ್‌ಗೆ ಲಂಚ ನೀಡಬೇಕಾಯಿತು ಎಂದು ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ.

author-image
Chandramohan
BRIBE GBA

BPCL ನಿವೃತ್ತ ಸಿಎಫ್‌ಓ ಶಿವಕುಮಾರ್ ಅವರ ಪೋಸ್ಟ್‌

Advertisment

ಲಂಚ...‌ಲಂಚ..... ಪ್ರತಿ ಇಲಾಖೆಯಲ್ಲೂ ಲಂಚ, ಎಲ್ಲದ್ದಕ್ಕೂ ಲಂಚ ಕೊಡಬೇಕಾದ ಅನಿವಾರ್ಯ ಸ್ಥಿತಿ. ಸಾವಿನಲ್ಲೂ ಲಂಚಕ್ಕಾಗಿ ಕೈ ಚಾಚಿ ರಣಹದ್ದುಗಳಂತೆ ಕಿತ್ತು ತಿನ್ನುವ ವ್ಯವಸ್ಥೆ. ಬೆಂಗಳೂರಿನಲ್ಲಿ ಲಂಚಾವತಾರದ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ನಿವೃತ್ತ ಸಿಎಫ್‌ಓ ಶಿವಕುಮಾರ್ ತಮ್ಮ ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಬಿಚ್ಚಿಟ್ಟಿದ್ದಾರೆ.  
ಇತ್ತೀಚೆಗೆ ಶಿವಕುಮಾರ್ ಅವರ 34 ವರ್ಷದ ಏಕೈಕ ಮಗಳು ಬ್ರೇನ್ ಹ್ಯಾಮರೇಜ್ ನಿಂದ ಮೃತಪಟ್ಟಿದ್ದರು. ಈ ವೇಳೆ ಶವ ಸಾಗಿಸಲು ಅಂಬ್ಯುಲೆನ್ಸ್ ಗೆ ಲಂಚ ನೀಡಬೇಕಾಯಿತು. ಸಾವನ್ನಪ್ಪಿದ ಮಗಳ ಶವದ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಲು ಕೂಡ ಲಂಚ ಕೇಳಿದ್ದರು. ಎಫ್‌ಐಆರ್ ದಾಖಲಿಸಿಕೊಳ್ಳಲು ಬೆಳ್ಳಂದೂರು ಇನ್ಸ್ ಪೆಕ್ಟರ್ ಲಂಚ ಕೇಳಿದ್ದರು. ಬೆಳ್ಳಂದೂರು ಇನ್ಸ್ ಪೆಕ್ಟರ್ ಅಹಂಕಾರದಿಂದ ವರ್ತಿಸಿದ್ದರು. 
ಜೊತೆಗೆ ಪೊಲೀಸ್  ಇನ್ಸ್ ಪೆಕ್ಟರ್ ಗೂ ಲಂಚ ನೀಡಬೇಕಾಯಿತು. ಶವ ಸಂಸ್ಕಾರ ಮಾಡಲು ಚಿತಾಗಾರಕ್ಕೆ ಹೋದಾಗ ಅಲ್ಲಿಯೂ ಲಂಚ ನೀಡಬೇಕಾಯಿತು. ಮಗಳ ಡೆತ್ ಸರ್ಟಿಫಿಕೇಟ್ ಪಡೆಯಲು ಕೂಡ ಗ್ರೇಟರ್ ಬೆಂಗಳೂರು ಅಥಾರಿಟಿಯ ಅಧಿಕಾರಿಗಳಿಗೂ ಲಂಚ ನೀಡಬೇಕಾಯಿತು. 
ಮಗಳನ್ನು ಕಳೆದುಕೊಂಡ ತಂದೆಯ ಬಗ್ಗೆ ಯಾರಿಗೂ ಸಹಾನುಭೂತಿ ಇಲ್ಲ. ನನ್ನ ಬಳಿ ಹಣ ಇತ್ತು ಕೊಟ್ಟೆ.. ಬಡವರು ಏನು ಮಾಡುತ್ತಾರೆ? ಬಹಳ ಕೆಟ್ಟ ಪರಿಸ್ಥಿತಿ ಎಂದು ಲಿಂಕ್ಡ್ ಇನ್ ನಲ್ಲಿ ಶಿವಕುಮಾರ್  ಪೋಸ್ಟ್  ಮಾಡಿದ್ದಾರೆ.  ಶಿವಕುಮಾರ್ ಅವರ ಈ  ಪೋಸ್ಟ್ ಈಗ ವೈರಲ್ ಆಗುತ್ತಿದೆ. 

ಶಿವಕುಮಾರ್ ಅವರ ಲಿಂಕ್ಡ್ ಇನ್ ಪೋಸ್ಟ್  ನ ಸ್ಕ್ರೀನ್ ಶಾಟ್ ಗಳನ್ನು ಜೆಡಿಎಸ್ ಮತ್ತು  ಬಿಜೆಪಿ ನಾಯಕರುಗಳು ಟ್ವೀಟ್ ಮಾಡುತ್ತಿದ್ದಾರೆ.  ಇನ್ನೂ ಬೆಳ್ಳಂದೂರು ಇನ್ಸ್ ಪೆಕ್ಟರ್ ಲಂಚ ಕೇಳಿದ್ದು, ಅಹಂಕಾರದಿಂದ ವರ್ತಿಸಿದ್ದು ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಗಮನಕ್ಕೆ ಬಂದಿದೆಯಂತೆ.  ಬೆಳ್ಳಂದೂರು  ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಶಿವಕುಮಾರ್ ಅವರಿಗೆ ನೀಡಿದ್ದಾರಂತೆ.




ಇನ್ನೂ ಶಿವಕುಮಾರ್ ಅವರ ಲಿಂಕ್ಡ್ ಇನ್ ಪೋಸ್ಟ್ ಅನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಟ್ವೀಟ್ ಮಾಡಿ ಬೆಂಗಳೂರಿನ ಅಧಿಕಾರಿಗಳು, ಪೊಲೀಸ್ ವ್ಯವಸ್ಥೆ ಬಗ್ಗೆ ಟೀಕಿಸಿದ್ದಾರೆ. 

BELLANDURU POLICE STATION



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BRIBE IN BANGALORE
Advertisment