ಬೆಂಗಳೂರು ಏರ್​​ಪೋರ್ಟ್​ನಲ್ಲಿ ‘ಬಸ್​ ಬೇ’ ವಿವಾದ.. ಇದರ ಅಸಲಿ ಕತೆ ಏನು?

ಬಸ್​ ಬೇ.. ಏರ್ಪೋರ್ಟ್ ಪ್ರಯಾಣಿಕರ ಪಾಲಿಗೆ ಅಚ್ಚುಮೆಚ್ಚಿನ ಸ್ಪಾಟ್​. ಆದ್ರೀಗ ಬಸ್ ಬೇಗಳ ಸಂಖ್ಯೆ ಇಳಿಕೆ ಮಡಾಲಾಗಿದೆ. ಟರ್ಮಿನಲ್ 1ರಲ್ಲಿ 14 ಬಸ್ ಬೇಗಳಿತ್ತು.. ಆದ್ರೀಗ, 7ಕ್ಕೆ ಇಳಿಕೆ ಮಾಡಲಾಗಿದೆ ಏರ್​ಪೋರ್ಟ್​ ಆಡಳಿತ ಮಂಡಳಿಯ ಈ ನಡೆ ಆಕ್ಷೇಪಕ್ಕೆ ಕಾರಣ ಆಗಿದೆ.

author-image
Ganesh Kerekuli
bus bay
Advertisment

ಬಸ್​ ಬೇ.. ಏರ್ಪೋರ್ಟ್ ಪ್ರಯಾಣಿಕರ ಪಾಲಿಗೆ ಅಚ್ಚುಮೆಚ್ಚಿನ ಸ್ಪಾಟ್​. ಆದ್ರೀಗ ಬಸ್ ಬೇಗಳ ಸಂಖ್ಯೆ ಇಳಿಕೆ ಮಡಾಲಾಗಿದೆ.  ಟರ್ಮಿನಲ್ 1ರಲ್ಲಿ 14 ಬಸ್ ಬೇಗಳಿತ್ತು.. ಆದ್ರೀಗ, 7ಕ್ಕೆ ಇಳಿಕೆ ಮಾಡಲಾಗಿದೆ ಏರ್​ಪೋರ್ಟ್​ ಆಡಳಿತ ಮಂಡಳಿಯ ಈ ನಡೆ ಆಕ್ಷೇಪಕ್ಕೆ ಕಾರಣ ಆಗಿದೆ. ಅಷ್ಟೇ ಅಲ್ಲ, ಖಾಸಗಿ ಟ್ಯಾಕ್ಸಿಗಳಿಗೆ ಅನುಕೂಲ ಮಾಡಲು ಬಸ್ ಬೇ ಇಳಿಕೆ ಮಾಡಿದ್ರಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. 

ಬಸ್​ ಬೇ.. ಏರ್ಪೋರ್ಟ್ ಪ್ರಯಾಣಿಕರಿಗೆ ಸುಲಭದ ಸಂಪರ್ಕ ಸಾಧನ ಆಗಿತ್ತು. ಆದ್ರೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ  ಬಸ್ ಬೇಗಳ ಸಂಖ್ಯೆ ಇಳಿಕೆ ಮಾಡಿದೆ. ಅಚ್ಚರಿ ಅಂದ್ರೆ ಟರ್ಮಿನಲ್ 1ರಲ್ಲಿ 14 ಬಸ್ ಬೇಗಳು ಈ ಮೊದಲು ಇತ್ತು... ಆದ್ರೀಗ, 7ಕ್ಕೆ ಇಳಿಕೆ ಮಾಡಲಾಗಿದೆ. 

ಬಸ್ ಬೇ ಎಂದರೇನು?

ವಿಮಾನ ನಿಲ್ದಾಣದ ಆಗಮನ,–ನಿರ್ಗಮನದ ವೇಳೆ ಟರ್ಮಿನಲ್ ಸಮೀಪದಲ್ಲಿರುವ, ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ನಿಲ್ಲುವ ನಿಗದಿತ ಜಾಗವೇ ಬಸ್ ಬೇ

ಏರ್​ಪೋರ್ಟ್​ನಲ್ಲಿ ಈ ರೀತಿ ನಿರ್ಧಾರ ತೆಗೆದುಕೊಂಡಿರುವ ಬೆನ್ನಲ್ಲೇ ವ್ಯಪಾಕ ಟೀಕೆ ವ್ಯಕ್ತವಾಗಿದೆ. ಜೊತೆಗೆ ಖಾಸಗಿ ಟ್ಯಾಕ್ಸಿಗಳಿಗೆ ಅನುಕೂಲ ಮಾಡಲು ಬಸ್ ಬೇ ಇಳಿಕೆ ಮಾಡಿದ್ರಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. 

ಬಸ್​ ಬೇಗಳ ಸಂಖ್ಯೆ ಇಳಿಕೆ!

  • ಬಸ್ ಬೇಗಳ ಇಳಿಕೆಯಿಂದ ಬಿಎಂಟಿಸಿಗೆ ನಷ್ಟ ಆಗುವ ಸಾಧ್ಯತೆ 
  • ಬಸ್ ಬೇ ಇಳಿಕೆಯಿಂದ ವಾಯುವಜ್ರ ಬಸ್ ವಿಸ್ತರಣೆಗೆ ಅಡ್ಡಿ
  • ಏರ್​ಪೋರ್ಟ್​ನಿಂದ 156 ವಾಯುವಜ್ರ ಬಸ್‌ಗಳು ಸಂಚಾರ
  • ಅತ್ತಿಬೆಲೆ, ಜಿಗಣಿ ಸೇರಿದಂತೆ 65 ಕಿ.ಮೀ ವಾಯುವಜ್ರ ಸೇವೆ
  • ಒಂದು ಸಾಲು ಬಸ್​ ಬೇಗಾಗಿ, ಮತ್ತೊಂದು ಟ್ಯಾಕ್ಸಿಗಳಿಗೆ ಮೀಸಲು 
  • ಬಸ್‌ಗಳು ಬಂದ ತಕ್ಷಣವೇ ಹೊರಡುವ ಅನಿವಾರ್ಯತೆ ಇದೆ
  • ಇದರಿಂದ BMTCಗೆ ದಿನಕ್ಕೆ ₹3 ರಿಂದ 4 ಲಕ್ಷ ಆದಾಯ ನಷ್ಟ ಸಾಧ್ಯತೆ
  • ಪ್ರಯಾಣಿಕರು ಅನಿವಾರ್ಯವಾಗಿ ಟ್ಯಾಕ್ಸಿಗೆ ಹೋಗುವ ಪರಿಸ್ಥಿತಿ
  • ವಾಯುವಜ್ರದ ಗರಿಷ್ಠ ದರ ₹430 ಮಾತ್ರ ಟ್ಯಾಕ್ಸಿಗಿಂತ ಕಡಿಮೆ ವೆಚ್ಚ
  • ಏರ್ಪೋರ್ಟ್ ಪ್ರಯಾಣಿಕರಿಗೂ ಹೊರೆಯಾಗುವ ಸಾಧ್ಯತೆ 

ಸದ್ಯ ಏರ್​ಪೋರ್ಟ್​ನ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರಯಾಣಿಕರು ಬಸ್ ಮಿಸ್ ಮಾಡಿಕೊಂಡು ಬಲವಂತವಾಗಿ ಟ್ಯಾಕ್ಸಿಗೆ ಹೋಗುವ ಪರಿಸ್ಥಿತಿಗೆ ಅನುವುಮಾಡಿ ಕೊಡಬೇಡಿ ಅಂತಿದ್ದಾರೆ ಜನ. 

ಇದನ್ನೂ ಓದಿ: ಮನೆ ಕಟ್ಟಲು ಅಗೆಯುತ್ತಿದ್ದಾಗ ಸಿಕ್ಕೇ ಬಿಡ್ತು ನಿಧಿ.. ಪ್ರಾಮಾಣಿಕತೆ ಮೆರೆದರೂ ಕುಟುಂಬಕ್ಕೆ ಎದುರಾಯ್ತು ಗಂಡಾಂತರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Airport BMTC bus bay
Advertisment