/newsfirstlive-kannada/media/media_files/2026/01/16/cauvery-6th-stage-water-dpr-ready-1-2026-01-16-17-58-54.jpg)
ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್ ರೆಡಿ, ಒಪ್ಪಿಗೆ ಬಾಕಿ!
ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದ ಪ್ರದೇಶಗಳು ಹಾಗೂ ಉಪನಗರಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಲಮಂಡಳಿ ರೂಪಿಸಿರುವ ಕಾವೇರಿ 6ನೇ ಹಂತದ ಯೋಜನೆಗೆ ಅನುಮೋದನೆ ನೀಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. 9 ತಿಂಗಳ ಹಿಂದೆಯೇ ಡಿಪಿಆರ್ ಸಿದ್ದವಾಗಿದ್ದು, ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೇ, ರಾಜ್ಯ ಸರಕಾರ ಇನ್ನೂ ಕಾವೇರಿ 6ನೇ ಹಂತದ ಯೋಜನೆಗೆ ಒಪ್ಪಿಗೆ ನೀಡಿಲ್ಲ. ಬರೋಬ್ಬರಿ 6,939 ಕೋಟಿ ರೂಪಾಯಿ ವೆಚ್ಚದಲ್ಲಿ ಕಾವೇರಿ 6ನೇ ಹಂತದ ಯೋಜನೆಯನ್ನು ಜಾರಿಗೊಳಿಸಲು ಡಿಪಿಆರ್ ಸಲ್ಲಿಕೆಯಾಗಿದೆ.
ಕಾವೇರಿ 6ನೇ ಹಂತದ ಯೋಜನೆಯಲ್ಲಿ ಕೆಆರ್‌ಎಸ್ ನಿಂದ 6 ಟಿಎಂಸಿ ಅಡಿ ನೀರು ಅನ್ನು ನಗರ ಪ್ರದೇಶ, ಉಪನಗರ ಪ್ರದೇಶಗಳಿಗೆ ಸರಬರಾಜು ಮಾಡುವ ಪ್ಲ್ಯಾನ್ ಮಾಡಲಾಗಿದೆ. 6 ಟಿಎಂಸಿ ಅಡಿ ನೀರಿನ ಪೈಕಿ 4 ಟಿಎಂಸಿ ಅಡಿ ನೀರು ಅನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ, ಹೊಸದಾಗಿ ನಿರ್ಮಾಣವಾಗುತ್ತಿರುವ ಶಿವರಾಮಕಾರಂತ ಬಡಾವಣೆ ಸೇರಿದಂತೆ ಇತರೆ ಬಡಾವಣೆಗಳಿಗೆ ಪೂರೈಕೆ ಮಾಡಲಾಗುತ್ತೆ. ಉಳಿದ 2 ಟಿಎಂಸಿ ಅಡಿ ನೀರು ಅನ್ನು ಕರ್ನಾಟಕ ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೇಡಿಕೆಯ ಅನುಸಾರ ಮಾದನಾಯಕನಹಳ್ಳಿ, ಹುಣಸಮಾರನಹಳ್ಳಿ, ಚಿಕ್ಕಬಾಣಾವರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ಬಾಶೆಟ್ಟಿಹಳ್ಳಿ ಹಾಗೂ ವಿಜಯಪುರಕ್ಕೆ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ.
ಕಾವೇರಿಯಿಂದ ಸದ್ಯ ವಾರ್ಷಿಕ 29 ಟಿಎಂಸಿ ಅಡಿ ನೀರು ಅನ್ನು ಬೆಂಗಳೂರು ನಗರಕ್ಕಾಗಿ ಪಡೆಯಲಾಗುತ್ತಿದೆ. ಉದ್ದೇಶಿತ ಕಾವೇರಿ 6 ನೇ ಹಂತದ ಯೋಜನೆಯಡಿ 6 ಟಿಎಂಸಿ ಅಡಿ ನೀರು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಾವೇರಿ 6ನೇ ಹಂತದ ಯೋಜನೆಯಡಿ ನಗರ ಹಾಗೂ ಹೊರವಲಯದಲ್ಲಿನ ಪ್ರದೇಶಗಳಿಗೆ ನೀರು ಪೂರೈಸಲು ಡಿಪಿಆರ್ ಸಿದ್ದಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಕೈಗೊಳ್ಳಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಬೆಂಗಳೂರಿನ ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.
ಇನ್ನೂ ಬೆಂಗಳೂರು ನಗರದ ಜನರ ನೀರಿನ ದಾಹ ತಣಿಸಲು ಪ್ರತಿ 10 ವರ್ಷಗಳಿಗೊಂದು ಯೋಜನೆ ತಯಾರಿಸಿ ನೀರು ಪೂರೈಸಲಾಗುತ್ತಿದೆ. ಕಾವೇರಿ 5ನೇ ಹಂತದ ಯೋಜನೆಗೆ 2014 ರಲ್ಲಿ ಚಾಲನೆ ನೀಡಲಾಯಿತು. 2024ರ ಅಕ್ಟೋಬರ್ ನಲ್ಲಿ ಕಾವೇರಿ ನೀರು ಅನ್ನು ನಗರದ ಜನತೆಗೆ 5ನೇ ಹಂತದ ಯೋಜನೆಯಡಿ ಸರಬರಾಜು ಮಾಡಲಾಯಿತು.
/filters:format(webp)/newsfirstlive-kannada/media/media_files/2026/01/16/cauvery-6th-stage-water-dpr-ready-2026-01-16-18-00-24.jpg)
ಈಗ ಕಾವೇರಿ 6ನೇ ಹಂತದ ಯೋಜನೆ ಆರಂಭಿಸಿದರೂ, ಯೋಜನೆ ಪೂರ್ಣವಾಗಿ ಕಾರ್ಯರೂಪಕ್ಕೆ ಬರಲು 10 ವರ್ಷ ಸಮಯ ಅವಕಾಶ ಬೇಕಾಗಬಹುದು. ಯೋಜನೆಗೆ 130 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.
/filters:format(webp)/newsfirstlive-kannada/media/media_files/2026/01/16/cauvery-6th-stage-water-dpr-ready-bwssb-2026-01-16-18-01-21.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us