/newsfirstlive-kannada/media/media_files/2025/12/04/bidadi-industrial-area-is-clean-park-award-2025-12-04-14-27-25.jpg)
ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಸ್ವಚ್ಛಾ ಕೈಗಾರಿಕಾ ಪಾರ್ಕ್ ಪ್ರಶಸ್ತಿ ನೀಡಿಕೆ
ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶ ದೇಶದ ಸರ್ಕಾರಿ ಟೆಕ್​ ಪಾರ್ಕ್​​ಗಳಲ್ಲೇ ಅತ್ಯಂತ ಸುಸಜ್ಜಿತ ಟೆಕ್​ ಪಾರ್ಕ್​​​ ಎಂಬ ಕೀರ್ತಿಗೆ ಪಾತ್ರವಾಗಿದೆ. FICCI (ಭಾರತೀಯ ವಾಣಿಜ್ಯಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ) ನಡೆಸಿದ ಮೌಲ್ಯಮಾಪನದಲ್ಲಿ ಸ್ವಚ್ಛ ಕೈಗಾರಿಕಾ ಪಾರ್ಕ್​​ ಅವಾರ್ಡ್​​ ಅನ್ನ ತನ್ನದಾಗಿಸಿಕೊಂಡಿದೆ. 1490.65 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಕೆಐಎಡಿಬಿ ಅಭಿವೃದ್ಧಿಪಡಿಸಿದ ಬಿಡದಿ ಕೈಗಾರಿಕಾ ಪ್ರದೇಶವು, ಎಫ್‌ಐಸಿಸಿಐನ ಸ್ವಚ್ಛ ಕೈಗಾರಿಕಾ ಪಾರ್ಕ್​​ ಪ್ರಶಸ್ತಿಗಳ 2025 ರಲ್ಲಿ ಭಾಗವಹಿಸಿತ್ತು. ದೇಶದ 18 ರಾಜ್ಯಗಳಾದ್ಯಂತ 130 ಕೈಗಾರಿಕಾ ಉದ್ಯಾನವನಗಳನ್ನು ಹಿಂದಿಕ್ಕಿ ಸ್ವಚ್ಛ ಕೈಗಾರಿಕಾ ಪಾರ್ಕ್​​ ಅವಾರ್ಡ್​​ ನ್ನು ಬಿಡದಿ ಕೈಗಾರಿಕಾ ಪ್ರದೇಶ ಪಡೆದುಕೊಂಡಿದೆ. ದೇಶದಲ್ಲೇ ಸುಸಜ್ಜಿತ ಸರ್ಕಾರಿ ಕೈಗಾರಿಕಾ ಉದ್ಯಾನವನಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಅತ್ಯುತ್ತಮ ರಸ್ತೆಗಳು, ಮೂಲಸೌಕರ್ಯ, ಮೀಸಲಾದ ಉದ್ಯಾನವನಗಳು, ಬಫರ್ ಜೋನ್​​ ಮತ್ತು ಬಲವಾದ ಯೋಜನೆಯೊಂದಿಗೆ ಸುಸ್ಥಿರತೆಯ ಮಾನದಂಡಗಳನ್ನ ಹೊಂದಿರುವ ಟೆಕ್​ ಪಾರ್ಕ್​​​ ಅನ್ನೋದು FICCI ನಡೆಸಿದ ಮೌಲ್ಯಮಾಪನದಲ್ಲಿ ಗೊತ್ತಾಗಿದೆ. ಇದೇ ಕಾರಣಕ್ಕೆ KIADB ಅಭಿವೃದ್ಧಿಪಡಿಸಿರುವ ಬಿಡದಿಯ ಕೈಗಾರಿಕಾ ಪ್ರದೇಶ 2025ರ ಸ್ವಚ್ಛ ಕೈಗಾರಿಕಾ ಪಾರ್ಕ್​​ ಅವಾರ್ಡ್​​ ಅನ್ನ ತನ್ನದಾಗಿಸಿಕೊಂಡಿದೆ.
/filters:format(webp)/newsfirstlive-kannada/media/media_files/2025/12/04/bidadi-industrial-area-is-clean-park-award02-2025-12-04-14-29-03.jpg)
ದೆಹಲಿಯ ಭಾರತ್​​​ ಮಂಟಪದಲ್ಲಿ ನಡೆದ ಪ್ರಶಸ್ತಿ ಕಾರ್ಯಕ್ರಮದಲ್ಲಿ KIADB ಪರವಾಗಿ ಭಾಗಿಯಾಗಿದ್ದ ಎಕ್ಸಿಕ್ಯುಟಿವ್​​ ಇಂಜಿನಿಯರ್ (ಡೆವಲಪ್​​ಮೆಂಟ್​ ಆಫೀಸರ್​​) ಕೆ.ವಿ. ಲೀಲಾವತಿ ಪ್ರಶಸ್ತಿಯನ್ನು ಸ್ವೀಕರಿಸಿದ್ರು.
/filters:format(webp)/newsfirstlive-kannada/media/media_files/2025/12/04/bidadi-industrial-area-is-clean-park-award03-2025-12-04-14-29-26.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us