/newsfirstlive-kannada/media/media_files/2025/12/13/theft-at-ricky-kez-house-at-bangalore-2025-12-13-15-22-50.jpg)
ಬೆಂಗಳೂರಿನ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ!
ಬೆಂಗಳೂರಿನಲ್ಲಿ ವಾಸ ಇರುವ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಈ ಕಳ್ಳತನದ ವಿಡಿಯೋವನ್ನು ರಿಕ್ಕಿ ಕೇಜ್ ಅವರು ಇನ್ಸಟಾಗ್ರಾಮ್ ನಲ್ಲಿ ಜನರೊಂದಿಗೆ ಮತ್ತು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಮನೆಯ ಗೇಟ್ ಅನ್ನು ತೆಗೆದು ಒಳ ಬರುವ ಯುವಕ ಮನೆ ಮುಂದಿದ್ದ ನೀರಿನ ಸಂಪಿನ ಮುಚ್ಚಳವನ್ನು ಕೆಲವೇ ಸೆಕೆಂಡ್ ಗಳಲ್ಲಿ ತೆಗೆದುಕೊಂಡು ಹೋಂಡಾ ಆ್ಯಕ್ಟೀವ್ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಮನೆಯ ಮುಂದೆ ರಿಕ್ಕಿ ಕೇಜ್ ಸಿಸಿಟಿವಿಗಳನ್ನು ಅಳವಡಿಸಿದ್ದರು. ಈ ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸಂಪೂರ್ಣ ರೆಕಾರ್ಡ್ ಆಗಿದೆ. ವಿಡಿಯೋ ಸಮೇತ ರಿಕ್ಕಿ ಕೇಜ್ ಇನ್ಸಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೋಂಡಾ ಆ್ಯಕ್ಟೀವಾ ಬೈಕ್ ನಂಬರ್ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ಜೋಮೋಟೋ ಡೆಲಿವರಿ ಏಜೆಂಟ್ ಗಳೇ ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಸಂಪ್ ಮುಚ್ಚಳವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ರಿಕ್ಕಿ ಕೇಜ್ ಹೇಳಿದ್ದಾರೆ. ನಮ್ಮ ಮನೆಯಲ್ಲಿ ದರೋಡೆಯಾಗಿದೆ. ಡಿಯರ್ ಜೋಮೋಟೋ ನಿಮ್ಮ ಡ್ರೈವರ್ ಗಳು ಗುರುವಾರ ನಮ್ಮ ಮನೆ ಪ್ರವೇಶ ಮಾಡಿರುವಂತೆ ಕಾಣುತ್ತಿದೆ. ನಮ್ಮ ಮನೆಯ ಸಂಪ್ ಮುಚ್ಚಳವನ್ನು ಕದ್ದಿದ್ದಾರೆ. ಸಂಜೆಯ 6 ಗಂಟೆಯ ವೇಳೆಯಲ್ಲಿ ಈ ಘಟನೆ ನಡೆದಿದೆ. ದಿಟ್ಟವಾಗಿ ಮಾಡಿದ್ದಾರೆ! ಬಹುಶಃ ಇದು ಅವರ ಮೊದಲ ಭಾರಿಯ ಕೃತ್ಯವಲ್ಲ. 15 ನಿಮಿಷ ಮುಂಚೆ ಬಂದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಅತಿಕ್ರಮ ಪ್ರವೇಶ ಮಾಡಿ ಅಪರಾಧ ಮಾಡಿದ್ದಾರೆ. ನೀವು 2 ಆ್ಯಂಗಲ್ ನಲ್ಲಿ ಸಿಸಿಟಿವಿ ದೃಶ್ಯ ನೋಡಬಹುದು. ಆತನ ಮುಖದ ಸ್ಕ್ರೀನ್ ಶಾಟ್ ಅನ್ನು ನೋಡಬಹುದು. ಬೈಕ್ ನಂಬರ್ ಪ್ಲೇಟ್ ಕೂಡ ನೋಡಬಹುದು. ಬೈಕ್ ನಂಬ್ KA03HY8751? ರೆಡ್ ಹೋಂಡಾ ಆ್ಯಕ್ಟೀವಾ . ಈ ವ್ಯಕ್ತಿ ಯಾರೆಂದು ನೆರವು ನೀಡಲು ಬೆಂಗಳೂರು ಪೊಲೀಸರಿಗೆ ಸಾಧ್ಯವೇ? ಎಂದು ಬೆಂಗಳೂರು ಪೊಲೀಸರ ಅಕೌಂಟ್ ಗೆ ಟ್ಯಾಗ್ ಮಾಡಿದ್ದಾರೆ. ಜನರು ಎಚ್ಚರಿಕೆಯಿಂದ ಇರಬೇಕು. ಇದು ನಿಮಗೂ ಕೂಡ ಆಗಬಹುದು! ಎಂದಿದ್ದಾರೆ.
ರಿಕ್ಕಿ ಕೇಜ್ ಭಾರತದ ಮ್ಯೂಸಿಕ್ ಸಂಯೋಜಕರು. ಮೂರು ಭಾರಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರು. ಅಮೆರಿಕಾದ ನಾರ್ತ್ ಕೆರೋಲಿನಾದಲ್ಲಿ ಹುಟ್ಟಿದ ರಿಕ್ಕಿ ಕೇಜ್, 8 ವರ್ಷದವರಿದ್ದಾಗ, ಅವರ ಪೋಷಕರು ಬೆಂಗಳೂರಿಗೆ ಬಂದು ವಾಸಿಸಲಾರಂಭಿಸಿದ್ದರು. ಬೆಂಗಳೂರಿನಲ್ಲಿ ರಿಕ್ಕಿ ಕೇಜ್ ಶಿಕ್ಷಣ ಪಡೆದಿದ್ದಾರೆ.
ರಿಕ್ಕಿ ಕೇಜ್ ಅವರ ಇನ್ಸಟಾಗ್ರಾಮ್ ವಿಡಿಯೋ ಪೋಸ್ಟ್ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ತಾವು ನೋಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us