/newsfirstlive-kannada/media/media_files/2025/10/06/actor-darshan-in-jail-2025-10-06-16-30-23.jpg)
ಜೈಲಿನಲ್ಲಿ ನಟ ದರ್ಶನ್‌ಗೆ ಚಳಿಯ ಕಾಟ
ತುಂಬಾನೇ ಚಳಿ ಇದೆ, ನಾವ್ಯಾರೂ ರಾತ್ರಿ ಮಲಗುತ್ತಿಲ್ಲ ಎಂದು ನಟ ದರ್ಶನ್ ಹೇಳಿದ್ದಾರೆ. ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ನಟ ದರ್ಶನ್ ಹಾಜರಾಗಿದ್ದರು. ಈ ವೇಳೆ ನಟ ದರ್ಶನ್ ಕೋರ್ಟ್ ಜಡ್ಜ್ ಉದ್ದೇಶಿಸಿ ಮಾತನಾಡಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ತುಂಬಾನೇ ಚಳಿ ಇದೆ. ನಾವ್ಯಾರು ರಾತ್ರಿ ವೇಳೆ ಮಲಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತುಂಬಾ ಚಳಿ ಇರುವುದರಿಂದ ಕಂಬಳಿ ಕೊಡಿಸಲು ನಟ ದರ್ಶನ್ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ. ಮನೆಯವರು, ವಕೀಲರು ತಂದ ಕಂಬಳಿಯನ್ನೂ ನೀಡುತ್ತಿಲ್ಲ . ದಯವಿಟ್ಟು ಕಂಬಳಿ ಕೊಡಿಸಿ ಎಂದು ನಟ, ಚಾಲೆಂಜಿಗ್ ಸ್ಟಾರ್ ದರ್ಶನ್ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.
ಪದೇ ಪದೇ ಆದೇಶ ಮಾಡಿದರೂ ಹೀಗ್ಯಾಕೆ ಮಾಡುತ್ತಾರೆ ಎಂದು ಕೋರ್ಟ್ ಜಡ್ಜ್ ಪ್ರಶ್ನಿಸಿದ್ದರು.
ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ ಎಂದು ಜಡ್ಜ್ ವಕೀಲರನ್ನು ಪ್ರಶ್ನಿಸಿದ್ದರು. ಜೈಲು ಅಧಿಕಾರಿಗಳಿಗೆ ನಟ ದರ್ಶನ್ ಹಾಗೂ ಸಹಚರರಿಗೆ ಕಂಬಳಿ ಕೊಡಲು ಕೋರ್ಟ್ ಜಡ್ಜ್ ಸೂಚನೆ ನೀಡಿದ್ದಾರೆ. ಇನ್ನೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆಯನ್ನು ಕೋರ್ಟ್ ಡಿಸೆಂಬರ್ 3 ಕ್ಕೆ ಮುಂದೂಡಿದೆ.
/filters:format(webp)/newsfirstlive-kannada/media/media_files/2025/10/24/bangalore-city-civil-court-2025-10-24-15-45-48.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us